ಕರ್ನಾಟಕ

karnataka

ETV Bharat / sitara

ಜಂಟಲ್​ ಮನ್​ V/S ಮಾಲ್ಗುಡಿ ಡೇಸ್​​ : ಥಿಯೇಟರ್​​ ಸಮಸ್ಯೆಗೆ ಐತಿಹಾಸಿಕ ಪರಿಹಾರ ಕೊಟ್ಟ ವಾಣಿಜ್ಯ ಮಂಡಳಿ - ಜಂಟಲ್​ ಮನ್​ ಸಿನಿಮಾ

ಸಂತೋಷ್ ಚಿತ್ರಮಂದಿರದಲ್ಲಿ ಮಾರ್ನಿಂಗ್ ಶೋ ಹಾಗೂ ಮ್ಯಾಟನಿ ಶೋದಲ್ಲಿ ಮಾಲ್ಗುಡಿ ಡೇಸ್ ರಿಲೀಸ್ ಆದ್ರೆ ಫಸ್ಟ್ ಶೋ ಹಾಗೂ ನೈಟ್ ಶೋದಲ್ಲಿ ಜಂಟಲ್ ಮನ್ ಚಿತ್ರ ಬಿಡುಗಡೆಯಾಗುತ್ತವೆ.

kG Road theater problem Special
ಜಂಟಲ್​ ಮನ್​ V/S ಮಾಲ್ಗುಡಿ ಡೇಸ್​​

By

Published : Feb 8, 2020, 8:02 AM IST

ಸ್ಯಾಂಡಲ್​​ವುಡ್​​ ಸಿನಿಮಾಗಳಿಗೆ ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳ ಸಮಸ್ಯೆ ಎದುರಾಗುತ್ತಿದೆ. ಯಾವುದಾದರು ಬಹು ನಿರೀಕ್ಷಿತ ಸಿನಿಮಾಗಳು ಒಟ್ಟಿಗೆ ರಿಲೀಸ್​​ ಆದ್ರೆ ಥಿಯೇಟರ್​​ಗಳ ಸಮಸ್ಯೆ ಕಂಡು ಬರುತ್ತದೆ. ಸದ್ಯ ಜಂಂಟಲ್​​ಮನ್​​​ ಮತ್ತು ಮಾಲ್ಗುಡಿ ಡೇಸ್​​ ಸಿನಿಮಾಗಳಿಗೂ ಅದೇ ಪರಿಸ್ಥಿತಿ ಎದುರಾಗಿದೆ. ಆದ್ರಿಂದ ಇಂತಹ ಸಮಸ್ಯೆಯನ್ನು ಪರಿಹರಿಸಲು ವಾಣಿಜ್ಯ ಮಂಡಳಿ ಒಂದೊಳ್ಳೆ ಉಪಾಯ ಮಾಡಿದ್ದು, ಚಂದನ ವನದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.

ಜಂಟಲ್​ ಮನ್​ V/S ಮಾಲ್ಗುಡಿ ಡೇಸ್​​

ಭಾನುವಾರ ಸಂತೋಷ್ ಚಿತ್ರದಲ್ಲಿ ಜಂಟಲ್ ಮನ್ ಚಿತ್ರ ರಿಲೀಸ್ ಮಾಡಲು ಒಪ್ಪಿದ್ದ ಮಾಲೀಕ ಅರುಣ್ ಕುಮಾರ್ ಧಿಡೀರ್ ಅಂತ ಮನಸ್ಸು ಬದಲಿಸಿ ಮುಂಗಡ ಹಣ ಪಡೆದು ಮಾಲ್ಗುಡಿ ಡೇಸ್ ಚಿತ್ರಕ್ಕೆ ಥಿಯೇಟರ್ ಕೊಟ್ಟರು. ಇದರಿಂದ ರೊಚ್ಚಿಗೆದ್ದ ಜಂಟಲ್ ಮನ್ ಚಿತ್ರದ ನಿರ್ಮಾಪಕ ಗುರುದೇಶ್ ಪಾಂಡೆ, ಪ್ರಜ್ಬಲ್ ದೇವರಾಜ್ ಅಭಿಮಾನಿಗಳ ಜೊತೆ ಸೇರಿ ವಾಣಿಜ್ಯ ಮಂಡಳಿ ಮೆಟ್ಟಿಲೇರಿ ಸಂತೋಷ್ ಚಿತ್ರಮಂದಿರ ಬೇಕೇ ಬೇಕು ಎಂದು ಹಠ ಹಿಡಿದು ಕುಳಿತರು.

ಪರಿಸ್ಥಿತಿಯ ಗಂಭೀರತೆ ಅರಿತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಉಪಾಧ್ಯಕ್ಷ ಉಮೇಶ್ ಬಣಕಾರ್, ಕಾರ್ಯದರ್ಶಿ ಎನ್ ಎಮ್ ಸುರೇಶ್ ಎರಡು ಚಿತ್ರದ ನಿರ್ಮಾಪಕರು ಹಾಗೂ ಸಂತೋಷ್ ಚಿತ್ರಮಂದಿರದ ಮಾಲೀಕರ ಜೊತೆ ಮಾತನಾಡಿ, ಸಂತೋಷ್ ಚಿತ್ರಮಂದಿರದಲ್ಲಿ ಮಾರ್ನಿಂಗ್ ಶೋ ಹಾಗೂ ಮ್ಯಾಟನಿ ಮಾಲ್ಗುಡಿ ಡೇಸ್ ರಿಲೀಸ್ ಅದ್ರೆ, ಫ್ಟಸ್ಟ್ ಶೋ ಹಾಗೂ ನೈಟ್ ಶೋದಲ್ಲಿ ಜಂಟಲ್ ಮನ್ ಚಿತ್ರ ಬಿಡುಗಡೆ ಮಾಡುವಂತೆ ಸಂಧಾನ ಮಾಡಿದ್ದಾರೆ. ಈ ನಿರ್ಧಾರ ಕನ್ನಡ ಚಿತ್ರರಂಗದಲ್ಲಿ ಹಿಂದೆಂದೂ ನಡೆದಿರಲಿಲ್ಲ.

ABOUT THE AUTHOR

...view details