ಅಮಿತಾಬ್ ಬಚ್ಚನ್ ಮೊಮ್ಮಗಳಾದ ನವ್ಯ ನವೇಲಿ ನಂದ ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ಸಾರ್ವಜನಿಕಗೊಳಿಸಿದ್ದಾರೆ. ಈ ಮೂಲಕ ಇನ್ಸ್ಟಾಗ್ರಾಮ್ ಖಾತೆಯನ್ನು ಯಾರು ಬೇಕಾದರೂ, ಲಾಗಿನ್ ಆಗದೇ ನೋಡಬಹುದಾಗಿದೆ. ಅಂದರೆ ನವ್ಯಾ ಪೋಸ್ಟ್ ಮಾಡಿರುವ ಫೋಟೋಗಳು ಮತ್ತು ವಿಡಿಯೋಗಳನ್ನು ಯಾರು ಬೇಕಾದರೂ ನೋಡಬಹುದು.
ನವ್ಯ ಒಂದಿಲ್ಲೊಂದು ವಿಚಾರವಾಗಿ ಸುದ್ದಿಯಲ್ಲಿರ್ತಾರೆ. ತಾವು ಸಿನಿಮಾ ಕ್ಷೇತ್ರದಲ್ಲಿ ಇಲ್ಲದಿದ್ದರೂ ಹಲವು ವಿಚಾರವಾಗಿ ಗಮನ ಸೆಳೆಯುತ್ತಿದ್ದಾರೆ. ಈ ಹಿಂದೆ ಈಕೆಯ ಕೆಲವು ಖಾಸಗಿ ಫೋಟೋಗಳು ಸೋರಿಕೆಯಾಗಿದ್ದು, ಬಾಲಿವುಡ್ 'ಮಲಾಲ್' ಚಿತ್ರದ ನಟ ಮೀಜಾನ್ ಜೊತೆಗಿರುವ ಫೋಟೋಗಳು ಪ್ರಣಯ ವದಂತಿಗಳನ್ನು ಸೃಷ್ಟಿಸಿದ್ದವು.