ಮುಂಬೈ: ಬಹು ನಿರೀಕ್ಷಿತ ಲವ್ ಆಜ್ ಕಲ್ ಸಿನಿಮಾ ಸೀಕ್ವೆಲ್ನ ತಮ್ಮ ಪಾತ್ರವನ್ನು ನಟ ಕಾರ್ತಿಕ್ ಆರ್ಯನ್ ರಿವೀಲ್ ಮಾಡಿದ್ದಾರೆ. ಇದು ಸಲ್ಮಾನ್ ಖಾನ್ ಅವರ ಮೈನೆ ಪ್ಯಾರ್ ಕಿಯಾ ಚಿತ್ರದ ನಾಯಕನ ಪಾತ್ರಕ್ಕೂ ಈ ಸಿನಿಮಾಗೂ ಏನೋ ಒಂದು ಕನೆಕ್ಷನ್ ಇದೆ ಎಂಬುದನ್ನು ಒತ್ತಿ ಹೇಳಿದ್ದಾರೆ.
ಕಾರ್ತಿಕ್ ಅವರು ಇನ್ಸ್ಟಾಗ್ರಾಂನಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ಚಿತ್ರದಲ್ಲಿ, ಸ್ಕೂಲ್ ಯೂನಿಫಾರ್ಮ್ನಲ್ಲಿರುವ ಅವರು, ಬಿಳಿ ಶರ್ಟ್, ಬಿಸ್ಕತ್ ಬಣ್ಣದ ಪ್ಯಾಂಟ್ ಮತ್ತು ನೀಲಿ ಟೈ ಧರಿಸಿದ್ದಾರೆ. ಅವರ ಹಿಂದೆ ಮೈನೆ ಪ್ಯಾರ್ ಕಿಯಾ ಚಿತ್ರದಲ್ಲಿ ನಟಿಸಿದ್ದ ಸಲ್ಮಾನ್ ಖಾನ್ ಅವರ ಫೋಟೊ ಹಿಂಬದಿಯಲ್ಲಿದೆ.
1990 ರ ದಶಕದ 'ವಾಂಟೆಡ್' ಸ್ಟಾರ್ ಚಿತ್ರದಲ್ಲಿ ಸಲ್ಮಾನ್ ಅವರಂತೆ ಈ ಚಿತ್ರದಲ್ಲಿ ಕಾರ್ತಿಕ್ ನಟಿಸುತ್ತಿರುವುದರಿಂದ ಚಿತ್ರವು ಸಲ್ಮಾನ್ ಖಾನ್ ಅವರೊಂದಿಗೆ ಸಂಪರ್ಕ ಸಾಧಿಸಿದಂತಿದೆ.
ಈ ಚಿತ್ರದಲ್ಲಿ ಸಾರಾ ಅಲಿ ಖಾನ್ ಜೊತೆಗೆ ಕಾರ್ತಿಕ್ ಆರ್ಯನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಮ್ತಿಯಾಜ್ ಅಲಿ ನಿರ್ದೇಶನದ ಈ ಚಿತ್ರದಲ್ಲಿ ರಣದೀಪ್ ಹೂಡಾ ಮತ್ತು ಅರುಶಿ ಶರ್ಮಾ ಗಮನಾರ್ಹ ಪಾತ್ರಗಳಲ್ಲಿ ಅಭಿನಯ ಮಾಡಿದ್ದಾರೆ.
ಫೆಬ್ರವರಿ 14 ರಂದು ಬಿಡುಗಡೆಯಾಗಲಿರುವ ಈ ಚಲನಚಿತ್ರವು ಕಾರ್ತಿಕ್ ಮತ್ತು ಸಾರಾ ಅವರನ್ನು ವೀರ್ ಮತ್ತು ಜೊ ಪಾತ್ರದಲ್ಲಿ ಪ್ರಸ್ತುತಪಡಿಸುತ್ತಿದೆ. ಇದೇ ಸಿನಿಮಾ 2009 ರಲ್ಲಿ ಬಿಡುಗಡೆ ಆಗಿತ್ತು. ಆಗ ಸೈಫ್ ಅಲಿ ಖಾನ್, ದೀಪಿಕಾ ಪಡಕೋಣೆಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.