ಕರ್ನಾಟಕ

karnataka

ETV Bharat / sitara

ಸೈಫೀನಾ​ ಜೋಡಿಯ 7ನೇ ವಿವಾಹ ವಾರ್ಷಿಕೋತ್ಸವ: ಫೋಟೋ ನೋಡಿ - ಬಾಲಿವುಡ್​ ವೆಡ್ಡಿಂಗ್​ ಆನಿವರ್ಸರಿ

ಕರೀನಾ ಕಪೂರ್​ ಹಾಗು ಸೈಫ್​ ಅಲಿಖಾನ್​​ ಬುಧವಾರ ತಮ್ಮ 7ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಇವರು ಅಕ್ಟೋಬರ್​ 16, 2012ರಲ್ಲಿ ಹಸೆಮಣೆ ಏರಿದ್ದರು. ಈ ಬಾರಿ ತಮ್ಮ ಕುಟುಂಬದೊಂದಿದೆ ಸರಳವಾಗಿ ವೆಡ್ಡಿಂಗ್​ ಆ್ಯ ನಿವರ್ಸರಿ ಆಚರಿಸಿಕೊಂಡಿರುವ ಈ ಜೋಡಿ, ಮಗ ತೈಮೂರ್​​ನೊಂದಿದೆ ಕೇಕ್‌​​ ಕಟ್​ ಮಾಡಿ ಖುಷಿಪಟ್ಟಿದೆ.

ಕರೀನ-ಸೈಫ್​ ಜೋಡಿ

By

Published : Oct 17, 2019, 3:08 PM IST

ಬಾಲಿವುಡ್​ ಮೋಸ್ಟ್​ ಬ್ಯೂಟಿಫುಲ್​ ಕಪಲ್​ಗಳ ಪೈಕಿ ಕರೀನಾ ಕಪೂರ್​ ಮತ್ತು ಸೈಫ್​​​​​ ಅಲಿಖಾನ್​​ ಜೋಡಿಯೂ ಒಂದು. ಈ ಜೋಡಿ ಬುಧವಾರ ತಮ್ಮ ಏಳನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದೆ.

ಈ ಬಾರಿ ತಮ್ಮ ಕುಟುಂಬದೊಂದಿದೆ ಸರಳವಾಗಿ ವೆಡ್ಡಿಂಗ್​ ಆ್ಯನಿವರ್ಸರಿ ಆಚರಿಸಿಕೊಂಡಿರುವ ಈ ಮುದ್ದಾದ ಜೋಡಿ, ಮಗ ತೈಮೂರ್​​ನೊಂದಿದೆ ಕೇಕ್‌​​ ಕಟ್​ ಮಾಡಿ ಖುಷಿ ಹಂಚಿಕೊಂಡಿದೆ.

ಹಾರ್ಟ್​​ ಸಿಂಬಲ್​ ಇರುವ ಕೇಕ್​ ಕಟ್​ ಮಾಡುತ್ತಿರುವ ಫೋಟೋವನ್ನು ಕರೀನಾ ಕಪೂರ್​ ಮತ್ತು ಅವರ ಫ್ಯಾನ್ಸ್​ ತಮ್ಮ ಸೋಷಿಯಲ್​ ಮಿಡಿಯಾಗಳಲ್ಲಿ ಶೇರ್​ ಮಾಡಿಕೊಂಡಿದ್ದು ಕಮೆಂಟ್​ಗಳ ಸುರಿಮಳೆಯಾಗುತ್ತಿದೆ.

ಈ ಜೋಡಿಯ ಇನ್ನೊಂದು ವಿಶೇಷತೆ ಅಂದ್ರೆ ಸೈಫ್​ ಅಲಿಖಾನ್​ ಮತ್ತು ಕರೀನ ಕಪೂರ್​​ ನಡುವೆ ಬರೋಬ್ಬರಿ 11 ವರ್ಷಗಳ ವ್ಯತ್ಯಾಸವಿದೆ. ಆದರೂ ಸಹ ಯಾವುದೇ ಕುಟುಂಬ ಕಲಹಗಳಿಲ್ಲದೆ ಈ ಸಂಸಾರ ಸುಂದರವಾಗಿ ಸಾಗುತ್ತಿರುವುದಕ್ಕೆ ಅವರ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details