ಕರ್ನಾಟಕ

karnataka

ETV Bharat / sitara

ಕೀರ್ತನ್​ ಹೊಳ್ಳಗೆ ಸರಿಗಮಪ ವಿನ್ನರ್​​​​​​ ಕಿರೀಟ - undefined

ಸರಿಗಮಪ 15 ನೇ ಸೀಸನ್ ವಿನ್ನರ್ ಆಗಿ ಕೀರ್ತನ್ ಹೊಳ್ಳ ಹೊರಹೊಮ್ಮಿದ್ದಾರೆ. ಇನ್ನು ಗ್ರಾಮೀಣ ಪ್ರತಿಭೆ ಹನುಮಂತುಗೆ ಎರಡನೇ ಸ್ಥಾನ ಒಲಿದಿದೆ.

ಸರಿಗಮಪ ವಿನ್ನರ್ ಕೀರ್ತನ್​ ಹೊಳ್ಳ

By

Published : Feb 24, 2019, 3:14 PM IST

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಸೀಸನ್ 15 ರ ಫೈನಲ್​ ಸ್ಪರ್ಧೆ ನಿನ್ನೆ ನಡೆದಿದ್ದು ಕೀರ್ತನ್ ಹೊಳ್ಳ ಈ ಸೀಸನ್​​​​​ ವಿನ್ನರ್ ಆಗಿ ಸೂಪರ್ ಸಿಂಗರ್ ಪಟ್ಟ ಗಳಿಸಿದ್ದಾರೆ. ಇನ್ನು ಗ್ರಾಮೀಣ ಪ್ರತಿಭೆ ಹನುಮಂತ ಎರಡನೇ ಸ್ಥಾನ ಪಡೆದಿದ್ದಾರೆ.

ಕಾರ್ಯಕ್ರಮದ ಆರಂಭದಲ್ಲಿ 20 ಸ್ಪರ್ಧಿಗಳಿಂದ ಆರಂಭವಾದ ಈ ಕಾರ್ಯಕ್ರಮದ ಸೆಮಿ ಫೈನಲ್​ಗೆ 12 ಸ್ಪರ್ಧಿಗಳು ಆಯ್ಕೆಯಾಗಿದ್ದರು. ಅಲ್ಲಿಂದ ಅಂತಿಮ ಸ್ಪರ್ಧೆಗೆ ಕೀರ್ತನ್ ಹೊಳ್ಳ, ಹನುಮಂತ, ವಿಜೇತ್​, ಹೃತ್ವಿಕ್​, ನಿಹಾಲ್, ಸಾಧ್ವಿಕ್​​​​​ ಸೇರಿ 6 ಸ್ಪರ್ಧಿಗಳು ಎಂಟ್ರಿ ಪಡೆದಿದ್ದರು. ಇನ್ನು ಫೈನಲ್​​​ನ ಎರಡನೇ ಹಂತದಲ್ಲಿ ಮೂವರು ಸ್ಪರ್ಧಿಗಳಿದ್ದು ಕೀರ್ತನ್ ಹೊಳ್ಳ ಈ ಸೀಸನ್​​​​ನ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಟ್ರೋಫಿಯೊಂದಿಗೆ ಕೀರ್ತನ್ ಹಾಗೂ ಹನುಮಂತು

ವಿನ್ನರ್ ಕೀರ್ತನ್​ ಹೊಳ್ಳ​​​ಗೆ ಕಾನ್ಫಿಡೆಂಟ್ ಗ್ರೂಪ್ ವತಿಯಿಂದ 35 ಲಕ್ಷ ರೂಪಾಯಿ ಮೌಲ್ಯದ 3 ಬಿಹೆಚ್​​​ಕೆ ಅಪಾರ್ಟ್​ಮೆಂಟ್ ಹಾಗೂ ಜೀ ಕನ್ನಡ ವಾಹಿನಿ ವಿನ್ನರ್ ಟ್ರೋಫಿ ದೊರಕಿದೆ. ರನ್ನರ್​ಅಪ್​ ಆದ ಹನುಮಂತ ಅವರಿಗೆ 15 ಲಕ್ಷ ರೂ. ಮೌಲ್ಯದ ನಿವೇಶನವನ್ನು ನೀಡಲಾಯಿತು. ಫಲಿತಾಂಶ ಪ್ರಕಟಿಸುವ ಮುನ್ನ ರನ್ನರ್​ ಅಪ್​ ಗೆ ಒಂದು ಸರ್​ಪ್ರೈಸ್​ ಕಾದಿರುವುದಾಗಿ ಕಾನ್ಫಿಡೆಂಟ್​ ಗ್ರೂಪ್​ನ ಮಾಲೀಕರು ಹೇಳಿದ್ದರು.

ಬೆಂಗಳೂರಿನ ಕೊರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಅನುಶ್ರೀ ನಿರೂಪಣೆ ಮಾಡಿದರು. ವಿಜಯ್​ ಪ್ರಕಾಶ್​, ಅರ್ಜುನ್ ಜನ್ಯ, ರಾಜೇಶ್​ ಕೃಷ್ಣನ್ ತೀರ್ಪುಗಾರರಾಗಿದ್ದರೆ ಹಂಸಲೇಖ ಕಾರ್ಯಕ್ರಮದ ಮಹಾಗುರುಗಳಾಗಿ ಪಾಲ್ಗೊಂಡಿದ್ದರು.

For All Latest Updates

TAGGED:

ABOUT THE AUTHOR

...view details