ಇಂದು ಬೆಳಗ್ಗೆ 10 ಗಂಟೆಗೆ ಕೆಜಿಎಫ್ ಚಿತ್ರತಂಡ ಅಧೀರನ ಪಾತ್ರಧಾರಿ ಬಗ್ಗೆ ರಿವೀಲ್ ಮಾಡಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಪೋಸ್ಟರ್ ರಿಲೀಸ್ ಮಾಡುವ ಮೂಲಕ ಸಂಜಯ್ ದತ್ ಹುಟ್ಟುಹಬ್ಬಕ್ಕೆ ಚಿತ್ರತಂಡ ಸ್ಪೆಷಲ್ ಆಗಿಯೇ ಗಿಫ್ಟ್ ನೀಡಿದೆ.
ಈ ಪೋಸ್ಟರ್ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ ಇಂಡಿಯಾದ ಟ್ವಿಟರ್ನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಇದು ಚಿತ್ರತಂಡಕ್ಕೆ ಖುಷಿ ತಂದುಕೊಟ್ಟಿದೆ.
ಸಂಜಯ್ ದತ್ ಅವರು ಈ ಪೋಸ್ಟರ್ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಕೆಜಿಎಫ್-2 ಚಿತ್ರದಲ್ಲಿ ಅಧೀರನ ಪಾತ್ರದಲ್ಲಿ ನಟಿಸುತ್ತಿರುವುದು ನಿಜವಾಗಿಯೂ ಖುಷಿ ಮತ್ತು ಉತ್ಸಾಹ ನೀಡಿದೆ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ನ ನಟ ಯಶ್ ಅವರ ಅಕೌಂಟ್‌ಗೆ ಟ್ಯಾಗ್ ಮಾಡಿರುವುದು ಗಮನಾರ್ಹ..
ಸಂಜಯ್ ದತ್ ಅವರ ಅಧೀರನ ಪಾತ್ರದ ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆ ಬಾಲಿವುಡ್ನ ನಟ-ನಟಿಯರು ಫುಲ್ ಖುಷಿಯಾಗಿದ್ದಾರೆ. ಅಧೀರನ ಪೋಸ್ಟರ್ ಹಾಕಿಕೊಂಡು ಸಂಜಯ್ ದತ್ಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸುತ್ತಿದ್ದಾರೆ.