ಕರ್ನಾಟಕ

karnataka

ETV Bharat / sitara

'ಕೌನ್ ಬನೇಗಾ ಕರೋಡ್ ಪತಿ'ಯಲ್ಲಿ ಕೋಟಿ ಗೆದ್ದ ದೃಷ್ಟಿಹೀನ ಸ್ಪರ್ಧಿ.. 7 ಕೋಟಿ ಪ್ರಶ್ನೆಗೆ ನೀಡ್ತಾರಾ ಉತ್ತರ!? - ಕೌನ್​ ಬನೇಗಾ ಕರೋಡ್​ಪತಿ ಸೀಜನ್​ 13

ಬಾಲಿವುಡ್ ನಟ ಬಿಗ್ ಬಿ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ದೃಷ್ಟಿಹೀನ ಶಿಕ್ಷಕಿಯೊಬ್ಬರು ಇದೀಗ 7 ಕೋಟಿ ರೂಪಾಯಿ ಪ್ರಶ್ನೆಗೆ ಉತ್ತರ ನೀಡಲು ಸಜ್ಜಾಗಿದ್ದಾರೆ.

Himani Bundela
Himani Bundela

By

Published : Aug 26, 2021, 10:53 PM IST

Updated : Aug 27, 2021, 2:59 AM IST

ಬಾಲಿವುಡ್​ನ ಬಿಗ್​ ಬಿ ಅಮಿತಾಬ್​ ಬಚ್ಚನ್​ ನಡೆಸಿಕೊಡುವ ಜನಪ್ರೀಯ ಗೇಮ್​ ಶೋ 13ನೇ ಆವೃತ್ತಿಯ 'ಕೌನ್​ ಬನೇಗಾ ಕರೋಡ್​ ಪತಿ' ಈಗಾಗಲೇ ಆರಂಭಗೊಂಡಿದ್ದು, ಅನೇಕ ಸ್ಪರ್ಧಾಳುಗಳು ಭಾಗಿಯಾಗಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ.

ಈ ಶೋನಲ್ಲಿ ಭಾಗಿಯಾಗಿರುವ ಆಗ್ರಾದ ದೃಷ್ಟಿಹೀನ ಸ್ಪರ್ಧಿ ಹಿಮಾನಿ ಬುಂದೇಲಾ ಈಗಾಗಲೇ 1 ಕೋಟಿ ರೂಪಾಯಿ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದ್ದು, ಇದೀಗ 7 ಕೋಟಿ ರೂಪಾಯಿ ಪ್ರಶ್ನೆಗೆ ಉತ್ತರ ನೀಡಲು ಸಜ್ಜಾಗಿದ್ದಾರೆ.

'ಕೌನ್ ಬನೇಗಾ ಕರೋಡ್ ಪತಿ'ಯಲ್ಲಿ ಕೋಟಿ ಗೆದ್ದ ದೃಷ್ಟಿಹೀನ ಸ್ಪರ್ಧಿ

ಆಗಸ್ಟ್​​​ 23 ರಿಂದ 13ನೇ ಆವೃತ್ತಿ ಕೌನ್​ ಬನೇಗಾ ಕರೋಡ್ ಪತಿ ಶೋ ಆರಂಭಗೊಂಡಿದ್ದು, ಇದರಲ್ಲಿ ಭಾಗಿಯಾಗಿರುವ ದೃಷ್ಟಿ ಹೀನ ಶಿಕ್ಷಕಿ ಹಿಮಾನಿ ಎಲ್ಲ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ದು, ಇದೀಗ ಕೊನೆ ಹಂತಕ್ಕೆ ಬಂದು ನಿಂತಿದ್ದಾರೆ. ಇದರ ಪ್ರೋಮೋ ಸದ್ಯ ರಿಲೀಸ್​​ ಆಗಿದ್ದು, ಅವರು ಕೊನೆಯ 7ಕೋಟಿ ರೂಪಾಯಿ ಪ್ರಶ್ನೆಗೆ ಉತ್ತರ ನೀಡುವರೆ? ಎಂಬ ಪ್ರಶ್ನೆ ಉದ್ಭವವಾಗಿದೆ.

ಹಾಟ್​ ಸೀಟ್​ನಲ್ಲಿ ದೃಷ್ಟಿಹೀನ ಸ್ಪರ್ಧಿ ಹಿಮಾನಿ

13ನೇ ಆವೃತ್ತಿ ಕೌನ್​ ಬನೇಗಾ ಕರೋಡ್ ಪತಿ ಶೋನಲ್ಲಿ ಕೋಟಿ ರೂಪಾಯಿ ಗೆದ್ದಿರುವ ಮೊದಲ ಸ್ಪರ್ಧಿ ಇವರಾಗಿದ್ದು, ಈಗಾಗಲೇ ಎಲ್ಲ 15 ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ದಾರೆ. ಇದೀಗ 16ನೇ ಪ್ರಶ್ನೆಗೂ ಉತ್ತರ ನೀಡಲು ಮುಂದಾಗಿದ್ದು, ಇದರ ಶೋ ಇನ್ನು ಪ್ರಸಾರಗೊಂಡಿಲ್ಲ.

1 ಕೋಟಿ ಮೌಲ್ಯದ ಪ್ರಶ್ನೆಗೆ ಉತ್ತರಿಸಿದ ಹಿಮಾನಿ
Last Updated : Aug 27, 2021, 2:59 AM IST

ABOUT THE AUTHOR

...view details