ಕರ್ನಾಟಕ

karnataka

ETV Bharat / sitara

ಕೊಟ್ಟಿಗೆ ಹಾರದ ಪೃಕೃತಿ ಮಡಿಲಲ್ಲಿ ಶಾನ್ವಿ ಶ್ರೀವಾಸ್ತವ್: 'ಕಸ್ತೂರಿ ಮಹಲ್​​​' ಚಿತ್ರ ನಿರ್ಮಾಣ ಜೋರು - Shanvi Srivastava kannada actress photos

ಖ್ಯಾತ ನಿರ್ದೇಶಕ ದಿನೇಶ್ ಬಾಬು ನಿರ್ದೇಶಿಸುತ್ತಿರುವ ಕಸ್ತೂರಿ ಮಹಲ್ ಚಿತ್ರದ ಚಿತ್ರೀಕರಣ ಕೊಟ್ಟಿಗೆ ಹಾರದ ಸುಂದರ ಪರಿಸರದಲ್ಲಿ ನಡೆಯುತ್ತಿದ್ದು, ಶಾನ್ವಿ ಶ್ರೀವಾಸ್ತವ್, ಸ್ಕಂಧ ಅಶೋಕ್, ರಂಗಾಯಣ ರಘು, ಶೃತಿ ಪ್ರಕಾಶ್, ನೀನಾಸಂ ಅಶ್ವಥ್ ಮುಂತಾದ ಕಲಾವಿದರು ಕಾಣಿಸಿಕೊಂಡರು.

kasturi-mahal-film-shooting-in-kottigehara
ಶಾನ್ವಿ ಶ್ರೀವಾಸ್ತವ್

By

Published : Oct 12, 2020, 4:49 PM IST

ಕರುನಾಡ ಪ್ರಕೃತಿ ಸೌಂದರ್ಯ ಹೆಚ್ಚಿಸಿರುವಲ್ಲಿ ಕೊಟ್ಟಿಗೆ ಹಾರದ್ದು ಮಹತ್ವದ ಪಾತ್ರ. ಮಳೆಗಾಲದಲ್ಲಿ ಇದರ ವೈಭವ ಕೇಳುವುದೇ ಬೇಡ. ಸದ್ಯ ಇಂತಹ ಸುಂದರ ಪರಿಸರದಲ್ಲಿ 'ಕಸ್ತೂರಿ ಮಹಲ್' ಚಿತ್ರದ ಚಿತ್ರೀಕರಣ ನಡೆಯುತ್ತಿದೆ.

ಕಸ್ತೂರಿ ಮಹಲ್​​​ ಚಿತ್ರದ ಚಿತ್ರೀಕರಣ

ಅಕ್ಟೋಬರ್ 5ರಿಂದ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು,‌ ಶಾನ್ವಿ ಶ್ರೀವಾಸ್ತವ್, ಸ್ಕಂಧ ಅಶೋಕ್, ರಂಗಾಯಣ ರಘು, ಶೃತಿ ಪ್ರಕಾಶ್, ನೀನಾಸಂ ಅಶ್ವಥ್ ಮುಂತಾದ ಕಲಾವಿದರು ಕೊಟ್ಟಿಗೆ ಹಾರದಲ್ಲಿ ಕಾಣಿಸಿಕೊಂಡರು.

ಕಸ್ತೂರಿ ಮಹಲ್ ಚಿತ್ರೀಕರಣದ ಸಂದರ್ಭದ ದೃಶ್ಯ

ಹಾರಾರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಖ್ಯಾತ ನಿರ್ದೇಶಕ ದಿನೇಶ್ ಬಾಬು ನಿರ್ದೇಶಿಸುತ್ತಿದ್ದಾರೆ. ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಇದು ಅವರ ನಿರ್ದೇಶನದ 50ನೇ ಚಿತ್ರ.

ಖ್ಯಾತ ನಿರ್ದೇಶಕ ದಿನೇಶ್ ಬಾಬು ಜೊತೆ ಶಾಸ್ವಿ ಶ್ರೀವಾಸ್ತವ್​​

ಶ್ರೀಭವಾನಿ‌ ಆರ್ಟ್ಸ್ ಬ್ಯಾನರ್​​ ಅಡಿ ರವೀಶ್ ಆರ್.​ಸಿ ನಿರ್ಮಿಸುತ್ತಿರುವ‌ ಈ ಚಿತ್ರಕ್ಕೆ ನವೀನ್ ಆರ್.ಸಿ ಹಾಗೂ ಅಕ್ಷಯ್ ಸಿ.ಎಸ್ ಅವರ ಸಹ ನಿರ್ಮಾಣವಿದೆ. ಪಿ. ಕೆ. ಹೆಚ್ ದಾಸ್ ಛಾಯಾಗ್ರಹಣ ಹಾಗೂ ಸೌಂದರ್ ರಾಜ್ ಅವರ ಸಂಕಲನ ಚಿತ್ರಕ್ಕಿದೆ.

ಕಸ್ತೂರಿ ಮಹಲ್ ಚಿತ್ರೀಕರಣದ ಸಂದರ್ಭದ ದೃಶ್ಯ

ABOUT THE AUTHOR

...view details