ಕರ್ನಾಟಕ

karnataka

ETV Bharat / sitara

ಶುಭ ಪುಂಜಾ ಇನ್ಮುಂದೆ ’ಖಾಲಿ ದೋಸೆ ಕಲ್ಪನ’..! - shubha poonja

ಪೂಜಾರಿ ಚಿತ್ರದಿಂದ ಖ್ಯಾತಿ ಹೊಂದಿದ್ದ ಶರಣ್​ ಕಬ್ಬೂರ್​​​ 12 ವರ್ಷಗಳ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ವಾಪಸ್​​ ಆಗಿದ್ದಾರೆ. ಸದ್ಯ ವಿಜಯನಗರ ಕಾಲದ ನಿಧಿ ಪತ್ತೆ ಹಚ್ಚಿದ ವಿಚಾರವೊಂದನ್ನ ಆಧಾರವಾಗಿಟ್ಟುಕೊಂಡು 'ಖಾಲಿ ದೋಸೆ ಕಲ್ಪನ' ಎಂಬ ಶೀರ್ಷಿಕೆ ಮೂಲಕ ಮೋಡಿ ಮಾಡಲು ರೆಡಿಯಾಗಿದ್ದಾರೆ.

ಖಾಲಿ ದೋಸೆ ಕಲ್ಪನ

By

Published : Sep 20, 2019, 11:38 AM IST

ಸ್ಯಾಂಡಲ್​ವುಡ್​ನಲ್ಲಿ ನೀರ್ ದೋಸೆ ಹಾಕಿದ್ದಾಯ್ತು ಸದ್ಯ ದೋಸೆಯ ಹೆಸರನ್ನೇ ಬಳಸಿಕೊಂಡ ಚಿತ್ರತಂಡವೊಂದು ತೆರೆಮೇಲೆ ಬರಲು ಸಿದ್ಧತೆ ನಡೆಸುತ್ತಿದ್ದು, ತನ್ನ ಶಿರ್ಷಿಕೆ ಮೂಲಕ ಗಾಂಧಿ ನಗರದಲ್ಲಿ ಕುತೂಹಲ ಹುಟ್ಟಿಸಿದೆ.

ಪೂಜಾರಿ ಚಿತ್ರದಿಂದ ಖ್ಯಾತಿ ಹೊಂದಿದ್ದ ನಿರ್ದೇಶಕ ಶರಣ್​ ಕಬ್ಬೂರ್​​ ​ 12 ವರ್ಷಗಳ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ವಾಪಸ್​​ ಆಗಿದ್ದಾರೆ. ಸದ್ಯ ವಿಜಯನಗರ ಕಾಲದ ನಿಧಿ ಪತ್ತೆ ಹಚ್ಚುವ ವಿಚಾರವೊಂದನ್ನ ಆಧಾರವಾಗಿಟ್ಟುಕೊಂಡು 'ಖಾಲಿ ದೋಸೆ ಕಲ್ಪನಾ' ಎಂಬ ಶೀರ್ಷಿಕೆ ಮೂಲಕ ಮೋಡಿ ಮಾಡಲು ರೆಡಿಯಾಗಿದ್ದಾರೆ.

ಖಾಲಿ ದೋಸೆ ಕಲ್ಪನ ಚಿತ್ರ

ಇನ್ನು ಇದೊಂದು ಪಕ್ಕಾ ಥ್ರಿಲ್ಲರ್ ಚಿತ್ರವಾಗಿದ್ದು, ಸಿನಿಮಾದಲ್ಲಿ ನಾಯಕಿಯಾಗಿ ಶುಭ ಪೂಂಜಾ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ದೊಡ್ಡ ಬ್ರೇಕ್ ಗಾಗಿ ಕಾಯುತ್ತಿರುವ ಶುಭ ಪೂಂಜಾಗೆ ಇಂತಹದೊಂದ್ದು ಡಿಫ್ರೆಂಟ್ ಚಿತ್ರ ಯಶಸ್ಸು ನೀಡಲಿದೆ ಎನ್ನುವ ಬಲವಾದ ನಂಬಿಕೆ ಇದೆಯಂತೆ.

ಚಿತ್ರದಲ್ಲಿ ಶುಭ ಜೊತೆ ನಾಯಕ ನಟನಾಗಿ ಸಂಜಯ್​ ಗೌಡ ಸ್ಯಾಂಡಲ್​ವುಡ್​ನಲ್ಲಿ ಖಾತೆ ತೆರೆಯಲು ಮುಂದಾಗಿದ್ದಾರೆ. ರಾಜೇಶ್ ಡಿ ಎಸ್ ಮತ್ತು ನಳಿನ ಗೌಡ ನಿರ್ಮಾಣದಲ್ಲಿ ಇದೇ 23 ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಚಿತ್ರಕ್ಕೆ ಶರಣ್ ಕಬ್ಬೂರ್​ ನಿರ್ದೇಶಕ, ಅಭಿಮನ್ ರಾಯ್ ಸಂಗೀತ, ಕ್ಲಿಕ್ ಸೀನು ಛಾಯಾಗ್ರಹಣ, ಕೆ ಎಂ ಪ್ರಕಾಶ್​ ಸಂಕಲನ ಮಾಡಲಿದ್ದಾರೆ.

ABOUT THE AUTHOR

...view details