ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-1 ಸಿನಿಮಾ ರೀ ರಿಲೀಸ್ ಆಗುತ್ತಿದೆ. ಈ ಬಗ್ಗೆ ನಿರ್ಮಾಪಕ ರಿತೇಶ್ ಸಿದ್ವಾನಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಮತ್ತೆ ರಿಲೀಸ್ ಆಗ್ತಿದೆ ಕೆಜಿಎಫ್-1 ಸಿನಿಮಾ: ಇಂದಿನಿಂದಲೇ ಪ್ರದರ್ಶನ ಶುರು - ರಾಕಿಂಗ್ಸ್ಟಾರ್ ಯಶ್
ಕೆಜಿಎಫ್ ಚಿತ್ರವನ್ನು ಪಿವಿಆರ್, ಇನಾಕ್ಸ್ ಮತ್ತು ಸಿನಿಪೋಲ್ಗಳಲ್ಲಿ ರೀ ರಿಲೀಸ್ ಮಾಡಲಾಗುತ್ತದೆ. ಇಂದಿನಿಂದ ಸರಿಯಾಗಿ ಒಂದು ವಾರದವರೆಗೆ ಈ ಚಿತ್ರವನ್ನು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ನೋಡಬಹುದು.
ಸಿನಿಮಾ ರೀ ರಿಲೀಸ್ ಬಗ್ಗೆ ಮಾಹಿತಿ ನೀಡಿರುವ ಅವರು, ಕೆಜಿಎಫ್ ಚಿತ್ರವನ್ನು ಪಿವಿಆರ್, ಇನಾಕ್ಸ್ ಮತ್ತು ಸಿನಿಪೋಲ್ಗಳಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಸ್ಯಾನಿಟೈಸರ್, ಮಾಸ್ಕ್ ಮತ್ತು ಸಾಮಾಜಿಕ ಅಂತರದಲ್ಲಿ ಬಂದು ಸಿನಿಮಾವನ್ನು ನೋಡಿ ಎಂದು ಪ್ರೇಕ್ಷಕರಿಗೆ ಮನವಿ ಮಾಡಿದ್ದಾರೆ.
ಲಾಕ್ಡೌನ್ ನಂತ್ರ ಇತ್ತೀಚೆಗಷ್ಟೇ ಚಿತ್ರಮಂದಿರಗಳು ತೆರೆದುಕೊಂಡಿದ್ದು, ಚಿತ್ರ ಪ್ರದರ್ಶನ ನಡೆಯುತ್ತಿದೆ. ಆದ್ರೆ ಸಿನಿಮಾ ವೀಕ್ಷಕರು ಮಾತ್ರ ಹರಿದು ಬರುತ್ತಿಲ್ಲ. ಇದರಿಂದಾಗಿ ಈ ಹಿಂದೆ ದೊಡ್ಡ ಮಟ್ಟದಲ್ಲಿ ಹಿಟ್ ಕೊಟ್ಟಿದ್ದ ಸಿನಿಮಾಗಳನ್ನು ರೀ ರಿಲೀಸ್ ಮಾಡಿದ್ರೆ ಜನರು ಚಿತ್ರಮಂದಿರಗಳತ್ತ ಬರುತ್ತಾರೆ ಎಂಬುದು ಚಿತ್ರಮಂದಿರ ಮಾಲೀಕರ ಮಾತಾಗಿದೆ.