ಕರ್ನಾಟಕ

karnataka

ETV Bharat / sitara

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್​​​ಗೆ ಇಂಜೆಕ್ಷನ್ ಕಂಡರೆ ಭಯನಾ? - ಕೊರೊನಾ ಲಸಿಕೆ

ಇಂದು ನಾನು ಕೊರೊನಾ ಲಸಿಕೆ ಪಡೆದಿದ್ದೇನೆ. ಯಾರೆಲ್ಲ ಲಸಿಕೆ ಪಡೆದುಕೊಂಡಿಲ್ಲವೋ ಅವರೆಲ್ಲರೂ ಈ ಕೂಡಲೇ ತಮ್ಮ ಕುಟುಂಬ ಸಮೇತರಾಗಿ ಲಸಿಕೆ ಪಡೆದುಕೊಳ್ಳಿ ಎಂದು ಕರೆ ನೀಡಿದ್ದಾರೆ..

kgf-director-prashant-neel
ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್

By

Published : Jun 8, 2021, 5:38 PM IST

ಬೆಂಗಳೂರು :ದೇಶಾದ್ಯಂತ ಜನ ಕೊರೊನಾ ಲಸಿಕೆಯನ್ನ ಇಂಜೆಕ್ಷನ್ ರೂಪದಲ್ಲಿ ಪಡೆಯುತ್ತಿದ್ದಾರೆ. ಅದೇ ರೀತಿ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಲಸಿಕೆ ಪಡೆದುಕೊಂಡಿದ್ದಾರೆ. ಆದರೆ, ಈ ಇಂಜೆಕ್ಷನ್ ತೆಗೆದುಕೊಳ್ಳುವ ವೇಳೆ ನಿರ್ದೇಶಕರು ಹೆದರಿಕೊಂಡ್ರಾ ಎಂಬ ಪ್ರಶ್ನೆ ಮೂಡಿಸುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್

ಓದಿ: ಯೋಗ-ಧ್ಯಾನದಲ್ಲಿ ತಲ್ಲೀನರಾದ ತೇರೆ ನಾಮ್‌ ಚಿತ್ರದ 'ನಿರ್ಜರಾ'.. ಜನರೊಂದಿಗೆ ಬೆರೆಯೋದು ಬಲು 'ಖುಷಿ'

ದೇಶಾದ್ಯಂತ 18 ರಿಂದ 45 ವರ್ಷ ಮೇಲ್ಪಟ್ಟವರು ಕೊರೊನಾ ಲಸಿಕೆ ಪಡೆಯುವಂತೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೊರೊನಾವನ್ನ ಮುಕ್ತ ಮಾಡಲು ಪ್ರತಿಯೊಬ್ಬರು ಕೋವಿಡ್ ಲಸಿಕೆ ಪಡೆಯಬೇಕು ಎಂದು ಮೋದಿಯವರೇ ಹೇಳಿದ್ದಾರೆ.

ಅದರಂತೆ ಜನ ಸಾಮಾನ್ಯರಿಂದ ಹಿಡಿದು, ರಾಜಕಾರಣಿಗಳು, ಬ್ಯುಜಿನೆಸ್ ಮ್ಯಾನ್‌ಗಳು ಹಾಗೂ ಸಿನಿಮಾ ಸೆಲೆಬ್ರಿಟಿಗಳು ಕೊರೊನಾ ಲಸಿಕೆ ಪಡೆಯುತ್ತಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾ ಸೆಲೆಬ್ರಿಟಿಗಳು ಕೊರೊನಾ ಲಸಿಕೆ ಹಾಕಿಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಅದೇ ರೀತಿ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್‌ ಕೂಡ ಲಸಿಕೆ ಪಡೆದಿದ್ದಾರೆ. ಆದರೆ, ಈ ಇಂಜೆಕ್ಷನ್ ತೆಗೆದುಕೊಳ್ಳಲು ನಿರ್ದೇಶಕ ಪ್ರಶಾಂತ್ ನೀಲ್ ಹೆದರಿಕೊಂಡ್ರಾ ಎಂಬ ಪ್ರಶ್ನೆ ಮೂಡಿದೆ.

ಕೈಗೆ ನರ್ಸ್ ಇಂಜೆಕ್ಷನ್ ನೀಡುವಾಗ ಪ್ರಶಾಂತ್ ನೀಲ್ ಅವರು ಬಲಗಡೆಗೆ ತಿರುಗಿ ತಮ್ಮ ಒಂದು ಕೈಯನ್ನು ಕಣ್ಣಿಗೆ ಇಟ್ಟಿದ್ದಾರೆ. ಇದು ಅವರು ಇಂಜೆಕ್ಷನ್ ತೆಗೆದುಕೊಳ್ಳಲು ಭಯಪಟ್ಟುಕೊಂಡಂತೆ ಕಾಣಿಸುತ್ತಿದೆ.

ತಾವು ಲಸಿಕೆ ಪಡೆದ ಫೋಟೋವನ್ನು ಪ್ರಶಾಂತ್ ನೀಲ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೆ, ಇಂದು ನಾನು ಕೊರೊನಾ ಲಸಿಕೆ ಪಡೆದಿದ್ದೇನೆ. ಯಾರೆಲ್ಲ ಲಸಿಕೆ ಪಡೆದುಕೊಂಡಿಲ್ಲವೋ ಅವರೆಲ್ಲರೂ ಈ ಕೂಡಲೇ ತಮ್ಮ ಕುಟುಂಬ ಸಮೇತರಾಗಿ ಲಸಿಕೆ ಪಡೆದುಕೊಳ್ಳಿ ಎಂದು ಕರೆ ನೀಡಿದ್ದಾರೆ.

ಆದರೆ, ನಿರ್ದೇಶಕ ಪ್ರಶಾಂತ್ ನೀಲ್ ಫೋಟೋಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಕಾಮೆಂಟ್ ಬಂದಿವೆ. ಯಾಕೇ ಸಾರ್ ಇಂಜೆಕ್ಷನ್​​ಗೆ ಭಯ ಪಟ್ಟಂಗೆ ಇದೆ ಎಂದು ಕಾಲೆಳೆದಿದ್ದಾರೆ.

ABOUT THE AUTHOR

...view details