ಕರ್ನಾಟಕ

karnataka

ETV Bharat / sitara

ಸನ್ನಿ ಲಿಯೋನ್ ವಿರುದ್ಧ ವಂಚನೆ ಆರೋಪ; ಹೇಳಿಕೆ ದಾಖಲಿಸಿದ ಪೊಲೀಸ್​​​ - financial fraud case

ಸನ್ನಿ ಲಿಯೋನ್​​ ಕಾರ್ಯಕ್ರಮದ ಆಯೋಜಕರಿಗೆ ಹಣ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಕೇರಳದ ಕೊಚ್ಚಿ ಕ್ರೈಮ್​ ಬ್ರ್ಯಾಂಚ್​​ ನಟಿಯ ಹೇಳಿಕೆ​​​ ದಾಖಲಿಸಿಕೊಂಡಿದೆ.

ಹಣ ವಂಚನೆ ಹಿನ್ನೆಲೆ : ಸನ್ನಿ ಲಿಯೋನ್​ ಹೇಳಿಕೆ ದಾಖಲಿಸಿದ ಕೇರಳ ಪೊಲೀಸ್​​​​
ಹಣ ವಂಚನೆ ಹಿನ್ನೆಲೆ : ಸನ್ನಿ ಲಿಯೋನ್​ ಹೇಳಿಕೆ ದಾಖಲಿಸಿದ ಕೇರಳ ಪೊಲೀಸ್​​​​

By

Published : Feb 6, 2021, 4:45 PM IST

ನಟಿ ಸನ್ನಿ ಲಿಯೋನ್​​ ಅವರು ಕಾರ್ಯಕ್ರಮ ಆಯೋಜಕರಿಗೆ ಹಣ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಕೇರಳದ ಕೊಚ್ಚಿ ಕ್ರೈಮ್​ ಬ್ರ್ಯಾಂಚ್​​ ನಟಿಯ ಹೇಳಿಕೆ​​​ ದಾಖಲಿಸಿಕೊಂಡಿದೆ.

ಕಳೆದ ಕೆಲ ದಿನಗಳ ಹಿಂದೆ ಸನ್ನಿ ಲಿಯೋನ್​ಗೆ ಆರ್.​​ ಶಿಯಸ್​​ ಎಂಬುವರು 29 ಲಕ್ಷ ನೀಡಿ ಕಾರ್ಯಕ್ರಮ ನಡೆಸಿಕೊಡುವಂತೆ ಕೇಳಿದ್ದರು. ಇದಕ್ಕೆ ನಟಿಯೂ ಒಪ್ಪಿದ್ದು, ಕೊರೊನಾ ಕಾರಣದಿಂದ ಕಾರ್ಯಕ್ರಮದಲ್ಲಿ ಸನ್ನಿ ಭಾಗಿಯಾಗಲು ಸಾಧ್ಯವಾಗಿಲ್ಲ. ಆದರೆ ಈಗ ನಟಿ ಸನ್ನಿ ಲಿಯೋನ್ ಕಾರ್ಯಕ್ರಮ ನಡೆಸಿಕೊಡದೆ ವಂಚಿಸಿದ್ದಾರೆ ಎಂದು ಶಿಯಸ್​​ ದೂರು ನೀಡಿದ್ದಾರೆ.

ಹಣ ವಂಚನೆ ಹಿನ್ನೆಲೆ : ಸನ್ನಿ ಲಿಯೋನ್​ ಹೇಳಿಕೆ ದಾಖಲಿಸಿದ ಕೇರಳ ಪೊಲೀಸ್​​​​

ದೂರಿನ ಅನ್ವಯ ತಿರುವನಂತಪುರದ ಪೂವರ್​​​ ಕ್ರೈಮ್​ ಬ್ರ್ಯಾಂಚ್​​ ಅಧಿಕಾರಿಗಳು ನಟಿಯ ಹೇಳಿಕೆ ದಾಖಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಸನ್ನಿ ಲಿಯೋನ್​​​, ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ನಿಜ. ಆದ್ರೆ ಕೊರೊನಾ ಕಾರಣದಿಂದ ಆ ಕಾರ್ಯಕ್ರಮಕ್ಕೆ ನಾನು ಭಾಗಿಯಾಗಲು ಸಾಧ್ಯವಾಗಲಿಲ್ಲ. ಅಲ್ಲದೆ ಆ ಕಾರ್ಯಕ್ರಮದ ದಿನಾಂಕಗಳನ್ನು ಸುಮಾರು ಐದು ಬಾರಿ ಬದಲಾಯಿಸಲಾಗಿದೆ. ಈಗಲೂ ಕೂಡ ಅವರು ಅದೇ ಕಾರ್ಯಕ್ರಮ ಆಯೋಜನೆ ಮಾಡಿದರೆ ನಾನು ಖಂಡಿತ ಭಾಗಿಯಾಗುತ್ತೇನೆ ಎಂದಿದ್ದಾರೆ.

ABOUT THE AUTHOR

...view details