ಕರ್ನಾಟಕ

karnataka

ETV Bharat / sitara

ಬಿಟೌನ್‌ ಈ ಇಬ್ಬರು ನಟಿಯರಲ್ಲಿ ಫ್ಯಾಂಟಮ್  ಚಿತ್ರದ ಹಾಡೊಂದಕ್ಕೆ ಸುದೀಪ್‌ ಜತೆಗೆ ಬಳುಕೋದ್ಯಾರು!? - Bollywood Actress Katrina Kaif News

ಡಿಸೆಂಬರ್‌ ಮೊದಲ ವಾರದಿಂದಲೇ ಕೇರಳದಲ್ಲಿ 30 ದಿನಗಳ ಕಾಲ ಶೂಟಿಂಗ್​​ ನಡೆಯಲಿದೆಯಂತೆ. ಈಗಾಗಲೇ ಬಾಲಿವುಡ್​​ ಬೆಡಗಿ ಕತ್ರಿನಾ ಜೊತೆ ಮಾತುಕತೆಯೂ ನಡೆದಿದೆ ಎಂಬ ಮಾತು ಹರಿದಾಡುತ್ತಿವೆ..

Katrina Kaif acting in Phantom Cinema
'ಫ್ಯಾಂಟಮ್​' ಚಿತ್ರದ ಹಾಡೊಂದರಲ್ಲಿ ಬಳುಕುತ್ತಾರಂತೆ ಈ ನಟಿಯರು?

By

Published : Nov 28, 2020, 4:13 PM IST

ಸುದೀಪ್ ನಟನೆಯ 'ಫ್ಯಾಂಟಮ್' ಸಿನಿಮಾದ ಶೂಟಿಂಗ್ ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ನಡೆದಿದ್ದು, ಇತ್ತೀಚೆಗೆ ಮುಕ್ತಾಯವಾಗಿದೆ. ಈ ಚಿತ್ರಕ್ಕೆ ಅನೂಪ್​ ಬಂಡಾರಿ ಆ್ಯಕ್ಷನ್-ಕಟ್​ ಹೇಳುತ್ತಿದ್ದಾರೆ. ಹಾಲಿವುಡ್​​​ ರೇಂಜ್​ನಲ್ಲಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ ಎಂಬ ಮಾತು ಹೇಳಿ ಬರುತ್ತಿವೆ. ಇದೀಗ ಫ್ಯಾಂಟಮ್​​​ ವಲಯದಿಂದ ಮತ್ತೊಂದು ಬಿಸಿ ಬಿಸಿ ಸುದ್ದಿ ಹರಿದಾಡುತ್ತಿದೆ. ಚಿತ್ರದಲ್ಲಿ ಬಾಲಿವುಡ್​​ನ ಟಾಪ್​ ನಟಿ ಹೆಜ್ಜೆ ಹಾಕಲಿದ್ದಾರಂತೆ.

ಕತ್ರಿನಾ ಕೈಫ್​​

ಫ್ಯಾಂಟಮ್​​ ಚಿತ್ರದಲ್ಲಿ ಒಂದು ಅದ್ಭುತ ಹಾಡು ಇದೆ. ಆ ಹಾಡಿಗೆ ಹೆಜ್ಜೆ ಹಾಕಲು ಬಾಲಿವುಡ್​​ನ ಇಬ್ಬರು ನಟಿಯರ ಹೆಸರನ್ನು ಸೂಚಿಸಲಾಗಿದೆಯಂತೆ. ಮೊದಲು ಕತ್ರಿನಾ ಕೈಫ್​ ಹೆಸರು ಕೇಳಿ ಬರುತ್ತಿದ್ದು, ಇವರು ನಟಿಸಲು ಬಾರದಿದ್ದರೆ ನೋರಾ ಫತೇಹಿ ಅವರನ್ನು ಕರೆತರುವ ಪ್ಲಾನ್​​ ಮಾಡಲಾಗಿದೆಯಂತೆ.

ನೋರಾ

ಡಿಸೆಂಬರ್‌ ಮೊದಲ ವಾರದಿಂದಲೇ ಕೇರಳದಲ್ಲಿ 30 ದಿನಗಳ ಕಾಲ ಶೂಟಿಂಗ್​​ ನಡೆಯಲಿದೆಯಂತೆ. ಈಗಾಗಲೇ ಬಾಲಿವುಡ್​​ ಬೆಡಗಿ ಕತ್ರಿನಾ ಜೊತೆ ಮಾತುಕತೆಯೂ ನಡೆದಿದೆ ಎಂಬ ಮಾತು ಹರಿದಾಡುತ್ತಿವೆ. ಫ್ಯಾಂಟಮ್​​ ಚಿತ್ರದ ಲಾಸ್ಟ್‌ ಶೆಡ್ಯೂಲ್‌ ಅನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗುತ್ತಿದ್ದು, ಆ ವೇಳೆ ಕತ್ರಿನಾ ಇಲ್ಲವೇ ನೋರಾ ಫತೇಹಿ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರಾ ಎಂದು ಕಾದು ನೋಡಬೇಕಿದೆ.

ಸುದೀಪ್​​

ABOUT THE AUTHOR

...view details