ಕರ್ನಾಟಕ

karnataka

ETV Bharat / sitara

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದೊಂದಿಗೆ ದುಬೈಗೆ ಪ್ರಯಾಣ ಬೆಳೆಸಿದ ಕಿಚ್ಚ ಸುದೀಪ್​​ - ಅಭಿನಯ ಚಕ್ರವರ್ತಿ

ಕೋಟಿಗೊಬ್ಬ-3 ಚಿತ್ರೀಕರಣಕ್ಕೆಂದು ದುಬೈ ಹೋಗುವ ವಿಮಾನದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಕೂಡಾ ಪ್ರಯಾಣ ಬೆಳೆಸಿದ್ದು, ಈ ವೇಳೆ, ಆಟಗಾರ ತಬ್ರೀಜ್​ ಶಂಸಿ ಕಿಚ್ಚ ಸುದೀಪ್ ಜೊತೆ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​​ ಮಾಡಿದ್ದಾರೆ.

ಕಿಚ್ಚ ಸುದೀಪ್​​

By

Published : Sep 23, 2019, 3:42 PM IST

ಸ್ಯಾಂಡಲ್​​ವುಡ್​​​​ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪೈರಸಿ ಸಮಸ್ಯೆ ನಡುವೆಯೂ 'ಪೈಲ್ವಾನ್' ಗೆದ್ದ ಖುಷಿಯಲ್ಲಿದ್ದಾರೆ. ಇದರೊಂದಿಗೆ ಕಿಚ್ಚ ನಟಿಸಿರುವ ತೆಲುಗಿನ ಬಹುನಿರೀಕ್ಷಿತ ಸಿನಿಮಾ 'ಸೈರಾ ನರಸಿಂಹರೆಡ್ಡಿ' ಅಕ್ಟೋಬರ್ 2 ರಂದು ಬಿಡುಗಡೆ ಆಗುತ್ತಿದೆ.

ಇದರೊಂದಿಗೆ ಅಭಿಮಾನಿಗಳ ನಡುವಿನ ವಾರ್​​​ ಹಾಗೂ ಇನ್ನೂ ಕೆಲ ಬೆಳವಣಿಗೆಗೆಳ ನಡುವೆಯೂ ಕಿಚ್ಚ ಈಗ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಜೊತೆ, ದುಬೈ ವಿಮಾನ ಹತ್ತಿದ್ದಾರೆ. ಸುದೀಪ್ ಏಕೆ ದಿಢೀರ್​ ಅಂತಾ ಕ್ರಿಕೆಟ್ ತಂಡದ ಜೊತೆ ಅದರಲ್ಲೂ, ದಕ್ಷಿಣ ಆಫ್ರಿಕಾ ತಂಡದ ಜೊತೆ ವಿದೇಶಿ ಪ್ರವಾಸ ಹೊರಟಿದ್ದಾರಾ ಅಂತ ಯೋಚಿಸಬೇಡಿ. ಸದ್ಯಕ್ಕೆ ಸುದೀಪ್ ಕೋಟಿಗೊಬ್ಬ-3 ಚಿತ್ರದ ಚಿತ್ರೀಕಣಕ್ಕೆಂದು ಪೋಲ್ಯಾಂಡ್​​​​​​​​​​ನ ವಾರ್ಸಾಗೆ ಪ್ರಯಾಣ ಬೆಳೆಸಿದ್ದಾರೆ. ಈ ಸಮಯದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಟೀಂ ಕೂಡಾ ಕಿಚ್ಚನ ಜೊತೆಯಾಗಿದೆ. ಸುದೀಪ್ ದುಬೈಗೆ ತೆರಳುತ್ತಿದ್ದ ವಿಮಾನದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಕೂಡಾ ಪ್ರಯಾಣ ಮಾಡುತ್ತಿತ್ತು.

ದಕ್ಷಿಣ ಆಫ್ರಿಕಾ ತಂಡದ ತಬ್ರೀಜ್ ಶಂಸಿ ಅದೇ ವಿಮಾನ ಹತ್ತಲಿದ್ದ ಸುದೀಪ್ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್​​​​​​​​​​ಲೋಡ್ ಮಾಡಿದ್ದಾರೆ. ಸುದೀಪ್ ಕೂಡಾ ತಮ್ಮ ಟ್ವಿಟ್ಟರ್​​ನಲ್ಲಿ ಈ ಪೋಟೊ ಶೇರ್ ಮಾಡಿದ್ದಾರೆ. ದುಬೈಗೆ ಹೋಗುತ್ತಿದ್ದ ಫೈಟ್​​​ನಲ್ಲೇ ದಕ್ಷಿಣ ಆಫ್ರಿಕಾ ತಂಡದವನ್ನು ನೋಡಿ ತುಂಬ ಖುಷಿಯಾಯಿತು. ಅವರು ಬೇರೆ ಕಡೆ ಹೊರಟಿದ್ದಾರೆ. ನಾನು ಕೋಟಿಗೊಬ್ಬ-3 ಸಿನಿಮಾದ ಚೇಸಿಂಗ್ ಸೀಕ್ವೆನ್ಸ್​​​​​ನಲ್ಲಿ ಪಾಲ್ಗೊಳ್ಳಲು ವಾರ್ಸಾಗೆ ಹೊರಟಿದ್ದೇನೆ. ಮೊದಲಾರ್ಧ ಚಿತ್ರೀಕರಣ ಬೆಲ್​​​​ಗ್ರೆಡ್​​​​​​ನಲ್ಲಿ ಮುಗಿದಿದೆ‌ ಎಂದು ಪೈಲ್ವಾನ್ ಬರೆದುಕೊಂಡಿದ್ದಾರೆ.

ABOUT THE AUTHOR

...view details