ಕರ್ನಾಟಕ

karnataka

ಮೊದಲೇ ಶೇ.50ರಷ್ಟು ಮಾತ್ರ ಅವಕಾಶ ಎಂದಿದ್ರೆ ಯುವರತ್ನ ರಿಲೀಸ್​ ಆಗ್ತಿರಲಿಲ್ಲ : ಜಯರಾಜ್

By

Published : Apr 3, 2021, 4:58 PM IST

ಸಿನಿಮಾ‌ ನೋಡೋಕೆ ಜನ ಚಿತ್ರ ಮಂದಿರಕ್ಕೆ ಬರುತ್ತಿದ್ದಾರೆ. ಸರ್ಕಾರದ ಆದೇಶ ಪಾಲಿಸೋದು ನಮ್ಮ ಕರ್ತವ್ಯ. ಆದರೂ ಚಿತ್ರಮಂದಿರ ಉಳಿಸಿಕೊಳ್ಳೋದು ನಮ್ಮ ಜವಾಬ್ದಾರಿ..

Film Chamber President Jayaraj
ಫಿ.ಚೇಂ ಅಧ್ಯಕ್ಷ ಜಯರಾಜ್

ಬೆಂಗಳೂರು: ಕೊರೊನಾ ಎರಡನೇ ಅಲೆ ಕಟ್ಟಿ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ. 50 ಪರ್ಸೆಂಟ್ ಪ್ರೇಕ್ಷಕರಿಗೆ ಅವಕಾಶ ನೀಡಿರುವ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಿರೋಧ ವ್ಯಕ್ತಪಡಿಸಿದೆ.

ಯುವರತ್ನ ಸಿನಿಮಾ ಬಿಡುಗಡೆ ಆಗಿ ಒಂದೇ ದಿನಕ್ಕೆ ರಾಜ್ಯ ಸರ್ಕಾರದ ನೀತಿ ಬಗ್ಗೆ ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್ ಮಾತನಾಡಿ, ಸಿನಿಮಾ‌ ನೋಡೋಕೆ ಜನ ಚಿತ್ರ ಮಂದಿರಕ್ಕೆ ಬರುತ್ತಿದ್ದಾರೆ. ಸರ್ಕಾರದ ಆದೇಶ ಪಾಲಿಸೋದು ನಮ್ಮ ಕರ್ತವ್ಯ. ಆದರೂ ಚಿತ್ರಮಂದಿರ ಉಳಿಸಿಕೊಳ್ಳೋದು ನಮ್ಮ ಜವಾಬ್ದಾರಿ.

ಸರ್ಕಾರದ ಮಾರ್ಗಸೂಚಿ ಪರ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ಅತೃಪ್ತಿ..

ಮೊದಲೇ ಹೇಳಿದ್ದರೆ ಯುವರತ್ನ ಸಿನಿಮಾ ಬಿಡುಗಡೆ ಆಗುತ್ತಿರಲಿಲ್ಲ. ಯುವರತ್ನ ಸಿನಿಮಾಗಾಗಿ ವಿನಾಯಿತಿ ಕೊಡಿ ಎಂದು ಸರ್ಕಾರಕ್ಕೆ ಮನವಿ ‌ಮಾಡುತ್ತೇವೆ ಎಂದರು. ಫಿಲ್ಮ್ ಚೇಂಬರ್ ಗೌರವ ಕಾರ್ಯದರ್ಶಿ ಎನ್.ಎಂ ಸುರೇಶ್ ಮಾತನಾಡಿ, ಆರೋಗ್ಯ ಸಚಿವರು ಚಿತ್ರರಂಗದ ಬಗ್ಗೆ ಮೊದಲು ಮಾಹಿತಿ ತಿಳಿದುಕೊಳ್ಳಲಿ.

ಅವರಿಗೆ ಮಾಹಿತಿ ಕೊರತೆ ಇದೆ ಅಂತ ಅನ್ನಿಸುತ್ತೆ. ಯುವರತ್ನ ಚಿತ್ರ ಬಿಡುಗಡೆ ಆದ ಕೂಡಲೇ 50% ಮಾಡಿರೋದು ಯಾವುದೋ ಉದ್ದೇಶ ಇರಬೇಕು.ಇದು ಪ್ರೀ ಪ್ಲಾನ್ ತರ ಕಾಣುತ್ತಿದೆ. ಇಲ್ಲಿ ಯಾರೋ ಕಾಣದ ಕೈಗಳು ಕೆಲಸ ಮಾಡುತ್ತಿದೆ ಎಂದು ಅನಿಸುತ್ತಿದೆ ಎಂದು ಎನ್ ಎಂ ಸುರೇಶ್ ಆಕ್ರೋಶದ ಮಾತುಗಳನ್ನ ಆಡಿದರು.

ABOUT THE AUTHOR

...view details