ಕರ್ನಾಟಕ

karnataka

ETV Bharat / sitara

ಸುದೀಪ್ ಸಿನಿಮಾ ಕರಿಯರ್​​​ನಲ್ಲಿ ಬಾಕ್ಸ್​​​ ಆಫೀಸ್​ ಕೊಳ್ಳೆ ಹೊಡೆದ ಚಿತ್ರಗಳಿವು

ಕಿಚ್ಚ ಸುದೀಪ್, ಕ್ರಿಕೆಟ್ ಆಟಗಾರ ಆಗಬೇಕು ಎಂದುಕೊಂಡಿದ್ದವರು ನಟರಾದರು. ಕನ್ನಡ ಚಿತ್ರರಂಗ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು, ಸಿನಿಮಾಗಳಲ್ಲಿ ನಟಿಸುವ ಮೂಲಕ ಸುದೀಪ್ ಕೋಟ್ಯಂತರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿದ್ದಾರೆ. ನಟ, ಖಳನಟನಿರ್ದೇಶಕ, ನಿರ್ಮಾಪಕ, ಗಾಯಕ, ನಿರೂಪಕನಾಗಿ ಕೂಡಾ ಸುದೀಪ್ ಗುರುತಿಸಿಕೊಂಡಿದ್ದಾರೆ.

Kiccha sudeep best movies in his career
ಕಿಚ್ಚ ಸುದೀಪ್ ಉತ್ತಮ ಸಿನಿಮಾಗಳು

By

Published : Jul 24, 2020, 5:48 PM IST

ಕನ್ನಡ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿರುವ ಕಿಚ್ಚ ಸುದೀಪ್ ಚಿತ್ರರಂಗದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಕಷ್ಟದ ದಿನಗಳನ್ನು ಮೆಟ್ಟಿ ಸ್ಯಾಂಡಲ್​​ವುಡ್​ ಬಾದ್​ಷಾ ಎನಿಸಿಕೊಂಡಿದ್ದಾರೆ. ಇನ್ನು ಪ್ರತಿಯೊಬ್ಬ ಸ್ಟಾರ್ ನಟನ ಸಿನಿ ಕರಿಯರ್​​​ನಲ್ಲಿ ಒಂದೊಂದು ಸಿನಿಮಾಗಳು ಒಂದೊಂದು ಮಹತ್ವ ಹೊಂದಿರುತ್ತದೆ. ಸುದೀಪ್ ಸಿನಿ ಕರಿಯರ್​​ನಲ್ಲೂ ಕೆಲವೊಂದು ಸಿನಿಮಾಗಳು ಅವರಿಗೆ ಒಳ್ಳೆ ಹೆಸರು ನೀಡಿವೆ.

ಸುದೀಪ್ ಬಣ್ಣ ಹಚ್ಚಿದ್ದು ಮೊದಲು 'ಬ್ರಹ್ಮ' ಚಿತ್ರಕ್ಕಾದರೂ ಈ ಸಿನಿಮಾ ಪೂರ್ತಿಯಾಗಲಿಲ್ಲ. ನಂತರ 1997 ರಲ್ಲಿ 'ತಾಯವ್ವ' ಚಿತ್ರದಲ್ಲಿ ನಟಿಸುತ್ತಾರೆ. ಆದರೆ ಇದು ಸುದೀಪ್​​​​ಗೆ ಹೇಳಿಕೊಳ್ಳುವಂತ ಹೆಸರು ನೀಡುವುದಿಲ್ಲ. 'ಪ್ರತ್ಯರ್ಥ' ಚಿತ್ರ ಕೂಡಾ ಬ್ರೇಕ್ ನೀಡದಿದ್ದಾಗ ಸುದೀಪ್, ಈ ಚಿತ್ರರಂಗದ ಸಹವಾಸವೇ ಸಾಕು ಎಂದು ನಿರ್ಧರಿಸುತ್ತಾರೆ. ಆ ಸಮಯದಲ್ಲಿ ಅವರಿಗೆ ಸುನಿಲ್ ಕುಮಾರ್ ದೇಸಾಯಿ ಅವರ 'ಸ್ಪರ್ಶ' ಸಿನಿಮಾ ಸ್ವಲ್ಪ ಮಟ್ಟಿಗೆ ಹೆಸರು ನೀಡುತ್ತದೆ. ಸುದೀಪ್ ತಂದೆ ಸಂಜೀವ್​​ ಸರೋವರ್ 1999ರಲ್ಲಿ ಸುಮಾರು ಒಂದೂವರೆ ಕೋಟಿ ರೂಪಾಯಿ ಬಜೆಟ್​​​ನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದರು. ಕ್ಯೂಟ್ ಲವ್ ಸ್ಟೋರಿ ಜೊತೆ ಸುಂದರ ಹಾಡುಗಳು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿತ್ತು. ರೇಖಾ, ಸುಧಾರಾಣಿ ಈ ಚಿತ್ರದಲ್ಲಿ ಸುದೀಪ್ ಜೊತೆ ನಟಿಸಿದ್ದರು. ಚಿತ್ರ ಸುಮಾರು 4 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

