ಕಾರವಾರ:ಉತ್ತರಕನ್ನಡ ಜಿಲ್ಲೆಯ ಸಾಫ್ಟ್‌ವೇರ್ ಎಂಜಿನಿಯರ್ ಮಾಡಿದ ಕನ್ನಡ ರ‍್ಯಾಪ್ ಸಾಂಗ್ ಸಖತ್ ಸದ್ದು ಮಾಡುತ್ತಿದೆ. ಎಲ್ಲರ ಮೊಬೈಲ್ ಸ್ಟೇಟಸ್ಗಳಲ್ಲಿಯೂ ಕಾಣಿಸಿಕೊಂಡು ಹವಾ ಸೃಷ್ಟಿಸಿದೆ.
ಕಾರವಾರ ತಾಲೂಕಿನ ಗುನಗಿವಾಡದ ಶ್ರೀಗಣೇಶ್ ಗುನಗಿ, ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರೇ ಬರೆದು ಹಾಡಿರುವ 'ಶೈನ್ ಲೈಕ್ ಅ ರೇನ್ಬೋ' ಹಾಡು ಇದೀಗ ಸಖತ್ ಹಿಟ್ ಆಗಿದೆ.
ಕಾರವಾರದಲ್ಲಿ ಪ್ರೌಢ ಶಿಕ್ಷಣ, ಮುರುಡೇಶ್ವರದಲ್ಲಿ ಡಿಪ್ಲೊಮಾ ಹಾಗೂ ತುಮಕೂರಿನ ಸಿದ್ಧಗಂಗಾದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರುವ ಶ್ರೀಗಣೇಶ್, ರ‍್ಯಾಪ್ ಸಾಂಗ್ ಬರೆಯುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ಈಗಾಗಲೇ 4 ಹಾಡುಗಳನ್ನು ಬರೆದು ತಮ್ಮ 'ಶ್ರೀ' ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: ಸಿಎಂ ಯೋಗಿ ಅದಿತ್ಯನಾಥ್, ದೇವೇಂದ್ರ ತಿವಾರಿಗೆ ಜೀವ ಬೆದರಿಕೆ: ಹೆಸರು ವಿಳಾಸ ಸಮೇತ ಪತ್ರ ಕಳುಹಿಸಿದ ಭೂಪ
ಇದೀಗ ಶೈನ್ ಲೈಕ್ ಅ ರೈನ್ಬೋ ಹಾಡಿನಲ್ಲಿ ನಟಿಸಿರುವ ಶ್ರೀಗಣೇಶ್, ಖುದ್ದು ತಾವೇ ಸಾಹಿತ್ಯ ಬರೆದು ಹಾಡಿ, ನಿರ್ಮಾಣ ಮಾಡಿದ್ದಾರೆ. ಕಾರವಾರದ ಕೋಡಿಬಾಗದ ಅಭಿಜಿತ್ ನಾಯ್ಕ್ ತಮ್ಮ 'ಮೈನ್ಸ್ ಟೆಲ್ಲರ್' ಬ್ಯಾನರ್ ಅಡಿ ಈ ಹಾಡಿಗೆ ಸಂಗೀತ ನೀಡಿದ್ದಾರೆ. ಲಿಯೋನ್ ಪೆರೈರಾ, ಅಕ್ಷಯ್, ಆದಿತ್ಯಾ, ಪ್ರಜತ್, ಕಾರ್ತಿಕ್ ಶ್ರೀಗಣೇಶ್ಗೆ ಸಹಕರಿಸಿದ್ದಾರೆ.