ಕರ್ನಾಟಕ

karnataka

ETV Bharat / sitara

ಸ್ಯಾಂಡಲ್​ವುಡ್​ಗೆ ಬಿಗ್​​ ಗಿಫ್ಟ್​​​ : ಫಿಲಂ ಸಿಟಿ ನಿರ್ಮಾಣಕ್ಕೆ 500 ಕೋಟಿ ಮೀಸಲು - ಕರ್ನಾಟಕ ರಾಜ್ಯ ಬಜೆಟ್​ 2020

ಬಜೆಟ್​​ನಲ್ಲಿ ಬೆಂಗಳೂರಿನಲ್ಲಿ ಫಿಲಂ ಸಿಟಿ ನಿರ್ಮಾಣಕ್ಕೆ 500 ಕೋಟಿ ರೂ. ಮೀಸಲಿಡಲಾಗಿದೆ. ಹಾಗೂ ಬೆಂಗಳೂರಿನ ಚಿತ್ರಸಂತೆಗೆಂದು ಒಂದು ಕೋಟಿ ರೂ. ಅನುದಾನ ನೀಡಲಾಗಿದೆ.

Karnataka Budget: CM yeddyurappa seventh budget
ಸ್ಯಾಂಡಲ್​ವುಡ್​ಗೆ ಬಿಗ್​​ ಗಿಫ್ಟ್​​​ ಫಿಲಂ ಸಿಟಿ ನಿರ್ಮಾಣಕ್ಕೆ 500 ಕೋಟಿ

By

Published : Mar 5, 2020, 12:46 PM IST

ಬೆಂಗಳೂರು : ಸದ್ಯ ಯಡಿಯೂರಪ್ಪನವರು ತಮ್ಮ ಏಳನೇ ಆಯವ್ಯಯ ಮಂಡಿಸುತ್ತಿದ್ದಾರೆ. ಇದ್ರಲ್ಲಿ ಸಿನಿಮಾ ರಂಗಕ್ಕೆ ಕೆಲವೊಂದು ಅನುದಾನವನ್ನು ಮಂಡಿಸಿದ್ದಾರೆ.

ಬಜೆಟ್​​ನಲ್ಲಿ ಬೆಂಗಳೂರಿನಲ್ಲಿ ಫಿಲಂ ಸಿಟಿ ನಿರ್ಮಾಣಕ್ಕೆ 500 ಕೋಟಿ ರೂ. ಮೀಸಲಿಡಲಾಗಿದೆ. ಹಾಗೂ ಬೆಂಗಳೂರಿನ ಚಿತ್ರಸಂತೆಗೆಂದು ಒಂದು ಕೋಟಿ ರೂ. ಅನುದಾನ ನೀಡಲಾಗಿದೆ.

ಇತ್ತೀಚೆಗೆ ನಡೆದ 12ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಬೇಡಿಕೆ ಇಟ್ಟಿದ್ದ ನಟ ಯಶ್​ ರಾಜ್ಯದಲ್ಲಿ ಚಿತ್ರ ನಗರವನ್ನ ನಿರ್ಮಿಸಿಕೊಡಿ ಎಂದು ಸಿಎಂಗೆ ಕೇಳಿಕೊಂಡಿದ್ದರು.

ಸ್ಯಾಂಡಲ್​ವುಡ್​ಗೆ ಬಿಗ್​​ ಗಿಫ್ಟ್​​​ ಫಿಲಂ ಸಿಟಿ ನಿರ್ಮಾಣಕ್ಕೆ 500 ಕೋಟಿ

ಇನ್ನು ನಿನ್ನೆ ಮಾತನಾಡಿದ್ದ ಕರ್ನಾಟಕ ಚನಲಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ ಆರ್ ಜೈರಾಜ್ ಹಾಗೂ ಉಪಾಧ್ಯಕ್ಷ ಉಮೇಶ್ ಬಣಕಾರ್, ಮಾಜಿ ಅಧ್ಯಕ್ಷ ಸಾರಾ ಗೋವಿಂದು, ಯಡಿಯೂರಪ್ಪನವರ ಈ ಬಜೆಟ್ ಮೇಲೆ ಕನ್ನಡ ಚಿತ್ರರಂಗ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ ಎಂದಿದ್ದರು. ಅಲ್ಲದೇ ಕನ್ನಡ ಚಿತ್ರರಂಗದ ಬಹು ದಿನದ ಬೇಡಿಕೆಯಾದ ಚಿತ್ರನಗರಿ, ಏಕ ಗವಾಕ್ಷಿ ಪದ್ದತಿ, ಹಾಗೂ ಜಿ ಎಸ್ ಟಿ ಹಣ ನಿರ್ಮಾಪಕರಿಗೆ ನೇರವಾಗಿ ಜಮಾವಣೆ ಆಗಬೇಕು ಎಂಬುದು ನಮ್ಮ ಬೇಡಿಕೆ ಅಂತ ತಿಳಿಸಿದ್ದರು.

ABOUT THE AUTHOR

...view details