ಕರ್ನಾಟಕ

karnataka

ETV Bharat / sitara

ಚಿತ್ರೀಕರಣ ಹಂತದಲ್ಲೇ ಉರಿದು ಬೂದಿಯಾಯ್ತು ಕೇಸರಿ ಸೆಟ್​... ಆಗ ಅಕ್ಕಿ ಟೀಂ​ ಮಾಡಿದ್ದೇನು?

ಒಂದು ಚಿತ್ರ ನಿರ್ಮಾಣದ ಹಿಂದಿರುವ ಕಷ್ಟ ಏನು..? ಅದಕ್ಕಾಗಿ ಚಿತ್ರತಂಡದ ಶ್ರಮ ಎಷ್ಟಿದೆ ಎನ್ನುವುದು ಕೇಸರಿ ಮೇಕಿಂಗ್ ವಿಡಿಯೋದಲ್ಲಿ ರಿವೀಲ್ ಆಗಿದೆ. ನಾಲ್ಕು ತಿಂಗಳು ಶ್ರಮಪಟ್ಟು ನಿರ್ಮಿಸಿದ್ದ  ಸೆಟ್​ ಬೆಂಕಿಗಾಹುತಿಯಾದಾಗ ಟೀಮ್ ಮಾಡಿದ್ದೇನು ಅನ್ನೋದು ಇಲ್ಲಿದೆ.

ಕೇಸರಿ

By

Published : Mar 26, 2019, 8:46 PM IST

ಅಕ್ಷಯ್ ಕುಮಾರ್​​ ಅಭಿನಯದ ಹೊಸ ಸಿನಿಮಾ ಕೇಸರಿ ಸದ್ಯ ನೂರು ಕೋಟಿ ಕ್ಲಬ್​ನತ್ತ ಮುಖ ಮಾಡಿದ್ದು, ಅಕ್ಕಿ ಮತ್ತೊಂದು ಗೆಲುವಿನ ಖುಷಿಯಲ್ಲಿದ್ದಾರೆ.

ಸದ್ಯ ಸಕ್ಸಸ್​ ಸಂಭ್ರಮದಲ್ಲಿರುವ ಕೇಸರಿ ಟೀಮ್​​, ಚಿತ್ರದ ಹಿಂದಿನ ಕಷ್ಟದ ಸನ್ನಿವೇಶ ಒಂದನ್ನು ರಿವೀಲ್ ಮಾಡಿದೆ. ಒಂದು ಸಿನಿಮಾ ಮಾಡುವ ವೇಳೆ ಎದುರಾಗುವ ನಿಜವಾದ ಸವಾಲು ಏನು ಎನ್ನುವುದು ಈ ವಿಡಿಯೋದಲ್ಲಿ ಅಕ್ಷಯ್ ಕುಮಾರ್ ಹೇಳಿದ್ದಾರೆ. ಆ ದಿನ ಏನಾಯ್ತು ಎನ್ನುವುದನ್ನು ಅಕ್ಕಿ ಮಾತಲ್ಲೇ ಕೇಳಿ...

ಕೇಸರಿ ಸಿನಿಮಾ ಪೋಸ್ಟರ್​​

"ನಾವು ಸಾರಾಗಡಿಯಲ್ಲಿ ಬಹುತೇಕ ಶೂಟಿಂಗ್ ಮುಗಿಸಿದ್ದೆವು. ಚಿತ್ರದ ಬಹುಮುಖ್ಯ ಹಾಗೂ ಯುದ್ಧದ ಸನ್ನಿವೇಶವನ್ನು ಚಿತ್ರೀಕರಿಸಲು ತಂಡ ಸಿದ್ಧವಾಗಿತ್ತು. ಕ್ಯಾಮೆರ ರೋಲ್ ಆಗಿತ್ತು. ಅಲ್ಲಿ ಏಳು ಕ್ಯಾಮರಗಳು ಚಿತ್ರೀಕರಣಕ್ಕಾಗಿ ರೋಲ್ ಆಗಿದ್ದವು. ಆಗ ನಡೆದಿದ್ದೇ ಬೇರೆ.

