ಕೃಷ್ಣನ ಗೀತೋಪದೇಶದಲ್ಲಿನ 'ಕರ್ಮಣ್ಯೇ ವಾಧಿಕಾರಸ್ತೇ' ಎಂಬ ಸಾಲನ್ನೇ ಟೈಟಲ್ ಆಗಿ ಬಳಸಿ ಹೊಸಬರ ತಂಡವೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ರೆಡಿಮಾಡಿದೆ. ಚಿತ್ರದ ಫಸ್ಟ್ ಲುಕ್ ಟೀಸರ್ ಅನ್ನು ನಟ, ನಿರ್ದೇಶಕ ರಿಷಬ್ ಶೆಟ್ಟಿ ಲಾಂಚ್ ಮಾಡಿ ಚಿತ್ರ ತಂಡಕ್ಕೆ ವಿಶ್ ಮಾಡಿದ್ರು.
'ಕರ್ಮಣ್ಯೇ ವಾಧಿಕಾರಸ್ತೇ' ಫಸ್ಟ್ ಲುಕ್ ರಿವೀಲ್ ಮಾಡಿದ ರಿಷಬ್ ಶೆಟ್ಟಿ - kannada news movie Karmanye vadhikarsthe
'ಕರ್ಮಣ್ಯೇ ವಾಧಿಕಾರಸ್ತೇ' ಎಂಬ ಭಗವದ್ಗೀತೆ ಸಾಲನ್ನೇ ಟೈಟಲ್ ಆಗಿ ಬಳಸಿ ಹೊಸಬರ ತಂಡವೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ರೆಡಿಮಾಡಿದೆ. ಚಿತ್ರದ ಫಸ್ಟ್ ಲುಕ್ ಟೀಸರ್ ಅನ್ನು ನಟ, ನಿರ್ದೇಶಕ ರಿಷಬ್ ಶೆಟ್ಟಿ ಲಾಂಚ್ ಮಾಡಿ ಚಿತ್ರ ತಂಡಕ್ಕೆ ವಿಶ್ ಮಾಡಿದ್ರು.
'ಕರ್ಮಣ್ಯೇ ವಾಧಿಕಾರಸ್ತೇ' ಫಸ್ಟ್ ಲುಕ್ ರಿವೀಲ್ ಮಾಡಿದ ರಿಷಬ್ ಶೆಟ್ಟಿ
ಫಸ್ಟ್ ಲುಕ್ ನೋಡಿ ನಿರ್ದೇಶಕರ ಸೃಜನಶೀಲತೆಗೆ ಡಿಟೆಕ್ಟಿವ್ ದಿವಾಕರ ಬೆನ್ನು ತಟ್ಟಿದ್ದಾರೆ. ಇನ್ನೂ ಈ ಚಿತ್ರಕ್ಕೆ ಜಾಹೀರಾತುಗಳನ್ನ ನಿರ್ದೇಶನ ಮಾಡುತ್ತಿದ್ದ ಶ್ರೀಹರಿ ಆಕ್ಷನ್ ಕಟ್ ಹೇಳಿದ್ದು, ಯುವನಟ ಪ್ರತೀಕ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದಲ್ಲಿ ದಿವ್ಯ ಗೌಡ ಹಾಗೂ ಮಾಡೆಲ್ ಡೋಲಾಮ್ ಲೀಡ್ ರೋಲ್ ಪ್ಲೇ ಮಾಡಿದ್ದಾರೆ. ಚಿತ್ರಕ್ಕೆ ರಾಘವೇಂದ್ರ ಸಂಗೀತ ನಿರ್ದೇಶನ ಮಾಡಿದ್ದು, ಉದಯ್ ಲೀಲಾ ಛಾಯಾಗ್ರಹಣವಿದೆ. ಅಮೆರಿಕದಲ್ಲಿ ವೈದ್ಯರಾಗಿರುವ ರಮೇಶ್ ರಾಮಯ್ಯ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ಸದ್ಯ 'ಕರ್ಮಣ್ಯೇವಾಧಿಕಾರಸ್ತೇ' ಪೋಸ್ಟ್ ಪ್ರೊಡಕ್ಷನ್ ವರ್ಕ್ನಲ್ಲಿ ಬ್ಯುಸಿಯಾಗಿದೆ
Last Updated : Oct 31, 2019, 10:33 AM IST