ನಟಿ ಪ್ರಿಯಾಂಕಾ ಉಪೇಂದ್ರ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನಿನ್ನೆಯಷ್ಟೇ ಪ್ರಿಯಾಂಕಾ ಅಭಿನಯದ ಹೊಸ ಸಿನಿಮಾ 'ಖೈಮರಾ' ಚಿತ್ರದ ಪೋಸ್ಟರನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಸಮಯದಲ್ಲಿ ಚಿತ್ರತಂಡ ಪ್ರಿಯಾಂಕಾಗೆ 'ಲೇಡಿ ಮೆಗಾಸೂಪರ್ ಸ್ಟಾರ್' ಎಂಬ ಬಿರುದು ನೀಡಿದೆ.
ಬರ್ತ್ಡೇ ಗಿಫ್ಟ್ ಆಗಿ ಪ್ರಿಯಾಂಕಾಗೆ ಸಿಕ್ತು ಹೊಸ ಬಿರುದು..! - New name to Priyanka from Khaimara team
'ಖೈಮರಾ' ಚಿತ್ರತಂಡ ಪ್ರಿಯಾಂಕಾ ಉಪೇಂದ್ರ ಅವರಿಗೆ 'ಲೇಡಿ ಮೆಗಾ ಸೂಪರ್ಸ್ಟಾರ್' ಎಂಬ ಬಿರುದು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ, ನನ್ನ ಹುಟ್ಟುಹಬ್ಬಕ್ಕೆ ದೊರೆತ ಒಳ್ಳೆಯ ಗಿಫ್ಟ್ ಇದು ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
'ಖೈಮರಾ' ಮೋಷನ್ ಪೋಸ್ಟರ್ ಬಿಡುಗಡೆ ನಂತರ ಮಾತನಾಡಿದ ನಿರ್ಮಾಪಕ ಮತಿಯಳಗನ್, ''ಪ್ರಿಯಾಂಕಾ ಉಪೇಂದ್ರ ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಟಿ. ಅವರಿಗೆ ನಮ್ಮ ಚಿತ್ರತಂಡದಿಂದ 'ಲೇಡಿ ಮೆಗಾ ಸೂಪರ್ಸ್ಟಾರ್' ಎಂಬ ಬಿರುದು ಕೊಡುತ್ತಿದ್ದೇವೆ'' ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಉಪೇಂದ್ರ, ''ಲೇಡಿ ಮೆಗಾ ಸೂಪರ್ಸ್ಟಾರ್ ಎನ್ನುವ ಬದಲು, ಲೇಡಿ ಮಗಾ ಸೂಪರ್ಸ್ಟಾರ್ ಎಂದು ಕರೆದರೆ ಚೆನ್ನಾಗಿರುತ್ತದೆ. ನನ್ನ ಮಗ ಕೂಡಾ ಹೀರೋ ಆಗ್ತೀನಿ ಎಂದು ಈ ಹಿಂದೆ ಹೇಳಿದ್ದ. ಹಾಗಾಗಿ ಅವರಿಬ್ಬರನ್ನೂ ಸೇರಿಸಿ 'ಲೇಡಿ ಮಗಾ ಸೂಪರ್ಸ್ಟಾರ್' ಎಂದು ಕರೆದರೆ ಚೆನ್ನ'' ಎಂದು ನಗೆಚಟಾಕಿ ಹಾರಿಸಿದರು.
ನಂತರ ಮಾತನಾಡಿದ ಪ್ರಿಯಾಂಕಾ ಉಪೇಂದ್ರ, ''ನನ್ನ ಹುಟ್ಟುಹಬ್ಬಕ್ಕೆ ದೊರೆತ ಬಹಳ ಒಳ್ಳೆಯ ಗಿಫ್ಟ್ ಇದು. ಇದೊಂದು ಒಳ್ಳೆಯ ಚಿತ್ರ ಆಗುತ್ತದೆ ಎಂಬ ನಂಬಿಕೆ ನನಗಿದೆ. ನಿರ್ದೇಶಕ ಗೌತಮ್ ಬಂದು ಕಥೆ ಹೇಳಿದಾಗ ಖುಷಿಯಾಯ್ತು. ಇನ್ನು ಮೋಷನ್ ಪೋಸ್ಟರ್ ಬಹಳ ಚೆನ್ನಾಗಿ ಬಂದಿದೆ. ಅದೇ ರೀತಿ ಸಿನಿಮಾ ಕೂಡಾ ಚೆನ್ನಾಗಿ ಮೂಡಿಬರಲಿ'' ಎಂದು ಹಾರೈಸಿದರು. ಇಂದು ಪ್ರಿಯಾಂಕಾ ಹುಟ್ಟುಹಬ್ಬದ ವಿಶೇಷವಾಗಿ '1980' ಹಾಗೂ 'ಉಗ್ರಾವತಾರ' ಚಿತ್ರಗಳ ಪೋಸ್ಟರ್ಗಳು ಬಿಡುಗಡೆಯಾಗುತ್ತಿವೆ. 'ಉಗ್ರಾವತಾರ' ಚಿತ್ರದಲ್ಲಿ ಪ್ರಿಯಾಂಕಾ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ.