ಕೀರ್ತಿ ಸುರೇಶ್ ಈ ಮುನ್ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಅವರು ಅಭಿನಯಿಸಿದ್ದ ಹಿರಿಯ ನಟಿ ಸಾವಿತ್ರಿ ಜೀವನಾಧಾರಿತ 'ಮಹಾನಟಿ' ಸಿನಿಮಾ ಬಿಡುಗಡೆಯಾದ ಮೇಲೆ ಕೀರ್ತಿ ಇಮೇಜ್ ಬದಲಾಯಿತು. ಈ ಸಿನಿಮಾದಲ್ಲಿ ಅವರ ಮೇಕಪ್, ಕಾಸ್ಟ್ಯೂಮ್, ನಟನೆ ಪ್ರತಿಯೊಂದು ಜನರನ್ನು ಬಹಳ ಇಂಪ್ರೆಸ್ ಮಾಡಿತ್ತು.
ಕೀರ್ತಿ ಫೋಟೊ ನೋಡಿದ ಅಭಿಮಾನಿಗಳಿಗೆ ಶಾಕ್... ಮಹಾನಟಿ ಹೀಗೇಕಾದ್ರು? - undefined
'ಮಹಾನಟಿ' ಚಿತ್ರದ ಮೂಲಕ ದೊಡ್ಡ ಬ್ರೇಕ್ ಪಡೆದ ನಟಿ ಕೀರ್ತಿ ಸುರೇಶ್ ಇದೀಗ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅವರು ಅಜಯ್ ದೇವಗನ್ ಜೊತೆ ಬಾಲಿವುಡ್ ಸಿನಿಮಾದಲ್ಲಿ ಕೂಡಾ ನಟಿಸಲಿದ್ದು, ಆ ಸಿನಿಮಾಗಾಗಿ ತೂಕ ಇಳಿಸಿಕೊಂಡು ಸಾಕಷ್ಟು ಸ್ಲಿಮ್ ಆಗಿದ್ದಾರೆ. ಆದ್ರೆ ಅವರ ಇತ್ತೀಚೆಗಿನ ಫೋಟೊವೊಂದನ್ನು ಕಂಡು ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್ ಮಾಡ್ತಿದ್ದಾರೆ.

ಕೀರ್ತಿ ಸುರೇಶ್ ತಮ್ಮ ಇತ್ತೀಚೆಗಿನ ಪೋಟೊವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಈ ಪೋಟೊ ನೋಡಿ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಏಕೆಂದರೆ ಕೀರ್ತಿ ಸಾಕಷ್ಟು ತೂಕವನ್ನು ಇಳಿಸಿಕೊಂಡಿದ್ದು ಬಹಳ ಸ್ಲಿಮ್ ಆಗಿ ಕಾಣುತ್ತಿದ್ದಾರೆ. ಕೆಲ ಅಭಿಮಾನಿಗಳು ಪೋಟೊ ಮೆಚ್ಚಿ ಲೈಕ್ ಮಾಡಿದರೆ ಮತ್ತೆ ಕೆಲವು ಅಭಿಮಾನಿಗಳು ಬೇಸರದಿಂದ ಕಮೆಂಟ್ ಮಾಡಿದ್ದಾರೆ. 'ನೀವು ನಮ್ಮ ಕೀರ್ತಿ ಸುರೇಶ್ ಅಲ್ಲ' ಎಂದು ಓರ್ವ ಅಭಿಮಾನಿ ಕಮೆಂಟ್ ಮಾಡಿದರೆ ಮತ್ತೋರ್ವ 'ನೀವು ಮೊದ್ಲೇ ಸುಂದರವಾಗಿ ಕಾಣುತ್ತಿದ್ದಿರಿ' ಎಂದು ಕಮೆಂಟ್ ಮಾಡಿದ್ದಾರೆ.
ಆದರೆ ಕೀರ್ತಿ ಸುರೇಶ್ ತಮ್ಮ ಮುಂದಿನ ಸಿನಿಮಾಗಾಗಿ ಹೀಗೆ ಸ್ಲಿಮ್ ಆಗಿದ್ದಾರೆ ಎನ್ನಲಾಗುತ್ತಿದೆ. ಸದ್ಯಕ್ಕೆ ಕೀರ್ತಿ ತೆಲುಗಿನ 'ಮನ್ಮಥುಡು' ಹಾಗೂ ಮಲಯಾಳಂನ 'ಅರಬಿಕಡಲಿಂತೆ ಸಿಂಹಂ' ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ವಿಶೇಷ ಎಂದರೆ ಕೀರ್ತಿ ಮೊದಲ ಬಾರಿಗೆ ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದಿದ್ದು, ಈ ಸಿನಿಮಾದಲ್ಲಿ ಅಜಯ್ ದೇವಗನ್ ಕೀರ್ತಿಗೆ ಜೊತೆಯಾಗಿದ್ದಾರೆ. ಬೋನಿ ಕಪೂರ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಅಮಿತ್ ಶರ್ಮಾ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ ಎನ್ನಲಾಗ್ತಿದೆ. ಬಹುಶ: ಕೀರ್ತಿ ಈ ಸಿನಿಮಾಗಾಗೇ ತೂಕ ಇಳಿಸಿಕೊಂಡು ಇಷ್ಟು ಸ್ಲಿಮ್ ಆಗಿರಬಹುದು ಎನ್ನಲಾಗುತ್ತಿದೆ.