ಕರ್ನಾಟಕ

karnataka

ETV Bharat / sitara

ಲವ್‌ ಸ್ಟೋರಿ ಸಿನಿಮಾ ಆಗಿರೋದ್ರಿಂದ ಶಿವಣ್ಣನ ಡಾರ್ಲಿಂಗ್‌ ಅನ್ನಿ: ಹೀರೋಯಿನ್‌ಗೆ ಸುದೀಪ್ ತಮಾಷೆ - Mehrin

ಟಾಲಿವುಡ್ ಮೂಲದ ರಾಮ್ ಧೂಲಿಪುಡಿ 'ನೀ ಸಿಗೋವರೆಗೂ' ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ‌. ಈ ಸಿನಿಮಾ ಮೂಲಕ ಸೌತ್ ಸುಂದರಿ ಮೆಹ್ರೀನ್ ಪಿರ್ಜಾಡಾ ಇದೇ‌ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

kiccha-sudeep- Shivarajkumar
ಕಿಚ್ಚ ಸುದೀಪ್​, ಶಿವರಾಜ್​ ಕುಮಾರ್

By

Published : Aug 18, 2021, 7:16 AM IST

ಭಜರಂಗಿ 2, ಬೈರಾಗಿ, ವೇದಾ.. ಹೀಗೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಇದೀಗ ಅವರ ನಟನೆಯ 124ನೇ ಚಿತ್ರ, ‘ನೀ ಸಿಗೋವರೆಗೂ’ ಸಿನಿಮಾ ಖಾಸಗಿ ಹೊಟೇಲ್​​​ನಲ್ಲಿ ಸೆಟ್ಟೇರಿದೆ.

ಚಿತ್ರದ ಮೊದಲ ಸನ್ನಿವೇಶಕ್ಕೆ ಕಿಚ್ಚ ಸುದೀಪ್ ಕ್ಲ್ಯಾಪ್ ಮಾಡಿದ್ರೆ, ಶ್ರೀಮತಿ ಗೀತಾ ಶಿವರಾಜ್​​​ ಕುಮಾರ್ ಕ್ಯಾಮೆರಾಗೆ ಚಾಲನೆ ನೀಡಿದರು. ಟಾಲಿವುಡ್ ನಿರ್ದೇಶಕ ರಾಮ್ ಧುಲಿಪುಡಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಎಮೋಷನಲ್ ಲವ್ ಸ್ಟೋರಿ ಅಂತಾ ನಿರ್ದೇಶಕರು ಹೇಳಿದ್ದಾರೆ.

ಚಿತ್ರದ ಕುರಿತು ಮಾತನಾಡಿದ ಶಿವರಾಜ್ ​ಕುಮಾರ್, ನನ್ನ ಚಿತ್ರಕ್ಕೆ ಶುಭ ಹಾರೈಸಲು ಬಂದಿರುವ ಸುದೀಪ್ ಅವರಿಗೆ ತುಂಬಾ ಧನ್ಯವಾದ. ಇದೊಂದು ಎಮೋಷನಲ್ ಲವ್ ಸ್ಟೋರಿ.‌ ನನ್ನದು ಇದರಲ್ಲಿ ಎರಡು ರೀತಿ ಪಾತ್ರ. ನಿರ್ದೇಶಕರು ಚಿತ್ರಕಥೆ ಹೆಣೆದಿರುವ ರೀತಿ ತುಂಬಾ ಚೆನ್ನಾಗಿದೆ ಎಂದರು.

ನಟಿ ಮೆಹ್ರಿನ್ ಪ್ರತಿಕ್ರಿಯಿಸಿ, ಇದು ನನ್ನ ಮೊದಲ ಕನ್ನಡ ಸಿನಿಮಾ. ಕನ್ನಡ ಸಿನಿಮಾದಲ್ಲಿ ನಟಿಸುವ ಆಸೆಯಿತ್ತು ಅದು ಈಗ ಈಡೇರುತ್ತಿದೆ. ಮೊದಲ ಸಿನಿಮಾದಲ್ಲಿಯೇ ಶಿವಣ್ಣನ ಜೊತೆಗೆ ನಟಿಸುತ್ತಿರುವುದು ಬಹಳ ಖುಷಿ ತಂದಿದೆ ಎಂದರು.

ಶಿವಣ್ಣ ಅಭಿನಯದ 124ನೇ ಚಿತ್ರಕ್ಕೆ ಕಿಚ್ಚ ಸುದೀಪ್ ಕ್ಲ್ಯಾಪ್

ಆಗ ಸುದೀಪ್ ಮೈಕ್ ಎತ್ತುಕೊಂಡು, ಮೆಹ್ರಿನ್ ಸಿನಿಮಾದ ನಾಯಕಿ ಆದರೆ ಶಿವರಾಜ್ ಕುಮಾರ್ ಅವರನ್ನು ಶಿವಣ್ಣ ಎಂದು ಬಿಟ್ಟರು. ಅದಕ್ಕೆ ನಾನು ಹೇಳುತ್ತಿದ್ದೆ ಶಿವಣ್ಣ ಎಂದರೆ ಬ್ರದರ್ ಎಂದರ್ಥ, ಸಿನಿಮಾದ ನಾಯಕಿ ನೀವು ಬ್ರದರ್ ಎಂದು ಕರೆಯಬೇಡಿ, ತವರಿಗೆ ಬಾ ತಂಗಿ ಸಿನಿಮಾ ಅಲ್ಲ ಇದು, ಲವ್ ಸ್ಟೋರಿ ಸಿನಿಮಾ. ಅದಕ್ಕೆ ನೀವು ಶಿವರಾಜ್ ಕುಮಾರ್ ಅವ್ರನ್ನ ಡಾರ್ಲಿಂಗ್ ಎಂದು ಕರೆಯಿರಿ ಅಂತಾ ನಾಯಕಿ ಮೆಹ್ರಿನ್​​​ಗೆ ಕಿಚಾಯಿಸಿದರು.

ABOUT THE AUTHOR

...view details