ಬೆಂಕಿಗಾಹುತಿಯಾದ ಕೇಸರಿ ಸೆಟ್

ಜಸ್ಟ್ ಕೆಲವೇ ನಿಮಿಷಗಳು... ಚಿತ್ರೀಕರಣಕ್ಕೆಂದು ನಿರ್ಮಿಸಲಾಗಿದ್ದ ಸಂಪೂರ್ಣ ಸೆಟ್​ ಬೆಂಕಿಗೆ ಆಹುತಿಯಾಗಿತ್ತು. ಶೂಟಿಂಗ್​ ತಂಡದಲ್ಲಿದ್ದವರು ಕಣ್ಮುಚ್ಚಿ ಬಿಡುವುದರ ಒಳಗಾಗಿ ಸೆಟ್​ ಬೂದಿಯಾಗಿತ್ತು."

ಬೆಂಕಿಗಾಹುತಿಯಾದ ಕೇಸರಿ ಸೆಟ್

ಅಕ್ಕಿ ವಿವರಣೆಯನ್ನು ಮುಂದುವರೆಸುವ ಕೇಸರಿ ಚಿತ್ರದ ನಿರ್ದೇಶಕ ಅನುರಾಗ್ ಸಿಂಗ್​," ಇನ್ನೇನು ಹತ್ತರಿಂದ ಹನ್ನೆರಡು ದಿನಗಳ ಶೂಟಿಂಗ್ ನಡೆದಿದ್ದರೆ ಕೇಸರಿಯ ಚಿತ್ರೀಕರಣ ಕಂಪ್ಲೀಟ್ ಆಗುತ್ತಿತ್ತು. ಆದರೆ ಆ ದಿನ ಸೆಟ್ ಸಂಫೂರ್ಣ ಬೆಂಕಿಗೆ ಆಹುತಿಯಾಗಿತ್ತು.

ಬೆಂಕಿಗಾಹುತಿಯಾದ ಕೇಸರಿ ಸೆಟ್

ಆ ದಿನದ ಘಟನೆ ಪ್ರತಿಯೊಬ್ಬರಲ್ಲೂ ಕಣ್ಣೀರು ತರಿಸಿತ್ತು. ನನ್ನ ಪ್ರಕಾರ ಅಲ್ಲಿದ್ದ ಎಲ್ಲರೂ ಅಕ್ಷರಶಃ ಕಣ್ಣೀರಾಗಿದ್ದರು. ಮರುದಿನ ಅಕ್ಷಯ್ ಸರ್ ಬಂದು ಎಲ್ಲವನ್ನೂ ಪರಿಶೀಲಿಸಿ ನನ್ನನ್ನು ಕರೆದು ಆಗಿದ್ದು ಆಗಿಹೋಯಿತು, ಮುಂದೇನಾಗಬೇಕು ಎನ್ನುವುದನ್ನು ಪ್ಲಾನ್ ಮಾಡೋಣ ಎಂದರು.

ಕೇಸರಿ ಚಿತ್ರತಂಡ

ನಂತರ ಮುಂಬೈನಲ್ಲಿ ಭಾಗಶಃ ಸೆಟ್ ನಿರ್ಮಾಣ ಮಾಡಿ ಉಳಿದಂತೆ ವಿಎಫ್​ಎಕ್ಸ್ ಮೂಲಕ ಯುದ್ಧದ ಸನ್ನಿವೇಶವನ್ನು ಚಿತ್ರೀಕರಿಸಲಾಯಿತು.

ಹೀಗೆ ಕೇಸರಿ ಚಿತ್ರದ ಹಿಂದಿನ ನೋವಿನ ಕಥೆಯನ್ನು ನಟ ಅಕ್ಷಯ್ ಕುಮಾರ್ ಹಾಗೂ ನಿರ್ದೇಶಕ ಅನುರಾಗ್ ಸಿಂಗ್ ಮೇಕಿಂಗ್ ವಿಡಿಯೋದಲ್ಲಿ ವಿವರಿಸಿದ್ದಾರೆ.

ABOUT THE AUTHOR

...view details