ಕರ್ನಾಟಕ

karnataka

ETV Bharat / sitara

ನಿಟ್ಟುಸಿರು ಬಿಟ್ಟ ಕರೀನಾ.. ನಟಿಯ ಒಮಿಕ್ರಾನ್​​​ ವರದಿ ನೆಗೆಟಿವ್

ಕೊರೊನಾ ಸೋಂಕಿಗೊಳಗಾಗಿ ಕ್ವಾರಂಟೈನ್​​ನಲ್ಲಿದ್ದ ಬಾಲಿವುಡ್ ನಟಿ ಕರೀನಾ ಕಪೂರ್​​ ಒಮಿಕ್ರಾನ್​ ವರದಿ ನೆಗೆಟಿವ್ ಬಂದಿದ್ದು, ಇದರಿಂದ ನಿರಾಳರಾಗಿದ್ದಾರೆ.

Kareena Kapoor Khan tests negative for Omicron
Kareena Kapoor Khan tests negative for Omicron

By

Published : Dec 24, 2021, 6:09 PM IST

ಮುಂಬೈ(ಮಹಾರಾಷ್ಟ್ರ):ಪಾರ್ಟಿವೊಂದರಲ್ಲಿ ಭಾಗಿಯಾಗಿ ಕೊರೊನಾ ಸೋಂಕಿಗೊಳಗಾಗಿದ್ದ ಬಾಲಿವುಡ್ ನಟಿ ಕರೀನಾ ಕಪೂರ್​​ ಒಮಿಕ್ರಾನ್​ ವರದಿ ನೆಗೆಟಿವ್​​ ಬಂದಿದ್ದು, ಇದರಿಂದ ನಟಿ ನಿಟ್ಟುಸಿರು ಬಿಟ್ಟಿದ್ದಾರೆ.

ಡಿಸೆಂಬರ್​​​ ತಿಂಗಳಲ್ಲಿ ಪಾರ್ಟಿವೊಂದರಲ್ಲಿ ಭಾಗಿಯಾಗಿದ್ದ ಕರೀನಾ ಕಪೂರ್ ಹಾಗೂ ಆಕೆಯ ಸ್ನೇಹಿತೆ ಅಮೃತಾ ಅರೋರಾ ಕೊರೊನಾ ದೃಢಗೊಂಡಿತ್ತು. ಹೀಗಾಗಿ ಅವರನ್ನ ಕ್ವಾರಂಟೈನ್​​ ಮಾಡಿ, ಅವರು ವಾಸವಾಗಿದ್ದ ನಾಲ್ಕು ಕಟ್ಟಡಗಳನ್ನ ಸೀಲ್​ಡೌನ್ ಮಾಡಲಾಗಿತ್ತು.

ಇದನ್ನೂ ಓದಿರಿ:ದೇಶದಲ್ಲಿ 358 ಒಮಿಕ್ರಾನ್​​ ಕೇಸ್​​ಗಳಲ್ಲಿ 114 ಜನರು ಗುಣಮುಖ: ಕೇಂದ್ರ ಆರೋಗ್ಯ ಇಲಾಖೆ

ಕ್ವಾರಂಟೈನ್​ಗೊಳಗಾಗಿದ್ದ ನಟಿ ಕರೀನಾ ಹಾಗೂ ಆಕೆಯ ಸ್ನೇಹಿತೆಗೆ ಜೀನೋಮ್​ ಸಿಕ್ವೆನ್ಸಿಂಗ್​ ಪರೀಕ್ಷೆಗೊಳಪಡಿಸಲಾಗಿದ್ದು, ಅದರ ವರದಿ ಇದೀಗ ಬಂದಿದೆ. ಈ ಪ್ರಕಾರ ಒಮಿಕ್ರಾನ್​​ ಸೋಂಕು ಪತ್ತೆಯಾಗಿಲ್ಲ ಎಂದು ಬೃಹನ್​ ಮುಂಬೈ ಕಾರ್ಪೊರೇಷನ್​​​​​ ಮಾಹಿತಿ ನೀಡಿದೆ. ಕಳೆದ 13 ದಿನಗಳಿಂದ ಕ್ವಾರಂಟೈನ್​ನಲ್ಲಿರುವ ನಟಿ ಇದೀಗ ಕೋವಿಡ್​ನಿಂದ ಚೇತರಿಸಿಕೊಳ್ಳುತ್ತಿದ್ದು, ಇದರ ಬೆನ್ನಲ್ಲೇ ಒಮಿಕ್ರಾನ್​​ ನೆಗೆಟಿವ್​ ವರದಿ ಬಂದಿರುವುದು ನಿಟ್ಟುಸಿರು ಬಿಡುವಂತೆ ಮಾಡಿದೆ.

ಕೊರೊನಾ ಸೋಂಕು ತಗುಲಿದ್ದ ವೇಳೆ ನಿಯಮ ಉಲ್ಲಂಘನೆ ಮಾಡಿದ ಆರೋಪಕ್ಕೊಳಗಾಗಿದ್ದ ನಟಿಯನ್ನ ಬೃಹನ್​ ಮುಂಬೈ ಕಾರ್ಪೊರೇಷನ್​​​​​ ತರಾಟೆಗೆ ತೆಗೆದುಕೊಂಡಿರುವ ಘಟನೆ ಸಹ ನಡೆದಿತ್ತು.

ABOUT THE AUTHOR

...view details