ಹುಚ್ಚ

ಈ ಸಿನಿಮಾ ಬಳಿಕ ಸುದೀಪ್​ಗೆ ದೊಡ್ಡ ಮಟ್ಟದ ಬ್ರೇಕ್ ನೀಡಿದ ಸಿನಿಮಾ ಎಂದರೆ ಓಂ ಪ್ರಕಾಶ್ ರಾವ್ ನಿರ್ದೇಶನದ 'ಹುಚ್ಚ'. ಈ ಚಿತ್ರ ಸುದೀಪ್ ಅವರನ್ನು ಸ್ಟಾರ್ ಹೀರೋ ಮಾಡಿತು. 2001 ರಲ್ಲಿ ತೆರೆಕಂಡ ಈ ಸಿನಿಮಾವನ್ನು ರೆಹಮಾನ್ ಎಂಬ ನಿರ್ದೇಶಕ ಸುಮಾರು 2 ಕೋಟಿ ರೂಪಾಯಿ ಬಜೆಟ್​​ನಲ್ಲಿ ನಿರ್ಮಿಸಿದ್ದರು. ಈ ಚಿತ್ರದ ಮೂಲಕ ಸುದೀಪ್ ಅದ್ಭುತ ನಟ ಎಂಬುದು ಎಲ್ಲರಿಗೂ ತಿಳಿಯಿತು. ಆ ವೇಳೆ ಸಿನಿಮಾ 5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

ಮೈ ಆಟೋಗ್ರಾಫ್

ಚಂದು, ಧಮ್, ಸ್ವಾತಿಮುತ್ತು ಚಿತ್ರಗಳಲ್ಲಿ ವಿಭಿನ್ನ ಪಾತ್ರ ಮಾಡಿದ್ದ ಸುದೀಪ್ ನಟ ಮಾತ್ರವಲ್ಲ ನಿರ್ದೇಶಕನಾಗಿ ಕೂಡಾ ಗುರುತಿಸಿಕೊಂಡಿದ್ದು 'ಮೈ ಆಟೋಗ್ರಾಫ್' ಚಿತ್ರದ ಮೂಲಕ. ಈ ಚಿತ್ರದ ಮೂಲಕ ಆ್ಯಕ್ಟರ್, ಡೈರೆಕ್ಟರ್ ಹಾಗೂ ಪ್ರೊಡ್ಯೂಸರ್ ಆಗಿ ಕೂಡಾ ಗುರುತಿಸಿಕೊಂಡರು. ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಮೂಲಕ ಸುದೀಪ್ ಈ ಚಿತ್ರವನ್ನು ತಾವೇ ನಿರ್ಮಿಸಿದ್ದರು. 2006 ರಲ್ಲಿ ಸುಮಾರು 2 ಕೋಟಿ ರೂಪಾಯಿ ಬಜೆಟ್​​​ನಲ್ಲಿ ತಯಾರಾದ 'ಮೈ ಆಟೋಗ್ರಾಫ್' 6 ಕೋಟಿ ರೂಪಾಯಿ ಲಾಭ ಮಾಡಿತು.

