ಕೆಜಿಎಫ್ ಕನ್ನಡ ಚಿತ್ರರಂಗ ಅಲ್ಲದೇ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಯಾವಾಗ ಕೆಜಿಎಫ್ ಚಾಪ್ಟರ್ 2 ಸಿನಿಮಾ ರಿಲೀಸ್ ಆಗುತ್ತೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಯಶ್ ಹುಟ್ಟುಹಬ್ಬಕ್ಕೆ ಗುಡ್ ನ್ಯೂಸ್ ನೀಡಲು ಸಿದ್ಧಗೊಂಡಿತು.
ಅಂದರೆ ನಾಳೆ ಯಶ್ ಹುಟ್ಟುಹಬ್ಬ ಇರುವ ಕಾರಣ, 10.18ಕ್ಕೆ ಕೆಜಿಎಫ್ ಚಾಪ್ಟರ್ 2 ಟೀಸರ್ ರಿಲೀಸ್ ಮಾಡೋದಿಕ್ಕೆ ಚಿತ್ರತಂದ ಸಿದ್ಧಗೊಂಡಿತು. ಆದರೆ ಹ್ಯಾಕರ್ಸ್ ಕೆಜಿಎಫ್ ಚಿತ್ರತಂಡಕ್ಕೆ ಶಾಕ್ ನೀಡಿ ಕೆಜಿಎಫ್ ಚಾಪ್ಟರ್ 2 ಟೀಸರ್ ರಿಲೀಸ್ ಮಾಡಿರುವ ಕಾರಣ ಇಂದು ರಾತ್ರಿ 9:29ಕ್ಕೆ ಟೀಸರ್ ಲಾಂಚ್ ಮಾಡಿದೆ.
ಕೆಜಿಎಫ್ ಚಾಪ್ಟರ್ 2 ಟೀಸರ್ ಬಹಳ ಅದ್ಧೂರಿಯಾಗಿ ಮೂಡಿ ಬಂದಿದೆ. ಅಧೀರನಾಗಿ ಸಂಜಯ್ ದತ್, ರಮೀಕಾ ಸೇನ್ ಪಾತ್ರದಲ್ಲಿ ರವೀನಾ ಟಂಡನ್ ಮಿಂಚಿದ್ದಾರೆ. ಇನ್ನು ರಾಕಿ ಬಾಯ್ ಆಗಿ ಯಶ್ ಮಿಂಚು ಹರಿಸಿದ್ದಾರೆ.