ಕನ್ನಡಕ್ಕೆ ಬೇರೆ ಭಾಷೆಯಿಂದ ಚಿತ್ರನಟಿಯರ ಬಂದು ಇಲ್ಲಿ ಸಾಕಷ್ಟು ಮಿಂಚಿದ್ದಾರೆ.ಇದೀಗ 'ಮಹಾನಟಿ' ಖ್ಯಾತಿಯ ಕೀರ್ತಿ ಸುರೇಶ್ ಕೂಡಾ ಕನ್ನಡಕ್ಕೆ ಬರುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮಲಯಾಳಂ, ತೆಲುಗು, ತಮಿಳು, ಹಿಂದಿ ಸಿನಿಮಾದಲ್ಲೂ ನಟಿಸಿರುವ ಕೀರ್ತಿ ಕನ್ನಡ ಎಂಟ್ರಿಗೆ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.
ಸ್ಯಾಂಡಲ್ವುಡ್ಗೆ ಬರ್ತಿದ್ದಾರಂತೆ ಮಹಾನಟಿ ಕೀರ್ತಿ ಸುರೇಶ್! - ಕೀರ್ತಿ ತಾಯಿ ಮೇನಕಾ
ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ 'ಮದಗಜ' ಸಿನಿಮಾ ಮೂಲಕ 'ಮಹಾನಟಿ' ಖ್ಯಾತಿಯ ಕೀರ್ತಿ ಸುರೇಶ್ ಕನ್ನಡಕ್ಕೆ ಬರುತ್ತಿದ್ದಾರೆ ಎನ್ನಲಾಗುತ್ತಿದೆ. ಸೈಮಾ ಪ್ರಶಸ್ತಿ ಸಮಾರಂಭದ ವೇಳೆ ನಿರ್ದೇಶಕ ಮಹೇಶ್ ಕುಮಾರ್ ಕೀರ್ತಿ ಜೊತೆ ಮಾತುಕತೆ ನಡೆಸಿದ್ದು, ಡೇಟ್ಸ್ ಹೊಂದಾಣಿಕೆಯಾದರೆ ಕೀರ್ತಿ ಕನ್ನಡದಲ್ಲಿ ನಟಿಸುವುದು ಗ್ಯಾರಂಟಿ ಎನ್ನಲಾಗುತ್ತಿದೆ.
ಶ್ರೀ ಮುರಳಿ ಅಭಿನಯದ 'ಮದಗಜ' ಸಿನಿಮಾ ಮೂಲಕ ಕೀರ್ತಿ ಕನ್ನಡಕ್ಕೆ ಬರುತ್ತಿದ್ಧಾರೆ ಎನ್ನಲಾಗುತ್ತಿದೆ. ಉಮಾಪತಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಮಹೇಶ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಈ ಮೊದಲು 'ಮದಗಜ' ನಾಯಕಿಯಾಗಿ ಸಾಯಿ ಪಲ್ಲವಿ ನಂತರ ಅನುಪಮಾ ಪರಮೇಶ್ವರನ್ ಬರುತ್ತಿದ್ದಾರೆ ಎನ್ನಲಾಗಿತ್ತು. ಇದೀಗ ಕೀರ್ತಿ ಸುರೇಶ್ ಹೆಸರು ಹರಿದಾಡುತ್ತಿದೆ. 'ಅಯೋಗ್ಯ' ಸಿನಿಮಾ ಖ್ಯಾತಿಯ ಮಹೇಶ್ ಕುಮಾರ್ ಇತ್ತೀಚೆಗೆ ದುಬೈನಲ್ಲಿ ನಡೆದ ಸೈಮಾ ಪ್ರಶಸ್ತಿ ಸಮಾರಂಭದ ವೇಳೆ ಕೀರ್ತಿ ಜೊತೆ ಮಾತುಕತೆ ನಡೆಸಿದ್ದು, ಕೀರ್ತಿ ಕೂಡಾ ಕನ್ನಡಕ್ಕೆ ಬರಲು ಒಪ್ಪಿದ್ದಾರೆ ಎನ್ನಲಾಗಿದೆ. ಜೊತೆಗೆ ಕೀರ್ತಿ ಅವರ ತಾಯಿಯೊಂದಿಗೆ ಕೂಡಾ ಕಥೆ ಬಗ್ಗೆ ಚರ್ಚೆ ನಡೆಸಿದ್ಧಾರೆ ಎನ್ನಲಾಗಿದೆ. ಕೀರ್ತಿ ತಾಯಿ ಮೇನಕಾ ಕೂಡಾ ನಟಿಯಾಗಿದ್ದು, 1984ರಲ್ಲಿ ಬಿಡುಗಡೆಯಾದ 'ಸಮಯದ ಗೊಂಬೆ' ಸಿನಿಮಾದಲ್ಲಿ ಡಾ. ರಾಜ್ಕುಮಾರ್ ಜೊತೆ ನಟಿಸಿದ್ದರು.
ಮೇನಕಾ ಅವರಿಗೂ ಮಗಳು ಕನ್ನಡದಲ್ಲಿ ನಟಿಸಬೇಕು ಎಂಬ ಆಸೆ ಇದೆಯಂತೆ. ಕೀರ್ತಿ ಸುರೇಶ್ ಬ್ಯುಸಿ ಇದ್ದು ಡೇಟ್ ಸಿಕ್ಕರೆ ಖಂಡಿತಾ ಅವರು ಮುರಳಿ ಜೊತೆ 'ಮದಗಜ' ಸಿನಿಮಾದಲ್ಲಿ ನಟಿಸುತ್ತಾರೆ ಎನ್ನಲಾಗುತ್ತಿದೆ. ಇನ್ನು ಸೆಪ್ಟೆಂಬರ್ ಅಂತ್ಯದಲ್ಲಿ ‘ಮದಗಜ’ ಚಿತ್ರೀಕರಣ ಪ್ರಾರಂಭ ಆಗಲಿದೆ ಎಂದು ನಿರ್ಮಾಪಕರಾದ ಉಮಾಪತಿ ಹಾಗೂ ಶ್ರೀನಿವಾಸ್ ಹೇಳಿದ್ದಾರೆ.