ಕರ್ನಾಟಕ

karnataka

ETV Bharat / sitara

ಕಿಚ್ಚನ ಸ್ಟಾರ್​ಡಮ್​ ಹೆಚ್ಚಿಸಿದ ಫಿಟ್ನೆಸ್​: ಏನಿದರ ಸೀಕ್ರೆಟ್​! - ನಟ ಕಿಚ್ಚ ಸುದೀಪ್ ಮುಂಬರುವ ಸುದ್ದಿ

ಕಿಚ್ಚ ಸುದೀಪ್ ಜಿಮ್ ಹೋಗೋದು, ವರ್ಕ್ ಔಟ್ ಮಾಡೋದು, ಬಾಡಿ ಬಿಲ್ಡ್ ಮಾಡೋದು ಅಂದ್ರೆ ಅಷ್ಟಕ್ಕೇ ಅಷ್ಟೆ. ಹೀಗಂತ ಸುದೀಪ್ ಕೂಡ ಸಾಕಷ್ಟು ಇಂಟ್ರವ್ಯೂ​​​ಗಳಲ್ಲಿ ಜಿಮ್​ಗೂ, ನನಗೂ ಬಹಳ ದೂರ ಅಂತಾ ಹೇಳಿಕೊಂಡಿದ್ದಾರೆ. ಕನಸಿನಲ್ಲೂ ಜಿಮ್ ಬಗ್ಗೆ ಯೋಚನೆ ಮಾಡದ ಕಿಚ್ಚ ಸುದೀಪ್, ಇತ್ತೀಚಿನ ದಿನಗಳಲ್ಲಿ ಬಾಡಿ‌ ಬಿಲ್ಡ್ ಮಾಡಿರುವ ಫೋಟೋಗಳು ಕಿಚ್ಚನ ಸ್ಟಾರ್ ಡಮ್ ಮತ್ತಷ್ಟು ಹೆಚ್ಚಿಸಿದೆ.

kiccha-sudeep
ಕಿಚ್ಚ ಸುದೀಪ್ ಜಿಮ್

By

Published : Sep 14, 2021, 2:24 PM IST

Updated : Sep 14, 2021, 5:27 PM IST

ಕನ್ನಡ ಚಿತ್ರರಂಗದ ಆರು ಅಡಿ ಕಟೌಟ್ ಅಂತಾ ಕರೆಯಿಸಿಕೊಂಡಿರುವ ನಟ ಕಿಚ್ಚ ಸುದೀಪ್, ತನ್ನ ಮಲ್ಟಿ ಟ್ಯಾಲೆಂಟ್​ನಿಂದಾಗಿ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಸ್ಟಾರ್ ಡಮ್ ಹೊಂದಿದ್ದಾರೆ.

ಇನ್ನು ಅವರ ಫಿಟ್ನೆಸ್ ಸೀಕ್ರೆಟ್ ಕೇಳಿದರೆ ಅಚ್ಚರಿ ಆಗುತ್ತದೆ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿನಿಂದ ಇಲ್ಲಿಯವರೆಗೆ ಅದೇ ಸ್ಮಾರ್ಟ್, ಅದೇ ಸ್ಟೈಲಿಷ್ ಲುಕ್​​ ಹೊಂದಿದ್ದಾರೆ. ಕೆಲ ದಿನಗಳ ಹಿಂದೆ 48ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಕಿಚ್ಚನ ಫಿಟ್ನೆಸ್ ಫೋಟೋಗೆ ಕೋಟ್ಯಂತರ ಅಭಿಮಾನಿಗಳು ಫಿದಾ ಆಗಿದ್ದರು.