ವೀರ ಮದಕರಿ

ಕಿಚ್ಚ ಖಾಕಿ ತೊಟ್ಟು ಅಬ್ಬರಿಸಿದ ಸಿನಿಮಾ 'ವೀರ ಮದಕರಿ'. 2009 ರಲ್ಲಿ ತೆರೆ ಕಂಡ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತು. ಈ ಚಿತ್ರಕ್ಕಾಗಿ ಸುದೀಪ್ ತೂಕ ಇಳಿಸಿಕೊಂಡು ಬಹಳ ಸಣ್ಣ ಆಗಿದ್ದರು. ಇದು ರಾಗಿಣಿ ಅವರ ಮೊದಲ ಸಿನಿಮಾ ಕೂಡಾ. 4 ಕೋಟಿಯ ಈ ಸಿನಿಮಾ ಬಾಚಿಕೊಂಡದ್ದು 8 ಕೋಟಿ ರೂಪಾಯಿ. ಕಾಮಣ್ಣನ ಮಕ್ಕಳು, ಫೂಂಕ್ ಹಿಂದಿ ಸಿನಿಮಾ ನಂತರ ಮತ್ತೆ ಸುದೀಪ್ ಖಾಕಿ ತೊಟ್ಟದ್ದು 'ಕೆಂಪೇಗೌಡ' ಚಿತ್ರದಲ್ಲಿ. ಶಂಕರೇಗೌಡ ನಿರ್ಮಾಣದ ಈ ಚಿತ್ರದಲ್ಲಿ ಮತ್ತೆ ರಾಗಿಣಿ, ಸುದೀಪ್ ಜೊತೆ ಡ್ಯೂಯೆಟ್ ಹಾಡಿದ್ದರು. 7ಕೋಟಿ ರೂಪಾಯಿ ಸಿನಿಮಾ ಬಾಕ್ಸ್​ ಆಫೀಸಿನಲ್ಲಿ 11 ಕೋಟಿ ರೂಪಾಯಿ ಗಳಿಸಿತ್ತು.

ಕೆಂಪೇಗೌಡ

ನಾಯಕ ಮಾತ್ರವಲ್ಲ ಸುದೀಪ್ ಖಳನಟನಾಗಿ ಕೂಡಾ ನಟಿಸಿದ ಚಿತ್ರ ವಾಲಿ. ಈ ಚಿತ್ರದ ನಂತರ ತೆಲುಗಿನ ಎಸ್​. ಎಸ್​. ರಾಜಮೌಳಿ ನಿರ್ದೇಶನದ 'ಈಗ' ಚಿತ್ರದಲ್ಲಿ ಸುದೀಪ್ ನಾಣಿ ಎದುರು ವಿಲನ್ ಆಗಿ ನಟಿಸಿದರು. ನಾಯಕಿ ಸಮಂತಾಳನ್ನು ಕಾಡುವ, ನೊಣದಿಂದ ತೊಂದರೆಗೆ ಒಳಗಾಗುವ ಪಾತ್ರದಲ್ಲಿ ಸುದೀಪ್ ಬಹಳ ಚೆನ್ನಾಗಿ ನಟಿಸಿದ್ದರು. 40 ಕೋಟಿ ರೂಪಾಯಿ ವೆಚ್ಚದ ಈ ಸಿನಿಮಾ 100 ಕೋಟಿ ಲಾಭ ಮಾಡಿದೆ ಎನ್ನಲಾಗಿದೆ.

ಮಾಣಿಕ್ಯ

ಒಂದೊಂದು ಚಿತ್ರಗಳ ಮೂಲಕ ಸ್ಟಾರ್ ವ್ಯಾಲ್ಯೂ ಹೆಚ್ಚಿಸಿಕೊಂಡ ಸುದೀಪ್ 2014 ರಲ್ಲಿ 'ಮಾಣಿಕ್ಯ' ಚಿತ್ರದಲ್ಲಿ ನಟಿಸಿದರು. ಸುದೀಪ್ ಜೊತೆ ಸೇರಿ ಎನ್. ಕುಮಾರ್ ಸುಮಾರು 18 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಿಸಿದರು. ಫ್ಯಾಮಿಲಿ ಸೆಂಟಿಮೆಂಟ್ ಹೊಂದಿದ್ದ ಮಾಣಿಕ್ಯ ಚಿತ್ರ 22 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಗಲ್ಲಾ ಪೆಟ್ಟಿಗೆ ತುಂಬಿಸಿತ್ತು. ಈ ಸಿನಿಮಾ ಯಶಸ್ಸಿನ ನಂತರ ಸುದೀಪ್ ಮತ್ತೊಂದು ಹಿಟ್ ಚಿತ್ರ ಕೊಟ್ಟಿದ್ದು 'ರನ್ನ'. 2015ರಲ್ಲಿ ರಿಲೀಸ್ ಆದ ರನ್ನ ಚಿತ್ರವನ್ನು, ನಿರ್ಮಾಪಕರಾದ ಎಮ್​. ಚಂದ್ರಶೇಖರ್ 20 ಕೋಟಿ ಬಜೆಟ್​​​​​​​​​​​​​​​​​ನಲ್ಲಿ ನಿರ್ಮಾಣ ಮಾಡಿದ್ರು. ರನ್ನ ಬಾಕ್ಸ್ ಆಫೀಸ್​​​​ನಲ್ಲಿ ಕೊಳ್ಳೆ ಹೊಡೆದಿದ್ದು 24 ಕೋಟಿ ರೂಪಾಯಿ.

