ಕರ್ನಾಟಕ

karnataka

ETV Bharat / sitara

ಬೆದರಿಕೆ ಕರೆ ಮಾಡುತ್ತಿದ್ದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಟಿ ಖುಷ್ಬು ಮನವಿ - Khushbu tweeted to Mamata Banerjee

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ನಟಿ ಖುಷ್ಬು ಟ್ವೀಟ್ ಮಾಡಿ ನನಗೆ ಕೊಲ್ಕತ್ತಾ ವ್ಯಕ್ತಿಯೊಬ್ಬರಿಂದ ಬೆದರಿಕೆ ಕರೆ ಬರುತ್ತಿದ್ದು ಕೂಡಲೇ ಈ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Khushbu
ಖುಷ್ಬು

By

Published : Aug 6, 2020, 9:47 AM IST

ಖುಷ್ಬು, ದಕ್ಷಿಣ ಭಾರತದ ಖ್ಯಾತ ನಟಿ. ಕೆಲವೊಂದು ಹಿಂದಿ ಸಿನಿಮಾಗಳಲ್ಲಿ ಕೂಡಾ ಖುಷ್ಬು ನಟಿಸಿ ಬಾಲಿವುಡ್​​ನಲ್ಲಿ ಕೂಡಾ ಗುರುತಿಸಿಕೊಂಡಿದ್ದಾರೆ. ಸಿನಿಮಾ ಹೊರತುಪಡಿಸಿ ಈ ರಣಧೀರ ಚೆಲುವೆ ರಾಜಕೀಯದಲ್ಲಿ ಕೂಡಾ ಸಕ್ರಿಯರಾಗಿದ್ದಾರೆ.

ಈ ಹಿಂದೆ ಅನೇಕ ಬಾರಿ ಖುಷ್ಬು, ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಪೇಚಿಗೆ ಸಿಲುಕಿದ್ದರು. ಇತ್ತೀಚೆಗೆ ಕೂಡಾ ಅವರ ಆಡಿಯೋ ಒಂದು ವೈರಲ್ ಆಗಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ನನ್ನ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ನಿರ್ಮಾಪಕರೊಬ್ಬರು ಈ ರೀತಿ ಮಾಡುತ್ತಿದ್ದಾರೆ. ಅವರು ಯಾರು ಎಂದು ನನಗೆ ಗೊತ್ತು. ಇದೇ ರೀತಿ ಮುಂದುವರೆದರೆ ತಕ್ಕ ಪಾಠ ಕಲಿಸುತ್ತೇನೆ ಎಂದು ಎಚ್ಚರಿಕೆ ಕೂಡಾ ನೀಡಿದ್ದರು. ಇದೀಗ ಖುಷ್ಬು ಟ್ವೀಟ್​ ಒಂದರ ಮೂಲಕ ಮತ್ತೆ ಎಲ್ಲರ ಗಮನ ಸೆಳೆದಿದ್ದಾರೆ.

ಕೆಲವು ದಿನಗಳಿಂದ ನನಗೆ ಅನಾಮಧೇಯ ವ್ಯಕ್ತಿಯೊಬ್ಬರಿಂದ ಬೆದರಿಕೆ ಕರೆ ಬರುತ್ತಿತ್ತು. ಆ ಕರೆ ಕೋಲ್ಕತ್ತಾದಿಂದ ಬಂದಿರುವುದು ಎಂಬ ವಿಚಾರ ಸ್ಪಷ್ಟವಾಗಿದೆ. ಆದ್ದರಿಂದ ಕೋಲ್ಕತ್ತಾ ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಖುಷ್ಬು ಮನವಿ ಮಾಡಿದ್ದಾರೆ. ಅಲ್ಲದೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕೂಡಾ ಟ್ವೀಟ್ ಮಾಡಿ ಈ ಬಗ್ಗೆ ಗಮನ ಹರಿಸಬೇಕು ಎಂದು ಕೇಳಿಕೊಂಡಿದ್ದಾರೆ.

ABOUT THE AUTHOR

...view details