ETV Bharat Karnataka

ಕರ್ನಾಟಕ

karnataka

ETV Bharat / sitara

ಸರ್ಕಾರದ ಜೊತೆಗೂಡಿ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚಲು ಮುಂದಾದ ಚಲನಚಿತ್ರ ಆಕಾಡೆಮಿ - ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚಲು ಮುಂದಾದ ಚಲನಚಿತ್ರ ಆಕಾಡೆಮಿ

ರಿಲಯನ್ಸ್​ ಫೌಂಡೇಶನ್ ನೀಡಿದ 2 ಕೋಟಿ ಮೊತ್ತದ ಆಹಾರ ಸಾಮಾಗ್ರಿಗಳನ್ನು ಸರ್ಕಾರದ ಜೊತೆಗೂಡಿ ಚಿತ್ರರಂಗದಲ್ಲಿ ಕಷ್ಟದಲ್ಲಿರುವವರಿಗೆ ಕೂಪನ್ ಮೂಲಕ ವಿತರಿಸಲು ಕರ್ನಾಟಕ ಚಲನಚಿತ್ರ ಆಕಾಡೆಮಿ ಮುಂದಾಗಿದೆ.

Karnataka Film Academy will help the needy
Karnataka Film Academy will help the needy
author img

By

Published : Apr 17, 2020, 11:24 AM IST

ಬೆಂಗಳೂರು :ಲಾಕ್ ಡೌನ್​ ಹಿನ್ನೆಲೆಸಂಕಷ್ಟದಲ್ಲಿರುವವರಿಗೆ ನೆರವಾಗಲು ಕರ್ನಾಟಕ ಚಲನಚಿತ್ರ ಅಕಾಡೆಮಿ ಮುಂದಾಗಿದೆ. ಇತ್ತೀಚಿಗೆ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್ ಜೈರಾಜ್ ಹಾಗೂ ಹಿರಿಯ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸಿ.ಎಂ ಬಿ.ಎಸ್ ಯಡಿಯೂರಪ್ಪರನ್ನು ಭೇಟಿ ಮಾಡಿ ಚಿತ್ರ ರಂಗ ಅನುಭವಿಸುತ್ತಿರುವ ತೊಂದರೆಗಳನ್ನು ಹೇಳಿಕೊಂಡಿದ್ದಾರೆ.

ಅಕಾಡೆಮಿ ಅಧ್ಯಕ್ಷ ಪುರಾಣಿಕ್ ಪ್ರಕಾರ ಚಿತ್ರರಂಗದ 15 ಸಾವಿರ ಸಂಘಟಿತ ಹಾಗೂ ಅಸಂಘಟಿತ ಜನರಿಗೆ ಸಹಾಯ ಮಾಡಲು ಕೋರಲಾಗಿದೆ. ಅದರಲ್ಲಿ ಮೊದಲ ಆದ್ಯತೆ ಚಿತ್ರರಂಗದ 28 ಸಂಘ ಸಂಸ್ಥೆಗಳ 6 ಸಾವಿರ ನೀಡಲಾಗಿದೆ. ಇನ್ನು ಚಲನಚಿತ್ರ ಅಕಾಡೆಮಿ ಸರ್ಕಾರದ ಜೊತೆಗೂಡಿ ನೀಡುತ್ತಿರುವ ಸಹಾಯ ಹಣದ ರೂಪದಲ್ಲಿ ನೀಡಲಾಗುತ್ತಿಲ್ಲ. ರಿಲಯನ್ಸ್ ಫೌಂಡೇಶನ್ ನೀಡಿದ 2 ಕೋಟಿ ಮೊತ್ತದ ಆಹಾರ ಸಾಮಾಗ್ರಿಗಳನ್ನು ನೀಡಲಾಗುವುದು. ಒಬ್ಬ ವ್ಯಕ್ತಿಗೆ 5 ಸಾವಿರ ರೂಪಾಯಿಯ ರಿಲಯನ್ಸ್ ಕೂಪನ್ ನೀಡಲಾಗುವುದು. ಅವರು ತಮಗೆ ಬೇಕಾದ ವಸ್ತುಗಳನ್ನು ರಿಲಯನ್ಸ್ ಮಳಿಗೆಗಳಲ್ಲಿ ಖರೀದಿಸಬಹುದು.

ಮುಖ್ಯಮಂತ್ರಿಯನ್ನು ಭೇಟಿಯಾದ ಬಳಿಕ ನಮಗೆ ಹಣದ ಅವಶ್ಯಕತೆ ಇದೆ ಎಂಬ ಕೂಗು ಚಿತ್ರರಂಗದಿಂದ ಕೇಳಿ ಬಂದಿದೆ. ಆದರೆ ಹಣದ ರೂಪದಲ್ಲಿ ಸಹಾಯ ಮಾಡಲು ಕಾನೂನು ಅಡ್ಡಿಯಾಗುತ್ತದೆ. ಕಾರಣ, ಚಲನಚಿತ್ರ ಅಕಾಡೆಮಿ ವಾರ್ತಾ ಇಲಾಖೆ ಅಧೀನದಲ್ಲಿ ಬರುತ್ತದೆ. ವಾರ್ತಾ ಇಲಾಖೆಯು ಮುಖ್ಯಮಂತ್ರಿಯ ಸುಪರ್ಧಿಯಲ್ಲಿ ಬರುತ್ತದೆ. ಸದ್ಯಕ್ಕೆ ಸುನಿಲ್ ಪುರಾಣಿಕ್ 6 ಸಾವಿರ ವ್ಯಕ್ತಿಗಳ ಪಟ್ಟಿ ರೆಡಿ ಮಾಡುತ್ತಿದ್ದಾರೆ. ಅದನ್ನು ಸರ್ಕಾರಕ್ಕೆ ತಲುಪಿಸಿ ಮುಂದಿನ ಕೆಲಸಕ್ಕೆ ಸಜ್ಜಾಗುತ್ತಿದ್ದಾರೆ.

ಈ ಮಧ್ಯೆ ಚಲನಚಿತ್ರ ಅಕಾಡೆಮಿ ಬಳಿ ಕಳೆದ ವರ್ಷ ಬಿಡುಗಡೆಯಾದ 10 ಕೋಟಿ ರೂಪಾಯಿ ಹಣವಿದೆ. ಅದನ್ನಾದರೂ ಕೊಡಿ ಕೆಲವರು ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಆ ಹಣದಿ ಏನಿದ್ದೂ ವೈದ್ಯಕೀಯ ಅಗತ್ಯವಿದ್ದರಿಗೆ ನೀಡಲಾಗುತ್ತದೆ. ಅದಲ್ಲದೆ, ಆ ಹಣ ಮುಟ್ಟಲಾಗುವುದಿಲ್ಲ ಎಂದು ಪುರಾಣಿಕ್ ಸ್ಪಷ್ಟಪಡಿಸಿದ್ದಾರೆ. ಕೆಲವು ತಿಂಗಳನಿಂದ ಚಿತ್ರರಂಗದ ಸುಮಾರು 11 ಜನರಿಗೆ ವೈದ್ಯಕೀಯ ಸಹಾಯ ಮಾಡಲಾಗಿದೆ. ಕಳೆದ ಐದು ವರ್ಷಗಳಲ್ಲಿ ಕೇವಲ 15 ಜನರಿಗೆ ಮಾತ್ರ ವೈದ್ಯಕೀಯ ಸಹಾಯ ನೀಡಲಾಗಿತ್ತು. ಆದರೆ ನನ್ನ ಆವಧಿಯಲ್ಲಿ ಕೆಲವೇ ತಿಂಗಳೊಳಗೆ 11 ವ್ಯಕ್ತಿಗಳಿಗೆ ಸುಮಾರು 7 ಲಕ್ಷದ ವರೆಗೂ ಸಹಾಯ ಮಾಡಲಾಗಿದೆ ಎಂದು ಪುರಾಣಿಕ್ ಹೇಳಿದ್ದಾರೆ.

ಕರ್ನಾಟಕ ಚಲಚಿತ್ರ ಅಕಾಡೆಮಿ ಪ್ರಾರಂಭವಾದಗ ಟಿ.ಎಸ್ ನಾಗಾಭರಣ ಅಧ್ಯಕ್ಷರಾಗಿದ್ದರು. ಬಳಿಕ ತಾರಾ ಅನುರಾಧ, ಎಸ್​.ವಿ ರಾಜೇಂದ್ರ ಸಿಂಗ್ ಬಾಬು ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಅಧ್ಯಕ್ಷ ಪಟ್ಟವನ್ನು ಅಲಂಕರಿಸಿದ್ದರು. ಹಾಲಿ ಅಧ್ಯಕ್ಷ ಸುನಿಲ್ ಪುರಾಣಿಕ್ ಅಧ್ಯಕ್ಷರಾಗಿ ಕೆಲವೇ ತಿಂಗಳು ಆಗಿದೆ. ಅಷ್ಟೊರೊಳಗೆ ಕೊರೊನಾ ಮಹಾಮಾರಿ ಆವರಿಸಿ ಆತಂಕ ಹುಟ್ಟಿಸಿದೆ.

ಸುನಿಲ್ ಪುರಾಣಿಕ್ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ 12 ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ ಫೆಬ್ರವರಿ 26 ರಿಂದ ಮಾರ್ಚ್ 3 ರ ವರೆಗೆ ನಡೆದಿದ್ದು ಬಿಟ್ಟರೆ ಅಕಾಡೆಮಿಯಿಂದ ಯಾವುದೇ ಚಟುವಟಿಕೆ ಆಗಿಲ್ಲ. ಅಷ್ಟೇ ಏಕೆ, ಅಕಾಡೆಮಿಯ ಸದಸ್ಯರುಗಳನ್ನು ಸಹ ಇನ್ನೂ ನೇಮಕ ಮಾಡಿಲ್ಲ. ಕೇವಲ ಅಧ್ಯಕ್ಷ ಸುನಿಲ್ ಪುರಾಣಿಕ್ ಮತ್ತು ರಿಜಿಸ್ಟ್ರಾರ್ ಹಿಮಾಂತ್ ರಾಜ್ ಕಾರ್ಯ ಚಟುವಟಿಕೆ ನಡೆಸುತ್ತಾ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಹಲವಾರು ಚಟುವಟಿಕೆ ಹಿರಿಯರ ಜೊತೆ ಸಂಪರ್ಕಿಸಿ ಮುಂದೆ ಸಾಗಲಿದ್ದೇನೆ ಎಂದು ಸುನಿಲ್ ಪುರಾಣಿಕ್ ತಿಳಿಸಿದ್ದಾರೆ.

ABOUT THE AUTHOR

...view details