ಕಿಚ್ಚನ ಸ್ಟಾರ್​ಡಮ್​ ಹೆಚ್ಚಿಸಿದ ಫಿಟ್ನೆಸ್​

ಕಿಚ್ಚ ಸುದೀಪ್ ಜಿಮ್ ಹೋಗೋದು, ವರ್ಕ್ ಔಟ್ ಮಾಡೋದು, ಬಾಡಿ ಬಿಲ್ಡ್ ಮಾಡೋದು ಅಂದ್ರೆ ಅಷ್ಟಕ್ಕೆ ಅಷ್ಟೇ. ಹೀಗಂತಾ ಸುದೀಪ್ ಕೂಡ ಸಾಕಷ್ಟು ಇಂಟರ್​ವ್ಯೂಗಳಲ್ಲಿ ಜಿಮ್​ಗೂ, ನನಗೂ ಬಹಳ ದೂರ ಅಂತಾ ಹೇಳಿಕೊಂಡಿದ್ದಾರೆ. ಕನಸಿನಲ್ಲೂ ಜಿಮ್ ಬಗ್ಗೆ ಯೋಚನೆ ಮಾಡದ ಕಿಚ್ಚ ಸುದೀಪ್, ಇತ್ತೀಚಿನ ದಿನಗಳಲ್ಲಿ ಬಾಡಿ‌ ಬಿಲ್ಡ್ ಮಾಡಿರುವ ಫೋಟೋಗಳು ಕಿಚ್ಚನ ಸ್ಟಾರ್ ಡಮ್ ಮತ್ತಷ್ಟು ಹೆಚ್ಚಿಸಿದೆ.

ಕಿಚ್ಚನಿಗೂ ಫಿಟ್ನೆಸ್ ಆಸಕ್ತಿ ಬರೋದಕ್ಕೆ ಕಾರಣ ಪೈಲ್ವಾನ್ ಸಿನಿಮಾ. ಈ ಚಿತ್ರದಲ್ಲಿ ಕುಸ್ತಿಪಟು ಆಗಿ ಸಿಲ್ವರ್ ಸ್ಕ್ರೀನ್​ನಲ್ಲಿ ರಾರಾಜಿಸಿದ ಸುದೀಪ್ ತಮ್ಮ ಪಾತ್ರಕ್ಕಾಗಿ ಜಿಮ್​ನಲ್ಲಿ ವರ್ಕ್ ಔಟ್ ಮಾಡಿದ್ದಾರೆ.

ಆಗ ಕಿಚ್ಚನಿಗೆ ವರ್ಕ್ ಔಟ್ ಬಗ್ಗೆ ಹೇಳಿಕೊಟ್ಟವರು ಪ್ರಖ್ಯಾತ ಫಿಸಿಕಲ್ ಪ್ರಿಪರೇಷನ್​ ಕೋಚ್ ಆಗಿರುವ ಜೀತ್ ದೇವಯ್ಯ. ಪೈಲ್ವಾನ್ ಸಿನಿಮಾದ ಟೈಮಲ್ಲಿ ಸುದೀಪ್ ಕೂಡ, ಜೀತ್​ ನನ್ನ ಪರ್ಸನಲ್ ಜಿಮ್ ಟ್ರೈನರ್ ಅಂತಾ ಹೇಳಿಕೊಂಡಿದ್ದರು.

ಕಿಚ್ಚನ ಸ್ಟಾರ್​ಡಮ್​ ಹೆಚ್ಚಿಸಿದ ಫಿಟ್ನೆಸ್

ಜೀತ್ ದೇವಯ್ಯ ಹೇಳುವ ಹಾಗೆ, ಸುದೀಪ್ ಪಕ್ಕಾ ಶಿಸ್ತು ಬದ್ಧ ನಾಯಕ ನಟ. ಬಹು ಬೇಗನೆ ನಾನು ಬಾಡಿ ಬಿಲ್ಡ್ ಮಾಡುಬೇಕು ಅಂತಾ ಅಂದುಕೊಂಡುವರಲ್ಲ. ಜಿಮ್​ನಲ್ಲಿ ವರ್ಕ್ ಔಟ್ ಹಾಗೂ ಸ್ಟ್ರೀಟ್ ಡಯಟ್​ನಿಂದಾಗಿ ಇವತ್ತು ಸುದೀಪ್ ಫಿಟ್ನೆಸ್ ಹೊಂದಿದ್ದಾರಂತೆ.
ಕಿಚ್ಚ ಹಾಕಿದ ಎಫರ್ಟ್ ಕೇಳಿದರೆ ಅಚ್ಚರಿ ಪಡ್ತೀರಿ

