ಕರ್ನಾಟಕ

karnataka

ETV Bharat / sitara

ಬೆಳ್ಳಿತೆರೆಗೆ ಬರ್ತಾನಾ ಸೈಫೀನಾ ಪುತ್ರ ತೈಮೂರ್? ಅಭಿಮಾನಿಗಳಲ್ಲಿ ಭಾರಿ ಕುತೂಹಲ! - news kannada

ಬಾಲಿವುಡ್‌ ಜೋಡಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಅವರ ಮುದ್ದಿನ ಮಗ ತೈಮೂರ್ ಅಲಿ ಖಾನ್ ಇದೀಗ ಬಾಲಿವುಡ್​ಗೆ​ ಪದಾರ್ಪಣೆ ಮಾಡಲಿದ್ದಾನಂತೆ. ಇಂಥದ್ದೊಂದು ಗಾಸಿಪ್ ಸುದ್ದಿಗೆ ಕರೀನಾ ಕಪೂರ್ ಉತ್ತರ ನೀಡಿದ್ದಾರೆ.

ಸಂಗ್ರಹ ಚಿತ್ರ

By

Published : Jun 6, 2019, 3:57 PM IST

ತನ್ನ ತುಂಟತನದಿಂದ ಸೋಷಿಯಲ್​ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೆಟ್​ ಮಾಡಿದ ಮುದ್ದು ಪುಟಾಣಿ ತೈಮೂರ್,​ ತಾಯಿ ಕರೀನಾ ಕಪೂರ್ ಜೊತೆ ಮೊದಲ ಬಾರಿಗೆ ಪರದೆ ಹಂಚಿಕೊಳ್ಳಲಿದ್ದಾನಂತೆ. ಹೀಗೊಂದು ಬಿಸಿ ಬಿಸಿ ಸುದ್ದಿ ಬಾಲಿವುಡ್​ ಜಗತ್ತಿನಲ್ಲಿ ಹರಿದಾಡುತ್ತಿದೆ. ತೈಮೂರ್ ಅಲಿ ಖಾನ್​, ಚೊಚ್ಚಲ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾನೆಯೇ ಎಂಬ ಪ್ರಶ್ನೆಗೆ ತಾಯಿ ಕರೀನಾ ಕಪೂರ್​ ಸಂದರ್ಶನವೊಂದರಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.

ಸಂದರ್ಶನದಲ್ಲಿ ಮಾತನಾಡುತ್ತಾ ತೈಮೂರ್​ ಬಾಲಿವುಡ್​ಗೆ​ ಪದಾರ್ಪಣೆ ಮಾಡುವುದನ್ನು ಕರೀನಾ ಅಲ್ಲಗಳೆದಿದ್ದಾರೆ. ಎಲ್ಲವೂ ಸರಿಯಾಗಿದೆ. ಆದ್ರೆ, ಅವನೇಕೆ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಪ್ರಶ್ನೆ ಹಾಕಿದ್ದಾರೆ. ಹಾಗಾಗಿ ಇದು ತೈಮೂರ್​ನ ಕಾಳಜಿಯಿಂದ ಹೇಳಿದ ಮಾತೇ ಅಥವಾ ಸಿನಿಮಾ ಪ್ರಪಂಚ ಸಾಕೇ ಎಂಬ ಬಗ್ಗೆ ಅವರು ದ್ವಂದ್ವಾರ್ಥ​ದ ಹೇಳಿಕೆ ಕೊಟ್ಟಿದ್ದಾರೆ. ತೈಮೂರ್​ ಕ್ಯಾಮರಾ ಮುಂದೆ ಬರುವುದಕ್ಕೆ ಅಭಿಮಾನಿಗಳು ಕಾತರರಾಗಿದ್ದಾರೆ. ಇದರಲ್ಲಿ ಅವರ ತಪ್ಪೇನು ಇಲ್ಲ. ಇದು ಸಹಜ ಎಂದಿರುವ ಕರೀನಾ ತಮ್ಮ ಮುಂದಿನ ಚಿತ್ರದ ಬಗ್ಗೆಯೂ ಉತ್ಸುಕತೆ ತೋರಿಸಿದ್ದಾರೆ.

'ಕಿಲಾಡಿ' ಖ್ಯಾತಿಯ ಅಕ್ಷಯ್​ ಕುಮಾರ್​ ನಟನೆಯ 'ಗುಡ್​ ನ್ಯೂಸ್'​ ಎಂಬ ಚಿತ್ರದಲ್ಲಿ ಕರೀನಾ ಬಹಳ ದಿನಗಳ ನಂತರ ಮತ್ತೆ ಬೆಳ್ಳಿತೆರೆಗೆ ಮರಳಿದ್ದು ಚಿತ್ರ ಈ ವರ್ಷ ಬಿಡುಗಡೆಯಾಗಲಿದೆಯಂತೆ.

ABOUT THE AUTHOR

...view details