ಬಾಲಿವುಡ್ಗೆ ಕಪೂರ್ ಕುಟುಂಬದಿಂದ ಮತ್ತೋರ್ವ ಪ್ರತಿಭೆ ಎಂಟ್ರಿ ಕೊಡಲು ಸಿದ್ಧವಾಗಿದ್ದಾರೆ. ನಿರ್ಮಾಪಕ ಬೋನಿ ಕಪೂರ್ ಮತ್ತು ಶ್ರೀದೇವಿ ಅವರ ಪುತ್ರಿ ಖುಷಿ ಕಪೂರ್ ಬಾಲಿವುಡ್ ಪ್ರವೇಶಿಸಲು ಮುಂದಾಗಿರುವ ಯುವ ಪ್ರತಿಭೆ. ಈ ಮೂಲಕ ಕಪೂರ್ ಫ್ಯಾಮಿಲಿಯಿಂದ ಬಾಲಿವುಡ್ಗೆ ಮತ್ತೊಬ್ಬ ಕಲಾವಿದೆ ಪಾದಾರ್ಪಣೆ ಮಾಡಿದಂತಾಗಿದೆ.
ಇತ್ತೀಚೆಗೆ ನಡೆದ ಸಂದರ್ಶನವೊಂದರ ಮಾತನಾಡಿರು ಬೋನಿ ಕಪೂರ್, ನಮ್ಮ ಫ್ಯಾಮಿಲಿಯಿಂದ ಬತ್ತೊಬ್ಬರು ಬಲಿವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. ನನ್ನ ಕಿರಿ ಮಗಳು ಖುಷಿ ಸಿನಿಮಾದಲ್ಲಿ ನಟಿಸಲು ಉತ್ಸುಕಳಾಗಿದ್ದು, ಅತಿ ಶೀಘ್ರದಲ್ಲಿ ಅವರ ಪ್ರವೇಶದ ಬಗ್ಗೆ ಮಾಹಿತಿ ಕೊಡುತ್ತೇವೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಖುಷಿಯ ಸಿನಿಮಾ ಜರ್ನಿ ಬಗ್ಗೆ ಹೇಳುತ್ತೇವೆ ಎಂದಿದ್ದಾರೆ.