ಕರ್ನಾಟಕ

karnataka

ETV Bharat / sitara

'ನನ್ನ ಪಾಲಿಗೆ ವರ್ಣಿಸಲಾಗದವರು'.. ದಿಲೀಪ್ ಕುಮಾರ್ ಅಗಲಿಕೆಗೆ ಕಿಚ್ಚ ಕಂಬನಿ - Sudeep Condolence to Dilip Kumar

ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ನಿಧನಕ್ಕೆ ನಟ ಕಿಚ್ಚ ಸುದೀಪ್ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಕಂಬನಿ ಮಿಡಿದಿದ್ದಾರೆ.

Sudeep Condolence to Dilip Kumar
ದಿಲೀಪ್ ಕುಮಾರ್ ನಿಧನ

By

Published : Jul 7, 2021, 12:10 PM IST

ಬಾಲಿವುಡ್​ನ ಹಿರಿಯ ನಟ ದಿಲೀಪ್ ಕುಮಾರ್ ಇಂದು ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಬಾಲಿವುಡ್​​ನ ಎಮೋಷನಲ್ ಹೀರೋ ಅಂತಾನೆ ಪ್ರಖ್ಯಾತಿ ಹೊಂದಿದ್ದ ದಿಲೀಪ್ ಕುಮಾರ್​, ಬೆಳ್ಳಿ ತೆರೆ ಮೇಲೆ ಆರು ದಶಕಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಇಂತಹ ಮಹಾನ್ ನಟನ ನಿಧನಕ್ಕೆ ಸ್ಯಾಂಡಲ್​ವುಡ್​ ನಟ ಕಿಚ್ಚ ಸುದೀಪ್ ಕಂಬನಿ ಮಿಡಿದಿದ್ದಾರೆ.

"ಜಗತ್ತು ಅವರನ್ನು ಸಾರ್ವಕಾಲಿಕ ಶ್ರೇಷ್ಠ ನಟ ಅಂತ ಕರೆಯುತ್ತಿತ್ತು. ದಿಲೀಪ್ ಕುಮಾರ್ ಅವರು ಅದ್ಭುತ ವಾಗ್ಮಿ ಮತ್ತು ಸರಳತೆಯ ವ್ಯಕ್ತಿತ್ವ ಹೊಂದಿದ್ದರು. ಅವರು ಅನೇಕ ತಲೆಮಾರಿನ ನಟರಿಗೆ ಸ್ಫೂರ್ತಿಯಾಗಿದ್ದವರು. ನನ್ನಂತ ನಟರಿಂದ ಅವರನ್ನು ವರ್ಣಿಸಲಾಗದು. ದಂಥ ಕಥೆ ಸದಾ ನಮ್ಮೊಂದಿಗೆ" ಇರಲಿ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details