ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ದೇಶದ ಗಮನ ಸೆಳೆದ ಸಿನಿಮಾ ಕೆಜಿಎಫ್. ಎರಡು ವರ್ಷದ ಹಿಂದೆ ವಿಶ್ವದಾದ್ಯಂತ ಇತಿಹಾಸ ಬರೆದ ಕೆಜಿಎಫ್ ಸಿನಿಮಾದ ಸಿಕ್ವೇಲ್ಗೋಸ್ಕರ ಕೋಟ್ಯಂತರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಕಳೆದ ತಿಂಗಳು ಕೆಜಿಎಫ್ ಚಿತ್ರತಂಡ, ರಾಕಿ ಬಾಯ್ ಹುಟ್ಟು ಹಬ್ಬಕ್ಕೆ ಒಂದು ಸರ್ಪ್ರೈಸ್ ಇದೆ ಅಂತಾ ಹೇಳಿತ್ತು. ಕೆಜಿಎಫ್ ಚಾಪ್ಟರ್ 2 ಟೀಸರ್ ಬಿಡುಗಡೆ ದಿನಾಂಕ ಹಾಗೂ ಡೇಟ್‌ನ ಅನೌನ್ಸ್ ಮಾಡಲಾಗಿದೆ. ಇದು ಯಶ್ ಫ್ಯಾನ್ಸ್ ಖುಷಿ ಹೆಚ್ಚಿಸಿದೆ.
ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ ಕೆಜಿಎಫ್ ಸೀಕ್ವೆಲ್ ಟೀಸರ್ 2021ರ ಜನವರಿ 8ಕ್ಕೆ ಬಿಡುಗಡೆಯಾಗಲಿದೆ. ಅವತ್ತು ಯಶ್ ಹುಟ್ಟುಹಬ್ಬದ ದಿನ. ಅಂದು ಬೆಳಗ್ಗೆ 10.18ಕ್ಕೆ ಟೀಸರ್ ಬಿಡುಗಡೆಯಾಗಲಿದೆ. ಸದ್ಯ ಕೆಜಿಎಫ್ ಚಿತ್ರದ ಕೆಲ ಫೋಟೋಗಳನ್ನ ಚಿತ್ರತಂಡ ಹಂಚಿಕೊಂಡಿದೆ.