ಕನ್ನಡದ ಖ್ಯಾತ ನಿರ್ದೇಶಕ ದಿನೇಶ್ ಬಾಬು ಆ್ಯಕ್ಷನ್ ಕಟ್ ಹೇಳುತ್ತಿರುವ 'ಕಸ್ತೂರಿ ಮಹಲ್' ಸಿನಿಮಾ ಶೂಟಿಂಗ್ ಮುಗಿಸಿ ಇದೀಗ ಟೀಸರ್ ರಿಲೀಸ್ ಮಾಡಲು ತಯಾರಿ ನಡೆಸುತ್ತಿದೆ. ಒಂದೇ ಶೆಡ್ಯೂಲ್ಡ್ನಲ್ಲಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಹೊಸ ವರ್ಷದ ನಿಮಿತ್ತ ಜನವರಿ 1ರಂದು ಟೀಸರ್ ರಿಲೀಸ್ ಮಾಡುತ್ತಿದೆ.
ಇದನ್ನೂ ಓದಿ : ಪಡ್ಡೆ ಹುಡುಗರ ಎದೆಬಡಿತ ಹೆಚ್ಚಿಸಿದ 'ಡ್ರೀಮ್ ಗರ್ಲ್' ಹಾಟ್ಲುಕ್
ಈ ಚಿತ್ರಕ್ಕೆ ಮೊದಲು ನಾಯಕಿಯಾಗಿ ಆಯ್ಕೆಯಾದವರು ಡಿಂಪಲ್ಕ್ವೀನ್ ರಚಿತಾ ರಾಮ್. ಆದ್ರೆ ಕಾರಣಾಂತರಗಳಿಂದ ಅವರ ಹೊರ ಉಳಿದಿದ್ದು, ಡಿಂಪಲ್ಕ್ವೀನ್ಸ್ಥಾನಕ್ಕೆ ಶಾನ್ವಿ ಶ್ರೀವಾಸ್ತವ್ ಆಯ್ಕೆಯಾಗಿದ್ದಾರೆ. ಚಿತ್ರವು ಹಾರರ್ -ಥ್ರಿಲ್ಲರ್ ಕಥಾ ಹಂದರವನ್ನು ಹೊಂದಿದ್ದು, ದಿನೇಶ್ ಬಾಬು ಅವರ 50ನೇ ಸಿನಿಮಾ ಇದಾಗಿದೆ. ಹಾರರ್ ಚಿತ್ರದಲ್ಲಿ ಬಣ್ಣ ಹಚ್ಚಿರುವ ಶಾನ್ವಿ ಈ ಮೂಲಕ ಎಲ್ಲರನ್ನು ಹೆದರಿಸಲು ತೆರೆ ಮೇಲೆ ಬರ್ತಿದ್ದಾರೆ.
ದಸರಾ ಹಬ್ಬದ ವೇಳೆ ಈ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಚಿಕ್ಕಮಗಳೂರಿನಲ್ಲಿ ಸಿನಿಮಾದ ಸಂಪೂರ್ಣ ಚಿತ್ರೀಕರಣ ನಡೆದಿದೆ. ಈ ಚಿತ್ರದಲ್ಲಿ ಸ್ಕಂದ ಅಶೋಕ್, ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್, ಹಾಸ್ಯ ನಟ ರಂಗಾಯಣ ರಘು ಸೇರಿದಂತೆ ಹಲವರು ಬಣ್ಣ ಹಚ್ಚುತ್ತಿದ್ದಾರೆ. ರವೀಶ್ ಆರ್‌ಸಿ, ರುಬೀನ್ ರಾ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಗುಮಿನೇನಿ ವಿಜಯ್ ಸಂಗೀತವಿದೆ.