ಬಾಲಿವುಡ್ ನಟರಾದ ನೀತು ಕಪೂರ್, ವರುಣ್ ಧವನ್ ಮತ್ತು ನಿರ್ದೇಶಕ ರಾಜ್ ಮೆಹ್ತಾಗೆ ಕೊರೊನಾ ಪಾಸಿಟಿವ್ ಧೃಡಪಟ್ಟಿದೆ. ಇವರೆಲ್ಲ ಕಳೆದ ಎರಡು ವಾರಗಳ ಹಿಂದೆ 'ಜುಗ್ ಜುಗ್ ಜೇಯೋ' ಸಿನಿಮಾ ಶೂಟಿಂಗ್ಗಾಗಿ ಚಂಡೀಗಡಕ್ಕೆ ತೆರಳಿದ್ದರು.
ಇನ್ನು ಇದೇ ಚಿತ್ರತಂಡದ ಜೊತೆಗಿದ್ದ ಅನಿಲ್ ಕಪೂರ್, ಕಿಯಾರಾ ಅಡ್ವಾಣಿ ಮತ್ತು ಪ್ರಜಕ್ತಾ ಕೊಲಿಗೆ ಕೊರೊನಾ ನೆಗೆಟಿವ್ ಬಂದಿದೆ. ವರದಿಯ ಪ್ರಕಾರ ನಟರು ಕೊರೊನಾದಿಂದ ಗುಣಮುಖರಾಗುವ ತನಕ ಶೂಟಿಂಗ್ ಸ್ಥಗಿತಗೊಳಿಸಲಾಗಿದೆ.
ಶೂಟಿಂಗ್ ಪ್ರಾರಂಭಿಸುವ ಮುನ್ನ ಎಲ್ಲ ನಟರು ಮತ್ತು ಚಿತ್ರೀಕರಣಲ್ಲಿ ಭಾಗಿಯಾಗುವ ಎಲ್ಲ ಸಿಬ್ಬಂದಿಗೂ ಕೊರೊನಾ ಪರೀಕ್ಷಿಸಲಾಗಿತ್ತು. ಆದ್ರೂ ಇದೀಗ ಕೆಲವರಿಗೆ ಕೊರೊನಾ ಇರುವುದು ದೃಢಪಟ್ಟಿದೆ.
ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿರುವ ಯೂಟ್ಯೂಬ್ ತಾರೆ ಪ್ರಜಕ್ತಾಗೆ ಕೊರೊನಾ ನೆಗೆಟಿವ್ ಬಂದಿದ್ದು, ಈ ಮಾಹಿತಿಯನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟಪಡಿಸಿದ್ದಾರೆ.
ಪ್ರಜಕ್ತಾ ಇನ್ಸ್ಟಾಗ್ರಾಮ್
ಕರಣ್ ಜೋಹತ್ ನಿರ್ಮಾಣ ಮಾಡುತ್ತಿರುವ ಜುಗ್ ಜುಗ್ ಜೇಯೋ ಚಿತ್ರದಲ್ಲಿ ನಟಿಸುತ್ತಿರುವ ನೀತು, 2013ರಲ್ಲಿ ತೆರೆ ಕಂಡಿದ್ದ ಭೇಶರಾಮ್ ಚಿತ್ರದ ಬಳಿಕ ಕಮ್ಬ್ಯಾಕ್ ಮಾಡಿದ್ದಾರೆ.