ಕರ್ನಾಟಕ

karnataka

ETV Bharat / sitara

ಕಲ್ಲುರ್ಟಿ-ಕಲ್ಕುಡ ದೈವದ ಪಾಡ್ದನ ಆಧಾರಿತ ತುಳು ಸಿನಿಮಾ 'ಕಾರ್ಣಿಕೊದ ಕಲ್ಲುರ್ಟಿ' ನಾಳೆ ತೆರೆಗೆ - karnikoda kallurti will released tomorrow

ಕಲ್ಲುರ್ಟಿ-ಕಲ್ಕುಡ ದೈವದ ಪಾಡ್ದನ ಆಧಾರಿತ 'ಕಾರ್ಣಿಕೊದ ಕಲ್ಲುರ್ಟಿ' ತುಳು ಸಿನಿಮಾ ನಾಳೆ ತೆರೆ ಕಾಣಲಿದೆ.

karnikoda kallurti tulu movie will be released tomorrow
'ಕಾರ್ಣಿಕೊದ ಕಲ್ಲುರ್ಟಿ' ನಾಳೆ ತೆರೆಗೆ

By

Published : Dec 2, 2021, 1:44 PM IST

ಮಂಗಳೂರು: ಕೋಟಿ ಚೆನ್ನಯ್ಯ, ತುಳುನಾಡ ಸಿರಿ, ಪರತಿ ಮಂಙಣೆ, ಅಗೋಳಿ ಮಂಜಣ್ಣ ಮುಂತಾದ ತುಳು ಪಾಡ್ದನ ಆಧಾರಿತ ಸಿನಿಮಾಗಳು ಈಗಾಗಲೇ ಕೋಸ್ಟಲ್​ವುಡ್​ನಲ್ಲಿ ತೆರೆ ಕಂಡಿವೆ. ಇದೀಗ ಆ ಸಾಲಿಗೆ ಕಲ್ಲುರ್ಟಿ - ಕಲ್ಕುಡ ದೈವದ ಪಾಡ್ದನ ಆಧಾರಿತ 'ಕಾರ್ಣಿಕೊದ ಕಲ್ಲುರ್ಟಿ' ತುಳು ಸಿನಿಮಾ ಸೇರಲಿದ್ದು, ನಾಳೆ (ಡಿಸೆಂಬರ್ 3ರಂದು) ತೆರೆ ಕಾಣಲಿದೆ.


ಸುಮಾರು 400 ವರ್ಷಗಳಿಗೂ ಹಿಂದಿನ ಕಥಾ ಹಂದರವುಳ್ಳ ಈ ಸಿನಿಮಾವು ಕಲ್ಲುರ್ಟಿ - ಕಲ್ಕುಡ ಪಾಡ್ದನ ಆಧಾರಿತವಾಗಿದೆ. ಪುರುಷ ಸಮಾಜದ ದೌರ್ಜನ್ಯ, ದಬ್ಬಾಳಿಕೆಯನ್ನು ಮೆಟ್ಟಿ ನಿಲ್ಲುವ ಗಟ್ಟಿದನಿಯ ಹೆಣ್ಣು ಕಾಳಮ್ಮ ಮುಂದೆ ಕಾಯ ಬಿಟ್ಟು ಮಾಯ ಸೇರಿ ಕಲ್ಲುರ್ಟಿ ದೈವವಾಗಿ ತುಳುನಾಡಿನ ಕುಲದೇವತೆಯಾಗಿ ಮನೆ ಮನೆಯಲ್ಲೂ ಆರಾಧನಾ ಶಕ್ತಿಯಾಗುತ್ತಾಳೆ.

ಇದೀಗ ಮಹೇಂದ್ರ ಕುಮಾರ್ ಅವರು ಇದೇ ಕಥಾವಸ್ತು ಆಧರಿಸಿ ಸಿನಿಮಾ ನಿರ್ಮಿಸಿದ್ದಾರೆ. ಕಾರ್ಣಿಕೊದ ಕಲ್ಲುರ್ಟಿ ಸಿನಿಮಾವು ಮಹೇಂದ್ರ ಕುಮಾರ್ ಅವರ ಚೊಚ್ಚಲ ಸಿನಿಮಾ.


ಕಲ್ಲುರ್ಟಿ-ಕಲ್ಕುಡ ದೈವಗಳ ಮೂಲ ಕಥೆ ನಡೆದಿರೋದು ಕಾರ್ಕಳದಲ್ಲಿ. ಹಾಗಾಗಿ, ಸಿನಿಮಾ ಚಿತ್ರೀಕರಣವನ್ನು ಕಾರ್ಕಳದಲ್ಲಿ ಮಾಡಲಾಗಿದೆ. ಸಿನಿಮಾದಲ್ಲಿ ಗ್ರಾಫಿಕ್ಸ್​​ಗಳನ್ನು ಬಳಸಿಕೊಳ್ಳಲಾಗಿದೆ. 400 ವರ್ಷಗಳ ಹಿಂದಿನ ಕಥೆಯಾದ್ದರಿಂದ ಸನ್ನಿವೇಶ, ಚಿತ್ರೀಕರಣದ ಸ್ಥಳ, ಕಾಸ್ಟ್ಯೂಮ್, ಭಾಷೆಗೆ ಹೆಚ್ಚಿನ ಗಮನಹರಿಸಿ ಚಿತ್ರೀಕರಣ ಮಾಡಲಾಗಿದೆ ಎಂದು‌ ಸಿನಿಮಾ ನಿರ್ದೇಶಕ - ನಿರ್ಮಾಪಕ ‌ಮಹೇಂದ್ರ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ:ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಮ್ ಆಸ್ಪತ್ರೆಗೆ ದಾಖಲು: ಆರೋಗ್ಯ ಸ್ಥಿತಿ ಗಂಭೀರ

ಬೆಂಗಳೂರಿನ ಹಿತನ್ ಹಾಸನ್ ಸಂಗೀತ ನೀಡಿದ್ದಾರೆ. ಚಿತ್ರದ ಹಾಡುಗಳನ್ನು ಯೂಟ್ಯೂಬ್​ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಹಾಡಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. 1.75 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದ್ದು, 2019ರಲ್ಲಿ ಸಿನಿಮಾದ ಸೆನ್ಸಾರ್ ಸರ್ಟಿಫಿಕೇಟ್ ದೊರಕಿದರೂ ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆಯಾಗಿರಲಿಲ್ಲ. ಇದೀಗ ಸಿನಿಮಾ ಬಿಡುಗಡೆಯಾಗಲಿದ್ದು, ತುಳುವರೆಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಬೇಕೆಂದು ಮಹೇಂದ್ರ ಕುಮಾರ್ ಮನವಿ ಮಾಡಿಕೊಂಡರು.

ABOUT THE AUTHOR

...view details