ಕರ್ನಾಟಕ

karnataka

ETV Bharat / sitara

'ವಿಕ್ರಾಂತ್ ರೋಣ': ಸಿನಿಮಾ ಡಬ್ಬಿಂಗ್ ಮುಗಿಸಿದ ಕಿಚ್ಚ ಸುದೀಪ್.. ಚಿತ್ರದಲ್ಲಿದ್ದಾರೆ ಈ ಸುಂದರ ನಟಿ - Diresctor Anup Bhanari

ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣದ ಡಬ್ಬಿಂಗ್ ಕೆಲಸ ಸಂಪೂರ್ಣ ಮುಗಿದಿದೆ. ಮೂರ್ನಾಲ್ಕು ದಿನಗಳ ಹಿಂದಷ್ಟೇ, ಕಿಚ್ಚ ಸುದೀಪ್​ ವಿಕ್ರಾಂತ್ ರೋಣ ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಪ್ರಾರಂಭಿಸಿದ್ದಾರೆ ಎಂಬ ಸುದ್ದಿಯೊಂದು ಬಂದಿತ್ತು. ಅದೀಗ ಮುಗಿದಿದೆ ಎಂದು ಸ್ವತಃ ಹೇಳಿಕೊಂಡಿದ್ದಾರೆ.

Vikrant Rona
ವಿಕ್ರಾಂತ್ ರೋಣ

By

Published : Jul 1, 2021, 9:56 AM IST

ವಿಕ್ರಾಂತ್ ರೋಣ ಚಿತ್ರದ ನಂತರ ಸುದೀಪ್ ಯಾವೊಂದು ಸಿನಿಮಾ ಸಹ ಒಪ್ಪಿಕೊಂಡಿಲ್ಲ. ಅವರ ಮುಂದಿನ ನಡೆ ಏನು? ಅವರು ಯಾವ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಡುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿ ವಲಯದಲ್ಲಿ ಇದ್ದೇ ಇದೆ. ಆದರೆ, ಸುದೀಪ್ ಮಾತ್ರ ಯಾವೊಂದು ವಿಷಯವನ್ನೂ ಬಿಟ್ಟುಕೊಡುತ್ತಿಲ್ಲ.

ಸದ್ಯದ ಮಟ್ಟಿಗೆ ವಿಕ್ರಾಂತ್ ರೋಣ ಚಿತ್ರದ ಮೇಲೆ ಫೋಕಸ್ ಮಾಡಿರುವ ಅವರು ಬುಧವಾರ ಡಬ್ಬಿಂಗ್ ಕೆಲಸಗಳನ್ನು ಮುಗಿಸಿದ್ದಾರೆ. ಮೂರ್ನಾಲ್ಕು ದಿನಗಳ ಹಿಂದಷ್ಟೇ, ವಿಕ್ರಾಂತ್ ರೋಣ ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಪ್ರಾರಂಭಿಸಿದ್ದಾರೆ ಎಂಬ ಸುದ್ದಿಯೊಂದು ಬಂದಿತ್ತು. ಅದೀಗ ಮುಗಿದಿದೆ ಎಂದು ಸ್ವತಃ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಚಿತ್ರ ನೋಡಿ ಥ್ರಿಲ್ ಆಗಿರುವುದಾಗಿ ಹೇಳಿಕೊಂಡಿದ್ದಾರೆ.

ಈ ಕುರಿತು ಬರೆದುಕೊಂಡಿರುವ ಅವರು, ವಿಕ್ರಾಂತ್ ರೋಣ ಚಿತ್ರಕ್ಕಾಗಿ ನನ್ನ ಡಬ್ಬಿಂಗ್ ಮುಗಿಸಿದ್ದೇನೆ. ಅದೊಂದು ಅದ್ಭುತವಾದ ಅನುಭವ. ಅಷ್ಟೇ ಅಲ್ಲದೆ 3ಡಿ ವರ್ಷನ್​ನಲ್ಲಿ ಕೆಲವು ದೃಶ್ಯಗಳನ್ನು ಸಹ ನೋಡಿದೆ. ವಿಕ್ರಾಂತ್ ರೋಣನ ಜಗತ್ತು ನೋಡಿ ಥ್ರಿಲ್ ಆಗುತ್ತದೆ. ಬಾಕಿ ಉಳಿದಿರುವ ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕೆ ಉತ್ಸುಕನಾಗಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇದನ್ನು ಓದಿ: Bigg Boss: ನಿನ್ನ ಫ್ಯಾನ್ಸ್ Vote ಮಾಡುವುದಿಲ್ಲ, ನಾನು ಹೊರಗೆ ಹೋಗುತ್ತೇನೆ ಎಂದ ದಿವ್ಯಾ ಸುರೇಶ್

ಇನ್ನು, ನಿರ್ದೇಶಕ ಅನೂಪ್ ಭಂಡಾರಿ ಸಹ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ನಮ್ಮ ವಿಕ್ರಾಂತ್ ರೋಣ ಅವರ ಡಬ್ಬಿಂಗ್ ಮುಗಿದಿದೆ. ಅದರಲ್ಲೂ ಸುದೀಪ್ ಅವರು ಇಂಟರ್ವಲ್ ಲೈನ್ ಡಬ್ಬಿಂಗ್ ಮಾಡುವಾಗ, ನಮ್ಮ ಸೌಂಡ್ ಇಂಜಿನಿಯರ್ ಬಕ್ಕೇಶ್ ಅವರಿಗೆ ರೋಮಾಂಚನವಾಯಿತಂತೆ ಎಂದು ಹೇಳಿಕೊಂಡಿದ್ದಾರೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ?

ಎಲ್ಲ ಅಂದುಕೊಂಡಂತೆ ಆಗಿದ್ದರೆ, ವಿಕ್ರಾಂತ್ ರೋಣ ಚಿತ್ರವು ಆಗಸ್ಟ್ 19ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಸದ್ಯದ ಸಂದರ್ಭದಲ್ಲಿ ಹೇಳಿದ ದಿನದಂದು ಚಿತ್ರ ಬಿಡುಗಡೆಯಾಗುವುದು ಸಂಶಯವೇ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಹುತೇಕ ಮುಗಿದಿದ್ದು, ಒಂದು ಹಾಡಿನ ಚಿತ್ರೀಕರಣವಷ್ಟೇ ಬಾಕಿ ಇದೆ.

ಆ ಹಾಡಿನಲ್ಲಿ ಸುದೀಪ್ ಜೊತೆಗೆ ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಹಾಡು ಮುಗಿದರೆ ಚಿತ್ರೀಕರಣ ಸಂಪೂರ್ಣವಾದಂತೆ. ಮೊದಲಿಗೆ ಸುದೀಪ್ ಅಭಿನಯದ ಇನ್ನೊಂದು ಚಿತ್ರ ಕೋಟಿಗೊಬ್ಬ 3 ಬಿಡುಗಡೆಯಾಗಬೇಕಿದ್ದು, ಆ ನಂತರ ವಿಕ್ರಾಂತ್ ರೋಣ ಬಿಡುಗಡೆಯಾಗುವ ಸಾಧ್ಯತೆ ಇದೆ.

ABOUT THE AUTHOR

...view details