ಅಂತೂ ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ಮುಗಿದಿದೆ. ಇಷ್ಟು ದಿನ ಕೆಜಿಎಫ್-2 ಚಿತ್ರದ ಶೂಟಿಂಗ್ ಯಾವಾಗ ಮುಗಿಯುತ್ತೆ, ಸಿನಿಮಾ ಯಾವಾಗ ತೆರೆ ಕಾಣುತ್ತೆ ಎಂದು ಕಾದು ಕುಳಿತಿದ್ದ ಪ್ರೇಕ್ಷಕ ಪ್ರಭುಗಳಿಗೆ ಒಂದು ಸಮಾಧಾನಕರ ಸುದ್ದಿ ಸಿಕ್ಕಿದೆ. ಕೆಜಿಎಫ್-2 ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿ, ಚಿತ್ರತಂಡದ ಗ್ರೂಪ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಕೊನೆಯ ಶೂಟಿಂಗ್ ಮುಗಿಸಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ನಿರ್ದೇಶಕ ಪ್ರಶಾಂತ್ ನೀಲ್, ಶೂಟಿಂಗ್ ಅದ್ಭುತವಾಗಿ ಮುಗಿದಿದೆ. ಒಂಚೂರು ಸುಸ್ತಾಯಿತಾದ್ರು ಒಳ್ಳೆ ತಂಡದ ಜೊತೆ ಕೆಲಸ ಮಾಡಿರುವ ತೃಪ್ತಿ ಸಿಕ್ಕಿದೆ.