ರನ್ನ

ಕನ್ನಡ ಸಿನಿಮಾಗಳೊಂದಿಗೆ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡುವ ಜೊತೆಗೆ ಸುದೀಪ್ 'ಕೋಟಿಗೊಬ್ಬ -2' ಸಿನಿಮಾ ಮಾಡಿದ್ರು. ತಮಿಳು ನಿರ್ದೇಶಕ ಕೆ.ಎಸ್. ರವಿಕುಮಾರ್ ನಿರ್ದೇಶನದ, ಈ ಚಿತ್ರವನ್ನು ನಿರ್ಮಾಪಕ ಸೂರಪ್ಪ ಬಾಬು 25 ಕೋಟಿ ಬಜೆಟ್ ನಲ್ಲಿ ಸಿನಿಮಾ ಮಾಡಿದ್ರು. ಈ ಚಿತ್ರ 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

ಪೈಲ್ವಾನ್

ಕಿಚ್ಚ ಡಿಫರೆಂಟ್​ ಹೇರ್​​ಸ್ಟೈಲ್ ಹಾಗೂ ಆರ್ಮಿ ಗೆಟಪ್​​ನಲ್ಲಿ ಕಾಣಿಸಿಕೊಂಡ ಸಿನಿಮಾ 'ಹೆಬ್ಬುಲಿ'. ಉಮಾಪತಿ ಈ ಚಿತ್ರವನ್ನು 30 ಕೋಟಿ ರೂಪಾಯಿ ಬಜೆಟ್​​​ನಲ್ಲಿ ನಿರ್ಮಾಣ ಮಾಡಿದರು. ಈ ಚಿತ್ರದ ನಂತರ ಸುದೀಪ್ ಕುಸ್ತಿ ಅಖಾಡದಲ್ಲಿ ತೊಡೆ ತಟ್ಟಿದ ಸಿನಿಮಾ 'ಪೈಲ್ವಾನ್'. ಚಿತ್ರಕ್ಕಾಗಿ ಸುದೀಪ್ ಬಾಕ್ಸಿಂಗ್, ಕುಸ್ತಿ ಕಲಿತು ನಟಿಸಿದರು. ಚಿತ್ರವನ್ನು ಕೃಷ್ಣ ನಿರ್ದೇಶನ ಮಾಡಿದರೆ, ಪತ್ನಿ ಸ್ವಪ್ನ ಕೃಷ್ಣ ಚಿತ್ರಕ್ಕಾಗಿ 35 ಕೋಟಿ ರೂಪಾಯಿ ಬಂಡವಾಳ ಹೂಡಿದ್ದರು. ಸಿನಿಮಾ 40 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂಬುದು ಗಾಂಧಿನಗರದ ಸಿನಿಪಂಡಿತರ ಅಭಿಪ್ರಾಯ.

ಈಗ

ಸದ್ಯಕ್ಕೆ ಕಿಚ್ಚ 'ಕೋಟಿಗೊಬ್ಬ-3', 'ಫ್ಯಾಂಟಮ್' ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ಇವೆಲ್ಲಾ ಸಿನಿಮಾಗಳು ಕಿಚ್ಚನಿಗೆ ಹೆಸರು , ಹಣ ತಂದುಕೊಟ್ಟ ಸಿನಿಮಾಗಳು.

ABOUT THE AUTHOR

...view details