ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇನ್ನು ಈ ಸಿನಿಮಾದಲ್ಲಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ಕೂಡಾ ನಟಿಸಿರುವುದು ವಿಶೇಷ.
ಸುನಿಲ್ ಶೆಟ್ಟಿ ಅವರ ಸಾಲ್ಟ್ ಹಾಗೂ ಪೆಪ್ಪರ್ ಲುಕ್ ನನಗಿಷ್ಟ: ಕಿಚ್ಚ ಸುದೀಪ್ - undefined
ಸುನಿಲ್ ಶೆಟ್ಟಿ ಎಂದರೆ ನನಗೆ ಒಂದು ರೀತಿಯ ಗೌರವ. ಅವರು ಬಹಳ ಪ್ರಾಮಾಣಿಕವಾದ ವ್ಯಕ್ತಿ. ಶೂಟಿಂಗ್ಗೆ ಎಂದೂ ತಡವಾಗಿ ಬರುತ್ತಿರಲಿಲ್ಲ. ಅವರು ಜೊತೆಗಿದ್ದರೆ ನಾನು ಖುಷಿಯಿಂದ ಡ್ಯಾನ್ಸ್ ಮಾಡುತ್ತಿದ್ದೆ ಎಂದು ಕಿಚ್ಚ ಸುದೀಪ್ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರನ್ನು ಹೊಗಳಿದ್ದಾರೆ.

ಸುದೀಪ್ ಜೊತೆ ಸುನಿಲ್ ಶೆಟ್ಟಿ 'ಪೈಲ್ವಾನ್' ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದು ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಕಿಚ್ಚ ಹಂಚಿಕೊಂಡಿದ್ದಾರೆ. ಸುನಿಲ್ ಶೆಟ್ಟಿ ಬಹಳ ಮಾನವೀಯ ಗುಣವುಳ್ಳ ವ್ಯಕ್ತಿ. ಅಲ್ಲದೆ ಶೂಟಿಂಗ್ ಸೆಟ್ಗೆ ಹೇಳಿದ ಸಮಯಕ್ಕೆ ವಿತ್ ಮೇಕಪ್ ಹಾಜರಿರುತ್ತಿದ್ದರು. ಎಲ್ಲರೊಂದಿಗೆ ಹರಟದೆ ಶೂಟಿಂಗ್ ಸೆಟ್ನಲ್ಲಿ ಒಂದೆಡೆ ಅವರ ಪಾಡಿಗೆ ಅವರು ಕುಳಿತಿರುತ್ತಿದ್ದರು. ಬಹಳ ಡೆಡಿಕೇಶನ್ನಿಂದ ಈ ಚಿತ್ರದಲ್ಲಿ ನಟಿಸಿದ್ದಾರೆ. ನಾನಂತೂ ಈ ಚಿತ್ರದಲ್ಲಿ ಪೈಲ್ವಾನ್ ರೀತಿ ಕಾಣುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ ಸುನಿಲ್ ಶೆಟ್ಟಿ ಅವರಂತೂ ಪೈಲ್ವಾನ್ ರೀತಿ ಮಿಂಚಿದ್ದಾರೆ ಎಂದು ಕಿಚ್ಚ ಸುನಿಲ್ ಶೆಟ್ಟಿ ಅವರನ್ನು ಕೊಂಡಾಡಿದರು.
ಅವರ ಸಾಲ್ಟ್ ಹಾಗೂ ಪೆಪ್ಪರ್ ಲುಕ್ ಎಂದರೆ ನನಗೆ ಬಹಳ ಇಷ್ಟ. ಡ್ಯಾನ್ಸ್ ವಿಚಾರಕ್ಕೆ ಬಂದರೆ ಸುನಿಲ್ ಶೆಟ್ಟಿ ನನಗಿಂತಲೂ ಗಾಬರಿ ಪಡುವಂತ ವ್ಯಕ್ತಿ. ಅವರು ಸ್ಪಾಟ್ನಲ್ಲಿ ಇದ್ದರೆ ನಾನು ಅವರ ಸ್ಫೂರ್ತಿಯಿಂದ ಡ್ಯಾನ್ಸ್ ಮಾಡುತ್ತೇನೆ ಎಂದು ಸುನಿಲ್ ಶೆಟ್ಟಿ ಜೊತೆಗಿನ ತಮ್ಮ ಅನುಭವ ಹಂಚಿಕೊಂಡರು.