ಇನ್ನು ಪೈಲ್ವಾನ್ ಸಿನಿಮಾಕ್ಕಾಗಿ ಕಿಚ್ಚ ಹಾಕಿದ ಎಫರ್ಟ್ ಕೇಳಿದರೆ ಅಚ್ಚರಿ ಪಡ್ತೀರಿ. ಜೀತ್ ದೇವಯ್ಯ ಈ ಬಗ್ಗೆ ಹೇಳಿದ್ದು, ಪತ್ರಿ ದಿನ ನಾಲ್ಕು ಗಂಟೆಗೆ ಸುದೀಪ್ ಜಿಮ್​ನಲ್ಲಿ ವರ್ಕ್ ಔಟ್ ಮಾಡ್ತಾ ಇದ್ರಂತೆ. ಇನ್ನು ಶೂಟಿಂಗ್ ಟೈಮಲ್ಲಿ ರಾತ್ರಿ ಒಂದು ಗಂಟೆಯಲ್ಲಿ ವರ್ಕ್ ಔಟ್ ಮಾಡಿರೋ ಉದಾಹರಣೆ ಕೂಡ ಇದೆಯಂತೆ.

ಕಟ್ಟುನಿಟ್ಟಿನ ಡಯಟ್​ ಮಾಡ್ತಿದ್ದರಂತೆ ಸುದೀಪ್​

ಇನ್ನು ವರ್ಕ್​ಔಟ್​ಗೆ ತಕ್ಕಂತೆ ಅಷ್ಟೇ ಕಟ್ಟುನಿಟ್ಟಿನ ಡಯಟ್ ಮಾಡ್ತಾ ಇದ್ದರಂತೆ. ಬೆಳಗ್ಗೆ ವರ್ಕ್​ಔಟ್ ಆದ ಮೇಲೆ ಜ್ಯೂಸ್ ಹಾಗೂ ಬೇಯಿಸಿದ ತರಕಾರಿಗಳನ್ನು ತಿನ್ನುತ್ತಿದ್ದರಂತೆ. ಜೊತೆಗೆ ಓಟ್ಸ್​​​​​​ ಅನ್ನು ಸುದೀಪ್ ಸೇವಿಸುತ್ತಿದ್ದರು ಎಂದು ಹೇಳಿದ್ದಾರೆ.

ಕಿಚ್ಚನ ಸ್ಟಾರ್​ಡಮ್​ ಹೆಚ್ಚಿಸಿದ ಫಿಟ್ನೆಸ್​

ಮಧ್ಯಾಹ್ನ ಊಟಕ್ಕೆ ಸುದೀಪ್ ಉಪ್ಪು ಖಾರ ಇಲ್ಲದ ಚಿಕನ್, ಚಪಾತಿ ಜೊತೆಗೆ ಹಣ್ಣುಗಳನ್ನ ಸೇವಿಸುತ್ತಿದ್ದರು. ಇದನ್ನ ಬಿಟ್ಟು, ರೈಸ್, ಜಂಕ್ ಫುಡ್​ಗಳನ್ನ ಕಂಪ್ಲೀಟ್ ಆಗಿ ಕಿಚ್ಚ ತ್ಯಜಿಸಿದ್ರಂತೆ.

