ಬೆಂಗಳೂರು:ಕಿಲ್ಲರ್ ಕೊರೊನಾದಿಂದ ಕಂಗಾಲಾಗಿರುವ ದಿನಗೂಲಿ ಕಾರ್ಮಿಕರಿಗೆ ಬಿಗ್ಬಾಸ್ ಖ್ಯಾತಿಯ ನಟಿ ಕಾರುಣ್ಯ ರಾಮ್ ಇಂದು ದಿನಸಿ ವಿತರಿಸುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.
ಕೊರೊನಾದಿಂದ ಕಂಗಾಲಾದವರಿಗೆ ಆಹಾರ ಕಿಟ್ ವಿತರಿಸಿದ ನಟಿ ಕಾರುಣ್ಯ ರಾಮ್
ಕೊರೊನಾದಿಂದ ಕಷ್ಟಪಡುತ್ತಿರುವ ಸುಮಾರು 50 ಕುಟುಂಬಗಳಿಗೆ ಹಾಗೂ ಬೀದಿ ಬದಿಯ ನಾಯಿಗಳಿಗೆ ನಟಿ ಕಾರುಣ್ಯ ರಾಮ್ ಆಹಾರ ನೀಡಿದ್ದಾರೆ.
ಕಾರುಣ್ಯ ರಾಮ್
ಆಹಾರ ಸಾಮಗ್ರಿಗಳನ್ನು ತಂಗಿ ಹಾಗೂ ಅಮ್ಮನ ಜೊತೆ ಕೂತು ದಿನವಿಡೀ ಪೊಟ್ಟಣ ಕಟ್ಟಿರುವ ಕಾರುಣ್ಯ ಇಂದು ನಂದಿನಿ ಲೇಔಟ್ನ ಕೊಳಚೆ ಪ್ರದೇಶಗಳಲ್ಲಿ ಬಡವರಿಗೆ ಹಂಚಿದ್ದಾರೆ. ಇನ್ನು ನಟಿ ಕಾರುಣ್ಯ ರಾಮ್ ಕೆಲಸಕ್ಕೆ ನಟ ಯಶಸ್ ಸೂರ್ಯ ಕೂಡಾ ಸಾಥ್ ನೀಡಿದ್ದಾರೆ. ಕಾರುಣ್ಯ ಬಡಜನರಿಗೆ ಮಾತ್ರವಲ್ಲದೆ ಬೀದಿ ಬದಿಯ ನಾಯಿಗಳಿಗೆ ಕೂಡಾ ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ. ಒಟ್ಟಿನಲ್ಲಿ ಲಾಕ್ ಡೌನ್ ಆದಾಗಿನಿಂದ ಸ್ಯಾಂಡಲ್ವುಡ್ ನಟ ನಟಿಯರು ಬಡವರ ನೆರವಿಗೆ ನಿಂತು ಮಾನವೀಯತೆ ಮೆರೆಯುತ್ತಿದ್ದಾರೆ.