ಸ್ಯಾಂಡಲ್‌ವುಡ್ ನಟಿ ಕಾರುಣ್ಯ ರಾಮ್ ತಮ್ಮ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಬಗ್ಗೆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸುದೀರ್ಘ ಬರಹವನ್ನು ಪೋಸ್ಟ್ ಮಾಡಿದ್ದಾರೆ.
ಕತ್ತರಿಸಿದ ಕೂದಲನ್ನು ಕೈಯಲ್ಲಿ ಹಿಡಿದಿರುವ ಫೋಟೋಗಳನ್ನು ಶೇರ್ ಮಾಡಿರುವ ನಟಿ, ಭಾರತೀಯ ಹೆಣ್ಣು ಮಕ್ಕಳು ತಮ್ಮ ಸೌಂದರ್ಯಕ್ಕಾಗಿ ಉದ್ದದ ಕೂಲದನ್ನು ಬೆಳೆಸುತ್ತಾರೆ. ಅಲ್ಲದೆ ತಮ್ಮ ಸುಂದರ ಕೂದಲನ್ನು ಬೆಳೆಸಲು ತುಂಬಾ ಕಷ್ಟ ಪಡುತ್ತಾರೆ ಎಂದು ನನಗೆ ಗೊತ್ತಿದೆ. ನಾನು ನನ್ನ ಕೂಲದನ್ನು ಬೆಳೆಸಲು ಮೂರು ವರ್ಷ ಕಷ್ಟ ಪಟ್ಟಿದ್ದೇನೆ. ಆದ್ರೆ 2021ರಿಂದ ಕಷ್ಟದಲ್ಲಿರುವವರಿಗೆ ಏನನ್ನಾದರೂ ಮಾಡಬೇಕೆಂದು ಬಯಸಿದ್ದೇನೆ. ಆದ್ರಿಂದ ನನ್ನ ಕೂದಲನ್ನು ಕ್ಯಾನ್ಸರ್ ಪೀಡಿತರಿಗೆ ದಾನ ಮಾಡಲು ನಿರ್ಧರಿಸಿದ್ದೇನೆ ಎಂದಿದ್ದಾರೆ.