ಕರ್ನಾಟಕ

karnataka

ETV Bharat / sitara

ಹುಟ್ಟುಹಬ್ಬದ ಸಂಭ್ರಮದಲ್ಲಿ'ಅಭಿನಯ ಚಕ್ರವರ್ತಿ'... 50ನೇ ವಸಂತಕ್ಕೆ ಕಾಲಿಟ್ಟ ನಟ 'ಕಿಚ್ಚ' ಸುದೀಪ್​​ - ಸುದೀಪ್​ ಹುಟ್ಟುಬ್ಬ

ನಟ ಸುದೀಪ್​ ಅವರಿಗೆ ಇಂದು 50ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಕೊರೊನಾ ವೈರಸ್ ಕಾರಣ ಕಳೆದ ವರ್ಷದಂತೆ ಈ ಸಲವೂ ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲು ಹಿಂದೇಟು ಹಾಕಿರುವ ಅವರು, ಅಭಿಮಾನಿಗಳ ಬಳಿ ಈಗಾಗಲೇ ಮನವಿ ಸಹ ಮಾಡಿಕೊಂಡಿದ್ದಾರೆ.

kiccha sudeep
kiccha sudeep

By

Published : Sep 2, 2021, 3:04 AM IST

ಸ್ಯಾಂಡಲ್​ವುಡ್​ನ ಬಾದ್​ ಶಾ, ಅಭಿನಯ ಚಕ್ರವರ್ತಿ ಸುದೀಪ್​​ ಇಂದು 50ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಅಭಿಮಾನಿಗಳಲ್ಲಿ ಇನ್ನಿಲ್ಲದ ಸಂಭ್ರಮ ಮನೆ ಮಾಡಿದೆ. ಕಿಚ್ಚ ಸುದೀಪ್​​ ಅವರಿಗೆ ಈಗಾಗಲೇ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ಒಂದು ದಿನ ಮುಂಚಿತವಾಗಿ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದಿರುವ ನೀರಜ್​ ಚೋಪ್ರಾ ವಿಶೇಷವಾಗಿ ವಿಶ್​ ಮಾಡಿದ್ದಾರೆ.

ನಟ ಉಪೇಂದ್ರ ಹಾಗೂ ರಚಿತಾ ರಾಮ್​​ ಜೊತೆ ಸುದೀಪ್​

ಹುಚ್ಚ, ಕೆಂಪೇಗೌಡ, ಪೈಲ್ವಾನ್​, ಮುಸ್ಸಂಜೆ ಮಾತು, ಸ್ವಾತಿಮುತ್ತು, ಮೈ ಆಟೋಗ್ರಾಪ್, ರಂಗ SSLC, ಜಸ್ಟ್​​​ ಮಾತ್​ ಮಾತಲ್ಲಿ,ಈಗ, ದಿ ವಿಲನ್​,ಮಾಣಿಕ್ಯ, ರನ್ನ, ಬಚ್ಚನ್​ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟನೆ ಮಾಡಿ ಕೋಟ್ಯಂತರ ಅಭಿಮಾನಿಗಳ ಮನಸು ಗೆದ್ದಿರುವ ನಾಯಕ ಸುದೀಪ್ ಇದೀಗ​ ಬಹು ಬೇಡಿಕೆ ನಟರಲ್ಲಿ ಒಬ್ಬರಾಗಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಸುದೀಪ್​ ಭಾಗಿ

ಇದನ್ನೂ ಓದಿರಿ: ಅಭಿನಯ ಚಕ್ರವರ್ತಿ ಹುಟ್ಟು ಹಬ್ಬಕ್ಕೆ ವಿಶೇಷ ಗಿಫ್ಟ್: ಗೋಲ್ಡನ್ ಹುಡುಗ ನೀರಜ್ ಚೋಪ್ರಾ ಸ್ಪೆಷಲ್ ವಿಶ್​

ಮಹಾಮಾರಿ ಕೊರೊನಾ ವೈರಸ್​ ಕಾರಣದಿಂದಾಗಿ ಅದ್ಧೂರಿ ಹುಟ್ಟುಹಬ್ಬಕ್ಕೆ ನಟ ಸುದೀಪ್​ ಅವರು ಬ್ರೇಕ್​ ಹಾಕಿದ್ದು, ಈಗಾಗಲೇ ತಮ್ಮ ಅಭಿಮಾನಿಗಳಲ್ಲಿ ವಿಡಿಯೋ ಹರಿಬಿಡುವ ಮೂಲಕ ಮನವಿ ಸಹ ಮಾಡಿಕೊಂಡಿದ್ದಾರೆ. ಸಿನಿಮಾ ರಂಗದಲ್ಲಿ 25 ವರ್ಷಗಳ ಕಾಲ ಪೂರೈಸಿರುವ ನಟ ಸುದೀಪ್​, ಅನೇಕ ಏಳು-ಬೀಳು ಕಂಡಿದ್ದಾರೆ. ಸ್ಪರ್ಶ ಚಿತ್ರದ ಮೂಲಕ ನಾಯಕ ನಟನಾಗಿ ಸ್ಯಾಂಡಲ್​ವುಡ್​ಗೆ ಲಗ್ಗೆ ಹಾಕಿರುವ ಇವರು​​ ಇಲ್ಲಿಯವರೆಗೆ ಸುಮಾರು 49ಕ್ಕೂ ಅಧಿಕ ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ.

ವಿಕ್ರಾಂತ್​ ರೋಣ್​ ಚಿತ್ರದಲ್ಲಿ ಸುದೀಪ್​

ಜನ್ಮದಿನಕ್ಕೆ ಸಿಗಲಿದೆ ಬಿಗ್​ ಸರ್ಪ್ರೈಸ್​

'ವಿಕ್ರಾಂತ್ ರೋಣ' ಚಿತ್ರತಂಡ ಸುದೀಪ್​ ಹುಟ್ಟುಹಬ್ಬಕ್ಕೆ ಬಿಗ್​ ಸರ್ಪ್ರೈಸ್​ ನೀಡಲು ಸಜ್ಜಾಗಿದೆ. ನಟ ಸುದೀಪ್‌‌ ನಟನೆಯ 'ವಿಕ್ರಾಂತ್‌‌ ರೋಣ' ಚಿತ್ರದ ಗ್ಲಿಮ್ಸ್ ವಿಡಿಯೋ ರಿಲೀಸ್​ಗೆ ರೆಡಿಯಾಗಿದೆ. ಇಂದು ಬೆಳಗ್ಗೆ 11.05ಕ್ಕೆ 'ಡೆಡ್ ಮ್ಯಾನ್ಸ್ ಆ್ಯಂಥಮ್' ಸಾಂಗ್ ಬಿಡುಗಡೆಯಾಗಲಿದೆ. ಈ ಕುರಿತು ನಟ ಕಿಚ್ಚ ಸುದೀಪ್ ಈಗಾಗಲೇ ಟ್ವೀಟ್​ ಮಾಡಿದ್ದಾರೆ. ವಿಶ್ವದ್ಯಾಂತ ಸದ್ದು ಮಾಡಿರುವ 'ವಿಕ್ರಾಂತ್​ ರೋಣ'ನ ವೈಭವಕ್ಕೆ ಡೆಡ್ ಮ್ಯಾನ್ಸ್ ಆ್ಯಂಥಮ್ ಮತ್ತಷ್ಟು ಪುಷ್ಠಿ ನೀಡಲಿದೆ.

ABOUT THE AUTHOR

...view details