ಕರ್ನಾಟಕ

karnataka

ETV Bharat / sitara

ಸ್ಯಾಂಡಲ್​ವುಡ್​ನಿಂದ ಮಾಲಿವುಡ್​ಗೆ ಹಾರಿದ ಕಾವ್ಯಾ ಶೆಟ್ಟಿ : ಮೋಹನ್​ಲಾಲ್​ ಚಿತ್ರದಲ್ಲಿ ನಟನೆ - Guttunda Seetakalam

ಸ್ಯಾಂಡಲ್​ವುಡ್ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಕಾವ್ಯಾ ಶೆಟ್ಟಿ, ಇತರ ಭಾಷೆಗಳ ಚಿತ್ರಗಳಲ್ಲೂ ನಟಿಸುತ್ತಿದ್ದಾರೆ. ತೆಲುಗು ಸಿನಿಮಾವೊಂದರಲ್ಲಿ ಸದ್ದಿಲ್ಲದೆ ಬಣ್ಣ ಹಚ್ಚಿರುವ ಕಾವ್ಯಾ, ಮಲಯಾಳಂನ ಪ್ರಮುಖ ಚಿತ್ರವೊಂದರಲ್ಲಿ ಸ್ಟಾರ್​ ನಟನೊಂದಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

Kavya Shetty acting in Malayalam Film
ಮಲಯಾಳಂನತ್ತ ಮುಖ ಮಾಡಿದ ಕಾವ್ಯಾಶೆಟ್ಟಿ

By

Published : Jul 31, 2021, 7:38 AM IST

ಕಾವ್ಯಾ ಶೆಟ್ಟಿ ಕನ್ನಡ ಚಿತ್ರರಂಗಕ್ಕೆ ಬಂದು ಏಳೆಂಟು ವರ್ಷಗಳೇ ಆಗಿವೆ. ಆದರೆ, ಇಷ್ಟು ವರ್ಷಗಳಲ್ಲಿ ಅವರ ಚಿತ್ರವೊಂದು ದೊಡ್ಡ ಹಿಟ್ ಆಗಿದ್ದು ಅಥವಾ ಅವರ ಅಭಿನಯಕ್ಕೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು ಕಡಿಮೆಯೇ. ಅಷ್ಟೇ ಅಲ್ಲ, ಇಷ್ಟು ವರ್ಷಗಳಲ್ಲಿ ಕಾವ್ಯಾ ಅಭಿನಯಿಸಿದ ಚಿತ್ರಗಳ ಸಂಖ್ಯೆಯೂ ಕಡಿಮೆಯೇ.

ಪ್ರಸ್ತುತ, 'ಲಂಕೆ' ಮತ್ತು 'ರವಿ ಬೋಪಣ್ಣ' ಚಿತ್ರಗಳ ಬಿಡುಗಡೆಗೆ ಎದುರು ನೋಡುತ್ತಿರುವ ಕಾವ್ಯಾ, ಇದೀಗ ಚಂದನವದಿಂದ ಮಲಯಾಳಂ ಇಂಡಸ್ಟ್ರಿ (ಮಾಲಿವುಡ್) ಕಡೆ ಹೊರಟು ನಿಂತಿದ್ದಾರೆ.

ಕಾವ್ಯಾ ಮಲಯಾಳಂನ 'ಬ್ರೋ ಡ್ಯಾಡಿ' ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೈದರಾಬಾದ್​ನ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಅವರು ಭಾಗವಹಿಸುತ್ತಿದ್ದಾರೆ.

ಓದಿ : ಸೆಗಣಿ-ಕಸ ಎತ್ಹಾಕ್ತಾ, ಹಾಲು ಕರೆಯೋ ನಮ್ಮೂರ ಹುಡ್ಗೀ ರೊಟ್ಟಿ ಬಡಿಯಾಕ್‌ 'ಶ್ಯಾನೆ ಟಾಪ್‌ ಆಗವ್ಳೇ'

ಬ್ರೋ ಡ್ಯಾಡಿ ಚಿತ್ರದಲ್ಲಿ ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ, ಮೋಹನ್ ಲಾಲ್ ಅಭಿನಯಿಸಿದ ಲೂಸಿಫರ್ ಚಿತ್ರವನ್ನು ಪೃಥ್ವಿರಾಜ್ ನಿರ್ದೇಶಿಸಿದ್ದರು. ಈ ಚಿತ್ರ ಸೂಪರ್​ ಹಿಟ್ ಆಗಿ ಚಿರಂಜೀವಿ ಅಭಿನಯದಲ್ಲಿ ತೆಲುಗಿನಲ್ಲೂ ರಿಮೇಕ್ ಆಗುತ್ತಿದೆ.

'ಲೂಸಿಫರ್' ಬಳಿಕ ನಿರ್ದೇಶನದಿಂದ ದೂರ ಉಳಿದಿದ್ದ ಪೃಥ್ವಿರಾಜ್, ಇದೀಗ ತಮ್ಮ ನಿರ್ದೇಶನದ ಎರಡನೇ ಚಿತ್ರಕ್ಕೆ ಕೈಹಾಕಿದ್ದು, ಆ ಚಿತ್ರದಲ್ಲಿ ಕಾವ್ಯಾ ನಟಿಸುತ್ತಿರುವುದು ವಿಶೇಷ.

ಮಲಯಾಳಂ ಮಾತ್ರವಲ್ಲದೆ, ತೆಲುಗು ಚಿತ್ರವೊಂದರಲ್ಲೂ ಸದ್ದಿಲ್ಲದೆ ಕಾವ್ಯಾ ನಟಿಸುತ್ತಿದ್ದಾರೆ. ಕನ್ನಡದ 'ಲವ್​ ಮಾಕ್ಟೆಲ್'​ನ ತೆಲುಗು ರಿಮೇಕ್ 'ಗುರ್ತುಂಡಾ ಸೀತಾಕಲಮ್'​ನಲ್ಲಿ ಕಾವ್ಯಾ ಬಣ್ಣ ಹಚ್ಚಿದ್ದಾರೆ. ನಾಗಶೇಖರ್ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದು, ಸತ್ಯದೇವ್ ಮತ್ತು ತಮನ್ನಾ ಭಾಟಿಯಾ ಸಹ ನಟಿಸುತ್ತಿದ್ದಾರೆ.

ಕಳೆದೊಂದು ವರ್ಷದಿಂದ ಕನ್ನಡವಲ್ಲದೆ ಇತರ ಚಿತ್ರರಂಗಗಳಲ್ಲೂ ನಟಿಸಿ ಕಾವ್ಯಾ ಸೈ ಎನಿಸಿಕೊಂಡಿದ್ದು, ಯಾವ ಚಿತ್ರರಂಗ ಕಾವ್ಯಾ ಕೈ ಹಿಡಿಯಲಿದೆ ಎಂಬುವುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details