ಕರ್ನಾಟಕ

karnataka

ETV Bharat / sitara

ಸೈಕಲಾಜಿಕಲ್ ಕಥೆ ಹೊಂದಿರುವ 'ಬ್ಲಾಂಕ್' ಸಿನಿಮಾದಲ್ಲಿ ಕೆಜಿಎಫ್ ಗರುಡ! - ಬ್ಲಾಂಕ್ ಸಿನಿಮಾ ಟೀಸರ್ ಬಿಡುಗಡೆ

'ಬ್ಲಾಂಕ್'​​​​​​​​ ಸಿನಿಮಾದ ಟೀಸರ್​ಅನ್ನು ಕೆಜಿಎಫ್ ಸಿನಿಮಾ ವಿಲನ್ ಗರುಡ ಅಲಿಯಾಸ್​​​ ರಾಮ್ ಲಾಂಚ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ಈ‌ ಹೊಸಬರ ಚಿತ್ರಕ್ಕೆ ರಾಮ್​​​ ಒಂದು ಹಾಡು ಹಾಡಿರುವುದು ಕೂಡಾ ವಿಶೇಷ.

Blank movie
'ಬ್ಲ್ಯಾಂಕ್'

By

Published : Dec 24, 2019, 2:27 PM IST

ಸ್ಯಾಂಡಲ್​​​​ವುಡ್​​​ನಲ್ಲಿ ಹೊಸ ಮಾದರಿಯ ಸಿನಿಮಾಗಳು ಸದ್ದು ಮಾಡುತ್ತಿವೆ. ಇದೀಗ 'ಬ್ಲಾಂಕ್'​ ಅಂತ ಟೈಟಲ್ ಇಟ್ಟುಕೊಂಡು ಗಾಂಧಿನಗರದಲ್ಲಿ, ಚಿತ್ರವೊಂದು ಸದ್ದಿಲ್ಲದೆ ಶೂಟಿಂಗ್ ಮುಗಿಸಿ ಬಿಡುಗಡೆಗೂ ರೆಡಿಯಾಗಿದೆ. ಇತ್ತೀಚೆಗೆ ಚಿತ್ರತಂಡ ತಮ್ಮ ಚಿತ್ರದ ಬಗ್ಗೆ ಮಾತನಾಡಲು ಸುದ್ದಿಗೋಷ್ಟಿ ಏರ್ಪಡಿಸಿತ್ತು.

'ಬ್ಲಾಂಕ್' ಟೀಸರ್ ಬಿಡುಗಡೆ

ಸುದ್ದಿಗೋಷ್ಟಿಯಲ್ಲಿ ಯುವ ನಿರ್ದೇಶಕ ಸುಹಾಸ್, ನಟಿ ಕೃಷಿ ತಾಪಂಡ, ಯುವ ನಟರಾದ ಪೂರ್ಣಚಂದ್ರ, ಭರತ್, ನಿರ್ಮಾಪಕರಾದ ಪ್ರಸನ್ನ ಸೇರಿದಂತೆ ಇಡೀ 'ಬ್ಲಾಂಕ್'​​​​​​​​ ಚಿತ್ರತಂಡ ಉಪಸ್ಥಿತಿ ಇತ್ತು. 'ಕನ್ನಡಕ್ಕಾಗಿ ಒಂದನ್ನು ಒತ್ತಿ' ಸಿನಿಮಾ ನಂತರ, ಕೃಷಿ ತಾಪಂಡ ಮುಖ್ಯ ಭೂಮಿಕೆಯಲ್ಲಿ ನಟಿರುವ 'ಬ್ಲಾಂಕ್'​​​​​​​​ ಸಿನಿಮಾದ ಟೀಸರ್​ನ್ನು ಕೆಜಿಎಫ್ ಸಿನಿಮಾ ವಿಲನ್ ಗರುಡ ಅಲಿಯಾಸ್​​​ ರಾಮ್ ಲಾಂಚ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರದಲ್ಲಿ ರಾಮ್​​​​​ ನಟಿಸಿಲ್ಲ. ಆದ್ರೆ ಈ‌ ಹೊಸಬರ ಚಿತ್ರಕ್ಕೆ ಒಂದು ಹಾಡು ಹಾಡಿರುವುದು ವಿಶೇಷ.

'ಬ್ಲಾಂಕ್' ಸಿನಿಮಾದ ದೃಶ್ಯ

ಎಂಜಿನಿಯರಿಂಗ್‌ ಪದವಿ ಮುಗಿಸಿ ಸಿನಿಮಾವನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡಿರುವ ಸುಹಾಸ್‌, ಮೊದಲ ಬಾರಿ ನಿರ್ದೇಶಿಸುತ್ತಿರುವ ಸಿನಿಮಾ ಇದು. ಕೃಷಿ ತಾಪಂಡ ಹೇಳುವ ಪ್ರಕಾರ ಈ‌ ಸಿನಿಮಾ ಡ್ರಗ್ಸ್ ವ್ಯಸನಿಗಳ ಬಗ್ಗೆ ಕಥೆ ಒಳಗೊಂಡಿದೆಯಂತೆ. ಪೂರ್ಣಚಂದ್ರ ಮೈಸೂರು ಹಾಗೂ ಭರತ್ ಈ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಶ್ರೀಶಾಂತ್ ಈ‌ ಸಿನಿಮಾಗೆ ಸಂಗೀತ ನೀಡಿದ್ದು, ಜೆಪಿ ಛಾಯಾಗ್ರಹಣವಿದೆ. ಯುವ ಪ್ರತಿಭೆಗಳಿಗಾಗಿ ನಿರ್ಮಾಪಕ ಪ್ರಸನ್ನ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿರುವ ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ.

'ಬ್ಲಾಂಕ್' ಚಿತ್ರತಂಡ

ABOUT THE AUTHOR

...view details