ಬೆಂಗಳೂರು:ಮೇ 1 ಕಾರ್ಮಿಕರ ದಿನ. ಈ ದಿನವನ್ನ ದೇಶದೆಲ್ಲೆಡೆ ಕಾರ್ಮಿಕರು ಸಂಭ್ರಮದಿಂದ ಆಚರಿಸುತ್ತಿದ್ದರು. ಆದರೆ ಕೊರೊನಾ ದೇಶದ ಕಾರ್ಮಿಕರ ಸಂತೋಷವನ್ನ ಕಿತ್ತುಕೊಂಡಿದೆ.
ಕಾರ್ಮಿಕರ ದಿನವನ್ನು ಸಿನಿಮಾ ಕಾರ್ಮಿಕರಿಗೆ ಅರ್ಪಿಸಿದ ರಾಬರ್ಟ್...ಮೇಕಿಂಗ್ ವಿಡಿಯೋ ರಿಲೀಸ್ - ರಾಬರ್ಟ್
ರಾಬರ್ಟ್ ಚಿತ್ರದ ಮೇಕಿಂಗ್ ವಿಡಿಯೋ ವೊಂದನ್ನು ರಿಲೀಸ್ ಮಾಡುವ ಮೂಲಕ ರಾಬರ್ಟ್ ಚಿತ್ರತಂಡ ಕಾರ್ಮಿಕ ದಿನವನ್ನು ಸಿನಿಮಾ ಕಾರ್ಮಿಕರಿಗಾಗಿ ಸಮರ್ಪಿಸಿದೆ
ರಾಬರ್ಟ್
ಹೀಗಾಗಿ ದರ್ಶನ್ ಅಭಿನಯದ ರಾಬರ್ಟ್ ಚಿತ್ರತಂಡ ಎಲ್ಲಾ ಸಿನಿಮಾ ಕಾರ್ಮಿಕರನ್ನ ನೆನಪಿಸುವ ಕೆಲಸ ಮಾಡಿದೆ. ರಾಬರ್ಟ್ ಚಿತ್ರದಲ್ಲಿ ,ಕ್ಯಾಮೆರಾ ಹಿಂದೆ ಕೆಲಸ ಮಾಡುವ ಕಾಣದ ಕೈಗಳಿಗೆ, ಒಂದು ಮೇಕಿಂಗ್ ವಿಡಿಯೋ ಅರ್ಪಿಸಿ ಸಿನಿಮಾ ಕಾರ್ಮಿಕರಿಗೆ ಗೌರವ ಅರ್ಪಿಸಲಾಗಿದೆ.
ನಟ ದರ್ಶನ್, ಡೈರೆಕ್ಟರ್ ತರುಣ್ ಸುಧೀರ್, ಕ್ಯಾಮೆರಾ ಮನ್, ಲೈಟ್ ಬಾಯ್ಸ್, ಸೆಟ್ನಲ್ಲಿ ಕೆಲಸ ಮಾಡುವವರು, ಟ್ರಾಲಿ ಕೆಲಸ ಮಾಡುವವರು, ಪ್ರೊಡಕ್ಷನ್ ಕೆಲಸಗಾರರು, ಹೀಗೆ ಸಿನಿಮಾದ ಪ್ರತಿಯೊಂದು ವಿಭಾಗದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ, ರಾಬರ್ಟ್ ಚಿತ್ರ ತಂಡ ಈ ವಿಡಿಯೋವನ್ನ ಅರ್ಪಣೆ ಮಾಡಿದೆ.