ಇನ್ನು ಸಂಜೆ ಸುದೀಪ್ ವರ್ಕ್ ಔಟ್, ಮುಗಿಸಿದ ಬಳಿಕ ಹಣ್ಣಿನ ಜ್ಯೂಸ್, ಕೆಲವು ಗಂಟೆಗಳು ಆದ್ಮಲೇ ರಾಗಿ ಮುದ್ದೆ ಜೊತೆಗೆ ಉಪ್ಪು ಖಾರ ಇಲ್ಲದ ಚಿಕನ್ ಊಟ ಮಾಡ್ತಾ ಇದ್ರಂತೆ. ಹೀಗೆ ಸತತ 7 ತಿಂಗಳಿಂದ ಹಿಡಿದು 8 ತಿಂಗಳು ಸ್ಟ್ರೀಟ್ ಡಯಟ್ ಫಾಲೋ ಮಾಡಿದ ಕಾರಣ ಸುದೀಪ್ ಬಾಡಿಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಅಂತಾರೆ ಜೀತ್ ದೇವಯ್ಯ.

ಸ್ವಿಮ್ಮಿಂಗ್​​​​​ ತರಬೇತಿಯನ್ನೂ ಪಡೆದಿದ್ದಾರೆ ಕಿಚ್ಚ

ಈ ವರ್ಕ್​ಔಟ್ ಜೊತೆಗೆ ಜೀತ್ ದೇವಯ್ಯ, ಸುದೀಪ್ ಅವರಿಗೆ 8 ತಿಂಗಳ ಕಾಲ ಸ್ವಿಮ್ಮಿಂಗ್ ತರಬೇತಿಯನ್ನು ನೀಡಿದ್ದಾರೆ. ಸದ್ಯ ಜೀತ್ ದೇವಯ್ಯ ಅವರ ಬೇರೆ ಕೆಲಸದಿಂದಾಗಿ ಸುದೀಪ್ ಅವ್ರಿಗೆ ಜಿಮ್ ಟ್ರೈನಿಂಗ್ ಮಾಡ್ತಾ ಇಲ್ಲ. ಆದರೆ ಸುದೀಪ್ ಅವರಲ್ಲಿ ಇರುವ ಛಲ, ಆಸಕ್ತಿ ಬಾಡಿ ಬಿಲ್ಡ್ ಮಾಡಿರೋದಿಕ್ಕೆ ಸಾಧ್ಯ ಅಂತಾರೆ ಜೀತ್ ದೇವಯ್ಯ.

ಒಂದು ಅಚ್ಚರಿಯ ಸಂಗತಿ ಅಂದರೆ ಸುದೀಪ್ ಜಿಮ್‌ಗೆ ಹೋಗಿ ಗಂಟೆಗಟ್ಟಲೆ ಟೈಮ್ ಕಳೆಯಲ್ಲ. ವೇಯ್ಟ್ ಲಿಫ್ಟ್‌ ಎತ್ತುವುದು, ಜಿಮ್‌ನಲ್ಲಿ ಕಸರತ್ತು ಮಾಡುವುದು ಅವರಿಗೆ ಇಷ್ಟವಿಲ್ಲ. ಅದರ ಬದಲಿಗೆ ಫಿಟ್ನೆಸ್‌ಗಾಗಿ ಅವರು ನಿತ್ಯ 2000 ಸ್ಕಿಪ್ಪಿಂಗ್ ಮಾಡುತ್ತಾರೆ. ಜೊತೆಗೆ ಲೆಗ್‌ ಸ್ಟ್ರೆಚ್, ಬ್ಯಾಕ್ ಪುಶಪ್, ಶೋಲ್ಡರ್ ವರ್ಕ್ ಮಾಡುವ ಎಕ್ಸ್​ಕ್ಲ್ಯೂಸಿವ್ ವಿಡಿಯೋ ಈಟಿವಿ ಭಾರತಕ್ಕೆ ಲಭ್ಯವಾಗಿದೆ‌.

Last Updated : Sep 14, 2021, 5:27 PM IST

ABOUT THE AUTHOR

...view details