ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಬಹುನಿರೀಕ್ಷೆ ಹುಟ್ಟಿಸಿದೆ.ಅಗಸ್ಟ್ 29 ರಂದು ಪೈಲ್ವಾನ್ ಸಿನಿಮಾ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ'ಪ್ರಮೋಷನ್ ಮಾಡೋದರಲ್ಲಿ ಬ್ಯುಸಿ ಇದ್ದಾರೆ. ಇದರ ಜತೆಗೆ ಕಿಚ್ಚ ಅವರು 'ಕೋಟಿಗೊಬ್ಬ-3' ಸಿನಿಮಾ ಚಿತ್ರೀಕರಣದಲ್ಲೂ ಕೂಡಾ ತೊಡಗಿಸಿಕೊಂಡಿದ್ದು, ಈಗ ಹೈದರಾಬಾದ್ನಲ್ಲಿ ನೆಲೆಸಿದ್ದಾರೆ.
‘ಬಿಲ್ಲ ರಂಗ ಭಾಷಾ’ಗೂ ಮುನ್ನ ಅನೂಪ್ ಭಂಡಾರಿ ನಿರ್ದೇಶನದಲ್ಲಿ ಕಿಚ್ಚನ ಮತ್ತೊಂದು ಸಿನಿಮಾ..! - undefined
ಅನೂಪ್ ಭಂಡಾರಿ ನಿರ್ದೇಶನದ ಜ್ಯಾಕ್ ಮಂಜುನಾಥ್ ನಿರ್ಮಿಸುತ್ತಿರುವ ಸಿನಿಮಾದಲ್ಲಿ ಕಿಚ್ಚ ಸುದೀಪ್ ನಟಿಸುತ್ತಿದ್ದು ಈ ಸಿನಿಮಾ ನಂತರ ‘ಬಿಲ್ಲ ರಂಗ ಭಾಷಾ’ ಸೆಟ್ಟೇರಲಿದೆ ಎನ್ನಲಾಗಿದೆ.
ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಹೈದರಾಬಾದಿನ ರಾಮೋಜಿ ಫಿಲಂ ಸಿಟಿಯಲ್ಲಿ ಸೆಟ್ ಕೂಡಾ ಹಾಕಲಾಗಿದೆ. ಚಿತ್ರದ ಪ್ರಮುಖ ಸಾಹಸ ದೃಶ್ಯಗಳೊಂದಿಗೆ ಮಾತಿನ ಭಾಗದ ಚಿತ್ರೀಕರಣ ಕೂಡಾ ನಡೆಯುತ್ತಿದೆ. ಬಿಡುವಿನ ವೇಳೆ ಸುದೀಪ್ ಕೆಲ ವಿಷಯಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಅವರು ಹೇಳುವ ಪ್ರಕಾರ ಅನೂಪ್ ಭಂಡಾರಿ ಅವರ ‘ಬಿಲ್ಲ ರಂಗ ಭಾಷಾ’ ಸದ್ಯಕ್ಕೆ ಸೆಟ್ಟೇರುತ್ತಿಲ್ಲ. ಆದರೆ, ಇದೇ ವರ್ಷ ಅಕ್ಟೋಬರ್ನಲ್ಲಿ ಅನೂಪ್ ಭಂಡಾರಿ ಅವರ ನಿರ್ದೇಶನದ ಹಾಗೂ ಜ್ಯಾಕ್ ಮಂಜುನಾಥ್ ನಿರ್ಮಾಣದ ಮತ್ತೊಂದು ಸಿನಿಮಾ ಸೆಟ್ಟೇರುತ್ತಿದೆ. ಸುದೀಪ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಂತರ ’ಬಿಲ್ಲಾ ರಂಗ ಭಾಷಾ’ ಸೆಟ್ಟೇರಲಿದೆಯಂತೆ.
ಸದ್ಯಕ್ಕೆ ಜ್ಯಾಕ್ ಮಂಜುನಾಥ್ ಅವರು ಸುದೀಪ್ ಅವರ ಗೆಟಪ್, ವಸ್ತ್ರಾಲಂಕಾರ, ಚಿತ್ರೀಕರಣದ ಸ್ಥಳಗಳ ಬಗ್ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಿಚ್ಚ ಸುದೀಪ್ ಜೊತೆ ಸೇರಿ ಜ್ಯಾಕ್ ಮಂಜುನಾಥ್ ‘ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾ ನಿರ್ಮಿಸಿದ್ದರು. ಈಗ ಈ ಪೂರ್ಣ ಪ್ರಮಾಣದ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಹಿಂದಿಯಲ್ಲಿ ಸಲ್ಮಾನ್ ಖಾನ್ ಜೊತೆ ‘ದಬಾಂಗ್- 3’ ಸಿನಿಮಾದಲ್ಲಿ ಕಿಚ್ಚ ನಟಿಸುತ್ತಿದ್ದು, ಅದಕ್ಕೂ ಕೂಡಾ ಭರ್ಜರಿ ಸಿದ್ಧತೆ ನಡೆಯುತ್ತಿದೆ.