ಕರ್ನಾಟಕ

karnataka

ETV Bharat / sitara

ತಮ್ಮ ಗುರುಗಳ ಮಗನ ಸಿನಿಮಾಕ್ಕೆ ಶುಭ ಹಾರೈಸಿದ ರಿಯಲ್​ ಸ್ಟಾರ್​​ ಉಪೇಂದ್ರ - Kashinath son second movie title launch

ಕಾಶಿನಾಥ್ ಪುತ್ರ ಅಭಿಮನ್ಯು 'ಬಾಜಿ' ಚಿತ್ರದ ನಂತರ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿದ್ರು. ಈಗ ಮತ್ತೆ ಅವರು ಬಣ್ಣ ಹಚ್ಚಿದ್ದು, ಚಿತ್ರದ ಟೈಟಲ್ ಪೊಸ್ಟರ್ ​​ಅನ್ನು ಸೂಪರ್ ಸ್ಟಾರ್ ಉಪೇಂದ್ರ ಲಾಂಚ್ ಮಾಡಿದ್ದಾರೆ.

ಎಲ್ಲಿಗೆ ಪಯಣ ಯಾವುದೋ ದಾರಿ ಸಿನಿಮಾ ಟೈಟಲ್​​​ ಬಿಡುಗಡೆ

By

Published : Oct 27, 2019, 4:30 PM IST

ಸ್ಯಾಂಡಲ್​​ವುಡ್​​ನ‌ ಟ್ರೆಂಡ್ ಸೆಟ್ಟರ್ ನಟ ಹಾಗು ನಿರ್ದೇಶಕ ಕಾಶಿನಾಥ್ ಅವರ ಪುತ್ರ ಅಭಿಮನ್ಯು 'ಬಾಜಿ' ಚಿತ್ರದ ನಂತರ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿದ್ದರು. ಈಗ ಮತ್ತೆ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಹೊಸ ಚಿತ್ರದ ಟೈಟಲ್ ಪೊಸ್ಟರ್​ ​ಅನ್ನು ಸೂಪರ್ ಸ್ಟಾರ್ ಉಪೇಂದ್ರ ಲಾಂಚ್ ಮಾಡಿ ತಮ್ಮ ಗುರುಗಳ ಮಗನ ಹೊಸ ಚಿತ್ರಕ್ಕೆ ಶುಭ ಹಾರೈಸಿದ್ರು.

ಅಭಿಮನ್ಯು ನಟಿಸ್ತಿರುವ ಈ ಚಿತ್ರಕ್ಕೆ 'ಎಲ್ಲಿಗೆ ಪಯಣ ಯಾವುದೋ ದಾರಿ' ಎಂಬ ಕುತೂಹಲಭರಿತ ಟೈಟಲ್ ಇಡಲಾಗಿದೆ. ಈ ಟೈಟಲ್​​​​ಗೆ ರಿಯಲ್ ಸ್ಟಾರ್ ಉಪೇಂದ್ರ ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ಚಿತ್ರರಂಗದಲ್ಲಿ ಕಾಶಿನಾಥ್ ಟ್ರೆಂಡ್ ಸೆಟ್ಟರ್ ಆಗಿದ್ರು. ಈಗ ಅವರ ಜಾಗಕ್ಕೆ ಮಗ ಅಭಿಮನ್ಯು ಬಂದಿದ್ದಾನೆ. ಅಭಿಮನ್ಯುವಿಗೆ ಜವಾಬ್ದಾರಿ ಜಾಸ್ತಿ ಇದೆ. ಅಪ್ಪನ ಹೆಸರು ಉಳಿಸುವ ಕೆಲಸ ಮಾಡಬೇಕಿದೆ ಎಂದು ಕಿವಿಮಾತು ಹೇಳಿದ್ರು.

ತಮ್ಮ ಗುರುಗಳ ಮಗನ ಸಿನಿಮಾಕ್ಕೆ ಶುಭ ಹಾರೈಸಿದ ರಿಯಲ್​ ಸ್ಟಾರ್​​ ಉಪೇಂದ್ರ

ಇನ್ನೂ ಈ ಚಿತ್ರಕ್ಕೆ, 'ದೇವಕಿ' ಹಾಗೂ 'ಮಮ್ಮಿ' ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಕಿರಣ್ ಸೂರ್ಯ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ಚಿಕ್ಕಮಗಳೂರಿನ ಹುಡುಗಿ ಸ್ಪೂರ್ತಿ ಆಯ್ಕೆ ಆಗಿದ್ದಾರೆ. ನವಂಬರ್ ಅಂತ್ಯದಲ್ಲಿ ಶೂಟಿಂಗ್ ಶುರು ಮಾಡಲು ನಿರ್ದೇಶಕ ಕಿರಣ್ ಸೂರ್ಯ ಪ್ಲಾನ್ ಮಾಡಿಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details