ಸವಾಯಿ ಮಾಧೋಪುರ್ : ಸಿಕ್ಸ್ ಸೆನ್ಸ್ ಫೋರ್ಟ್ನಲ್ಲಿ ನಡೆದ ಮದುವೆ ಬಳಿ ವಿಕ್ಕಿ ಕೌಶಲ್ ಮತ್ತು ಕರ್ತಿನಾ ಕೈಫ್ ಶೇರ್ಪುರ್ ಹೆಲಿಪ್ಯಾಡ್ ತಲುಪಿ, ಚಾಪರ್ ಮೂಲಕ ಜೈಪುರಕ್ಕೆ ತೆರಳಿದ್ದಾರೆ. ಸದ್ಯ ವಿಕ್ಕಿ ಮತ್ತು ಕತ್ರಿನಾ ಹನಿಮೂನ್‌ಗೆ ಹೋಗ್ತಾರಾ..! ಎಂಬ ಕುತೂಹಲದ ಮಾತು ಅಭಿಮಾನಿಗಳ ವಲಯದಲ್ಲಿ ಕೇಳಿ ಬಂದಿದೆ.
ಬಾಲಿವುಡ್ ಸ್ಟಾರ್ ದಂಪತಿ ವಿವಾಹವು ಗುರುವಾರ ಹಿಂದೂ ಸಂಪ್ರದಾಯಗಳ ಪ್ರಕಾರ ಪೂರ್ಣಗೊಂಡಿತು. ಈ ಮದುವೆಯಲ್ಲಿ ಬಾಲಿವುಡ್‌ನ ಖ್ಯಾತ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಈಗ ಕತ್ರಿನಾ - ವಿಕ್ಕಿ ಹನಿಮೂನ್‌ಗೆ ಹೋಗುತ್ತಾರೆ ಎಂಬ ಊಹಾಪೋಹಗಳಿವೆ. ಆದರೆ, ಕೆಲಸದ ಕಾರಣ, ಇಬ್ಬರೂ ಶೀಘ್ರದಲ್ಲೇ ತಮ್ಮ ಕೆಲಸಕ್ಕೆ ಮರಳುತ್ತಾರೆ ಎಂದು ಹೇಳಲಾಗಿದೆ.