ಬೆಂಗಳೂರು:ಸ್ಯಾಂಡಲ್ವುಡ್ನ ಜಾಗ್ವಾರ್ ನಿಖಿಲ್ ಕುಮಾರಸ್ವಾಮಿ 2020ನೇ ವರ್ಷದಲ್ಲಿ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್ ಕೊಡ್ತಿದ್ದಾರೆ. ಸದ್ಯ ಮದುವೆ ಮೂಡ್‌ನಲ್ಲಿರೋ ನಿಖಿಲ್ ಕುಮಾರಸ್ವಾಮಿಯನ್ನ ಹುಡುಕಿಕೊಂಡು ಪುಣೆಯ ಸುಂದರಿಯೊಬ್ಬರು ಬಂದಿದ್ದಾರೆ. ಆ ಚೆಲುವೆಯ ಹೆಸರು ಕಾಶ್ಮೀರಾ ಪರದೇಶಿ. ಯಾರು ಕಾಶ್ಮೀರಾ ಪರದೇಶಿ ಅಂತೀರಾ ಇವ್ರೇ ನಿಖಿಲ್ ಕುಮಾರಸ್ವಾಮಿ ಹೊಸ ಚಿತ್ರದ ಹೀರೋಯಿನ್.
ನಿಖಿಲ್ ಹುಟ್ಟು ಹಬ್ಬದಂದು ನಾಲ್ಕು ಸಿನಿಮಾಗಳನ್ನ ಅನೌನ್ಸ್ ಮಾಡಲಾಗಿತ್ತು. ಆ ಸಿನಿಮಾಗಳ ಪೈಕಿ ಕೆಲ ದಿನಗಳ ಹಿಂದೆ ಹೆಸರಿಡದ ಚಿತ್ರಕ್ಕೆ ಮುಹೂರ್ತ ಮಾಡಲಾಗಿತ್ತು. ಯಾರು ನಿಖಿಲ್ ಕುಮಾರಸ್ವಾಮಿ ಅವರ ಜೋಡಿಯಾಗುತ್ತಾರೆ ಅನ್ನೋ ಕುತೂಹಲ ಮೂಡಿತ್ತು. ಆದರೆ, ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಂತಾಗಿದೆ.