ಕರ್ನಾಟಕ

karnataka

ETV Bharat / sitara

ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಕುಟುಂಬದ ಕಾರ್ಯಕ್ರಮ: ಕೈಜೋಡಿಸಿದ ಗಣ್ಯರು - ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕ ಅದ್ದೂರಿ ಕಾರ್ಯಕ್ರಮ

ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕ ಸಂಘ ಬರೋಬ್ಬರಿ 35 ವಸಂತಗಳನ್ನು ಪೂರೈಸಿದ್ದು, ಇದೇ ಸಂಭ್ರಮದಲ್ಲಿ ಮೊದಲ ಬಾರಿಗೆ ವಿಶೇಷವಾಗಿ ಅದ್ದೂರಿ ಕಾರ್ಯಕ್ರಮವನ್ನು ಫೆಬ್ರವರಿ 9ಕ್ಕೆ ಆಯೋಜಿಸಿದೆ.

Karnataka cinematography 35  years Fiction
ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಕುಟುಂಬದ ಕಾರ್ಯಕ್ರಮಕ್ಕೆ ಕೈಜೋಡಿಸಿದ ಗಣ್ಯರು

By

Published : Feb 6, 2020, 8:46 AM IST

ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಸಂಘ ಬರೋಬ್ಬರಿ 35 ವಸಂತಗಳನ್ನು ಪೂರೈಸಿದ್ದು, ಇದೇ ಸಂಭ್ರಮದಲ್ಲಿ ಕರ್ನಾಟಕ ಚಲನ ಚಿತ್ರ ಛಾಯಾಗ್ರಾಹಕ ಸಂಘ ಮೊದಲ ಬಾರಿಗೆ ವಿಶೇಷವಾಗಿ ಅದ್ದೂರಿ ಕಾರ್ಯಕ್ರಮವನ್ನು ಫೆಬ್ರವರಿ 9ಕ್ಕೆ ಅಯೋಜಿಸಿದೆ. ಚೌಡಯ್ಯ ಮೆಮೋರಿಯಲ್ ಹಾಲ್​ನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿರುವವರನ್ನು ಗುರುತಿಸಿ 108 ಜನರಿಗೆ ಸನ್ಮಾನ ಮಾಡಲಾಗುತ್ತದೆ.

ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಕುಟುಂಬದ ಕಾರ್ಯಕ್ರಮಕ್ಕೆ ಕೈಜೋಡಿಸಿದ ಗಣ್ಯರು

ಇನ್ನು ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಛಾಯಾಗ್ರಾಹಕರ ಸಂಘದ ಈ ಕಾರ್ಯಕ್ರಮಕ್ಕೆ ಇಡೀ ಚಿತ್ರರಂಗ ಬೆನ್ನಿಗೆ ನಿಂತಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಚಿಕ್ಕಣ್ಣ, ಸಾಧುಕೋಕಿಲ, ಉಮಾಶ್ರೀ, ರಾಘವೇಂದ್ರ ರಾಜಕುಮಾರ್, ಮಾಜಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಡಾ ಅಶ್ವಥ್​ ಸೇರಿದಂತೆ ಹಲವರು ಕೈಜೋಡಿಸಿದ್ದಾರೆ.

ಈ ಕಾರ್ಯಕ್ರಮ ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಜಿಜೆ ಕೃಷ್ಣ ನೇತೃತ್ವದಲ್ಲಿ ನಡೆಯುತ್ತಿದ್ದು, ಈ ಸಮಾರಂಭದಲ್ಲಿ ಛಾಯಾಗ್ರಾಹಕರ ಕುಟುಂಬದವರಿಗೂ ಅರಿಶಿನ-ಕುಂಕುಮ ಕೊಟ್ಟು ಸತ್ಕಾರ ಮಾಡಲಾಗುತ್ತದೆ.

ABOUT THE AUTHOR

...view details